ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರನೌಕರರಿಗೆ ಸಿಹಿಸುದ್ದಿ: ಆಗಸ್ಟ್ ಅಂತ್ಯಕ್ಕೆ ಡಿಎ ಹೆಚ್ಚಳ

By Srinath
|
Google Oneindia Kannada News

central-govt-employees-may-get-10-percent-d-a-hike-by-august-end
ನವದೆಹಲಿ, ಆಗಸ್ಟ್ 5: ಕೇಂದ್ರ ಸರಕಾರಿ ನೌಕರರಿಗೆ ಸಿಹಿ ಸುದ್ದಿಯೊಂದಿಗೆ ಈ ವಾರ ಆರಂಭವಾಗಿದೆ. ಒಂದೆಡೆ ಒಂದೇ ಸಮನೆ ಏರುತ್ತಿರುವ ಬೆಲೆಗಳು, ಮತ್ತೊಂದೆಡೆ ಯಾರಿಗೆ ಸಾಲುತ್ತೆ ಸಂಬಳ ಎಂದು ತಮಗೆ ತಾವೇ ಮರುಗುವಂತಹ ಪರಿಸ್ಥಿತಿ.

ಇದನ್ನು ಸರಿದೂಗಿಸಲೆಂದೇ ಇದು ಜು. 1ರಿಂದಲೇ ಪೂರ್ವಾನ್ವಯಾಗುವಂತೆ ಕೇಂದ್ರ ಸರಕಾರ ತುಟ್ಟಿಭತ್ಯೆಯನ್ನು ಹೆಚ್ಚಿಸುವುದು ಖಚಿತವಾಗಿದೆ. ಇದರಿಂದ ಶ್ರಾವಣ ಮಾಸದ ಹೊಸ್ತಿಲಲ್ಲಿ 50 ಲಕ್ಷ ಕೇಂದ್ರ ಉದ್ಯೋಗಿಗಳು ಮತ್ತು 30 ಲಕ್ಷ ಪಿಂಚಣಿದಾರರ ಮೊಗದಲ್ಲಿ ಮಂದಹಾಸ ಮೂಡಿದೆ.

ಮುಂದಿನ ತಿಂಗಳು ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 10-12 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ಸೆಪ್ಟೆಂಬರಿನಿಂದ ಅನ್ವಯವಾಗುವಂತೆ ಮೂಲ ವೇತನದ ಶೇ. 80 ರಷ್ಟಿರುವ ತುಟ್ಟಿಭತ್ಯೆಯನ್ನು ಶೇ. 10- 12ರಷ್ಟು ಏರಿಸುವ ಮೂಲಕ ಶೇ. 90- 92 ಕ್ಕೆ ಮುಟ್ಟಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರದ ಈ ನಿರ್ಧಾರದಿಂದಾಗಿ 50 ಲಕ್ಷ ನೌಕರರು ಮತ್ತು 30 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ತುಟ್ಟಿಭತ್ಯೆಯನ್ನು ಶೇ. 10ರಿಂದ 12ರಷ್ಟು ಹೆಚ್ಚಿಸುವುದಕ್ಕೆ ಸಂಸದೀಯ ಮೌಲ್ಯಮಾಪನ ಸಲಹೆ ನೀಡಿದೆ.

ಆಗಸ್ಟ್ 30 ರ ನಂತರ:
ಜೂನ್ ತಿಂಗಳಿನ India Consumer Price Index for Industrial Workers (CPI-IW) ಸೂಚ್ಯಂಕ ಆಗಸ್ಟ್ 30ರಂದು ಹೊರಬಿದ್ದ ನಂತರವಷ್ಟೇ ತುಟ್ಟಿಭತ್ಯೆಯನ್ನು ನಿಖರವಾಗಿ ಎಷ್ಟು ಏರಿಸಬೇಕು ಎಂಬುದರ ಲೆಕ್ಕಾಚಾರ ನಡೆಯಲಿದೆ.

English summary
Central govt employees may get 10 per cent Dearness Allowance hike by August-end
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X