• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೇಡಿಕೆ ಕುಸಿತ: ಟೊಯೋಟಾದಲ್ಲಿ ಮೂರೇ ವಾರ ಉದ್ಯೋಗ

By Srinath
|

ಬೆಂಗಳೂರು, ಆ.6: ಬಿಡದಿ ಬಳಿಯಿರುವ ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ಇನ್ನು ಮುಂದೆ ತನ್ನ ಉದ್ಯೋಗಿಗಳಿಗೆ ಮಾಸಿಕ ಮೂರೇ ವಾರ ಉದ್ಯೋಗ ನೀಡುವ ತೀರ್ಮಾನ ತೆಗೆದುಕೊಂಡಿದೆ.

ದೇಶದಲ್ಲಿ ಪ್ರಯಾಣಿಕ ಕಾರುಗಳ ಬೇಡಿಕೆ ಕುಂಠಿತಗೊಂಡಿರುವುದರಿಂದ ಟೊಯೋಟಾ ಕಿರ್ಲೋಸ್ಕರ್ ಕಂಪನಿ TKML ಉತ್ಪಾದಿತ ಕಾರುಗಳ ಸಂಖ್ಯೆ (inventory) ಹೆಚ್ಚಾಗುತ್ತಿರುವುದರಿಂದ ಉತ್ಪಾದನೆಗೆ ರಜೆ ಘೋಷಿಸಿದೆ. ಅಂದರೆ ಕಂಪನಿಯು ಪ್ರತಿ ತಿಂಗಳೂ 8 ದಿನಗಳ ಕಾಲ ಉತ್ಪಾದನೆಯನ್ನು ಸ್ಥಗಿತಗೊಳಿಸಿ, ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ.

'ಉತ್ಪಾದನಾ ಘಟಕದಲ್ಲಿ ಪ್ರಸ್ತುತ 3 ಸಾವಿರ ಕಾರುಗಳು ಬಿಕರಿಯಾಗದೆ ಉಳಿದಿವೆ. ಇಂತಹ ಸಂದರ್ಭದಲ್ಲಿ ಮತ್ತಷ್ಟು ಕಾರುಗಳನ್ನು ಉತ್ಪಾದಿಸಿ, inventoryಯನ್ನು ಹೆಚ್ಚಿಸಿಕೊಂಡು ಮೈಮೇಲೆ ಹಾಕಿಕೊಳ್ಳುವ ಬದಲು ಉತ್ಪಾದನೆಯನ್ನೇ ಸ್ಥಗಿತಗೊಳಿಸಲು ಕಂಪನಿ ನಿರ್ಧರಿಸಿದೆ. ಇದು ಕಳೆದ ತ್ರೈಮಾಸಿಕದಲ್ಲೇ ಆರಂಭವಾಗಿದೆ' ಎಂದು TKML ಉಪಾಧ್ಯಕ್ಷ ಶೇಖರ್ ವಿಶ್ವನಾಥನ್ ತಿಳಿಸಿದ್ದಾರೆ.

ಇದಷ್ಟೇ ಅಲ್ಲ. ಪ್ರತಿ ಶುಕ್ರವಾರ-ಶನಿವಾರವೂ ಕಡ್ಡಾಯ ರಜೆ ಇದೆ ಎಂದು ಕಂಪನಿಯ ಉದ್ಯೋಗಿ ಭದ್ರಾವತಿ ಕೀರ್ತಿ ಅಲವತ್ತುಕೊಂಡಿದ್ದಾರೆ.

ಬೆಂಗಳೂರಿನಿಂದ 35 ಕಿಮೀ ದೂರದಲ್ಲಿರುವ ಬಿಡದಿ ಟೊಯೋಟಾ ಘಟಕದಲ್ಲಿ ವಾರ್ಷಿಕ 3 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಉತ್ಪಾದಿಸಲಾಗುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 2 ಲಕ್ಷ ಉತ್ಪನ್ನಗಳು ಬಿಕರಿಯಾಗಿದ್ದವು. ಈ ವರ್ಷ ಅದಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ತಮ್ಮ ಕಾರುಗಳು ಮಾರಾಟವಾಗುವ ಲಕ್ಷಣಗಳಿವೆ.

ಕಳೆದ ನಾಲ್ಕು ತಿಂಗಳಲ್ಲಿ GM India Volkswagen, Maruti Suzuki ಮತ್ತು Tata Motors ಉತ್ಪಾದನೆಗೆ ಬ್ರೇಕ್ ಹಾಕಿದ್ದು, ವಾರಕ್ಕೆ ಆರು-ದಿನ ಮಾತ್ರವೇ ಕೆಲಸ ಮಾಡುತ್ತಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Demand dwindles Bidadi Toyota Kirloskar idles Bangalore plant 8 days in month. To avoid inventory pile-up due to dwindling demand for its passenger cars in India, Toyota Kirloskar Motor Pvt Ltd (TKML) has decided to cut output through “production holidays” up to eight days in a month at its Bidadi car plant near Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more