ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಫೋನ್ ಬುಕ್ ಮಾಡಿದ್ರೆ ಸಿಕ್ಕಿದ್ದು ಆಪಲ್!

By Mahesh
|
Google Oneindia Kannada News

ಮೆಲ್ಬೋರ್ನ್, ಆ.5: 21 ವರ್ಷ ವಯಸ್ಸಿನ ಆಸ್ಟ್ರೇಲಿಯಾದ ಯುವತಿಗೆ ಎಲ್ಲರಂತೆ ಆಪಲ್ ಕಂಪನಿ ಉತ್ಪನ್ನಗಳ ಮೇಲೆ ಏನೋ ಮೋಹ. ಇತ್ತೀಚೆಗೆ ಆನ್ ಲೈನ್ ನಲ್ಲಿ ಒಳ್ಳೆ ಆಫರ್ ಇದ್ದದ್ದು ಕಂಡು ಖುಷಿಯಾಗಿದ್ದಾಳೆ. ಹಿಂದೂ ಮುಂದೂ ನೋಡದೆ ಆಪಲ್ ಐಫೋನ್ ಬುಕ್ ಮಾಡಿದ್ದಾಳೆ. ಆದರೆ, ಆಮೇಲೆ ಬೆಸ್ತು ಬಿದ್ದಿದ್ದಾಳೆ.

ಪದಬಂಧ ತುಂಬಿ ವಾಚ್ ಕೊಡುತ್ತೇವೆ, ಸುಡೋಕು ತುಂಬಿ ಕಳಿಸಿ ಕೆಮೆರಾ ಕಳಿಸುತ್ತೇವೆ ಎಂಬ ಜಾಹೀರಾತುಗಳ ತಲೆ ಮೇಲೆ ಹೊಡೆದಂತೆ ಈ ಪ್ರಕರಣ ನಡೆದಿದೆ. Gumtree ಎಂಬ ವೆಬ್ ತಾಣದಲ್ಲಿ ಇದ್ದ ಜಾಹೀರಾತು ನೋಡಿ ಮರುಳಾದ ಯುವತಿ ತಕ್ಷಣವೇ ಒಂದು ಐಫೋನ್ ಬೇಕು ಎಂದು ಬುಕ್ ಮಾಡಿದ್ದಾಳೆ. ನಂತರ ಒಂದು ಏಕೆ ? ಎರಡು ಇರಲಿ ಎಂದು ಇನ್ನೊಂದು ಬುಕ್ ಮಾಡಿದ್ದಾಳೆ.

 Melbourne: Woman pays $1,200 for iPhones, gets apples
ತಕ್ಷಣವೇ ಮಹಿಳೆಯೊಬ್ಬಳು ಪ್ರತಿಕ್ರಿಯಿಸಿ ನನ್ನ ಬಳಿ ಎರಡು 'ಆಪಲ್' ಗಳು ಮಾರಾಟಕ್ಕಿವೆ ಎಂದಿದ್ದಾಳೆ. ಇಬ್ಬರು ತಮ್ಮ ತಮ್ಮ ಪರಿಚಯ ಮಾಡಿಕೊಂಡ ಮೇಲೆ ಮೆಕ್ ಡೊನಾಲ್ಡ್ಸ್ ರೆಸ್ಟೋರೆಂಟ್ ವೊಂದರಲ್ಲಿ ಭೇಟಿಯಾಗಿದ್ದಾರೆ.

ವೆಬ್ ಸೈಟ್ ನಲ್ಲಿ ಬುಕ್ ಮಾಡಿದ ಯುವತಿ ಆಕೆಗೆ 1200 ಡಾಲರ್ ನಷ್ಟು ದುಡ್ಡು ನೀಡಿದ್ದಾಳೆ. ಆಕೆ ತಕ್ಷಣವೇ ದೊಡ್ಡ ಬಾಕ್ಸ್ ಅನ್ನು ಯುವತಿಗೆ ನೀಡಿದ್ದಾಳೆ. ಬಾಕ್ಸಿನಲ್ಲಿ ಇರುವುದು ಐಫೋನ್ ಸ್ಮಾರ್ಟ್ ಫೋನ್ ಎಂದು ತಿಳಿದು ಖುಷಿ ಪಟ್ಟ ಯುವತಿ ಪರೀಕ್ಷಿಸದೆ ಆದನ್ನು ಮನೆಗೆ ತಂದಿದ್ದಾಳೆ.

ಆದರೆ, ಮನೆಗೆ ಬಂದು ನೋಡಿದರೆ ಬಾಕ್ಸಿನಲ್ಲಿ ಆಪಲ್ ಐಫೋನ್ ಬದಲು ಎರಡು ಆಪಲ್(ಸೇಬು ಹಣ್ಣು) ಇರುವುದನ್ನು ಕಂಡು ಯುವತಿ ಬೆಚ್ಚಿದ್ದಾಳೆ.

ಬ್ರಿಸ್ಬೇನ್ ನ ಅಪ್ಪರ್ ಮೌಂಟ್ ಗ್ರಾವಟ್ ನ ಕ್ರೈಂ ನಿಯಂತ್ರಕ ದಳದ ಹಿರಿಯ ಅಧಿಕಾರಿ ಜೆಸ್ ಹಾಪ್ ಕಿನ್ ಅವರು ಪ್ರಕರಣ ದಾಖಲಿಸಿಕೊಂಡು ಈ ರೀತಿ ವಂಚನೆ ಬಗ್ಗೆ ಎಚ್ಚರ ಇರುವಂತೆ ಸಾರ್ವಜನಿಕರಿಗೆ ಸೂಚಿಸಿದ್ದಾರೆ. ಆನ್ ಲೈನ್ ಶಾಪಿಂಗ್ ಕ್ರೇಜ್ ಗೆ ಬಿದ್ದು ಬೆಸ್ತು ಬೀಳಬೇಡಿ ಎಂದು ಹೇಳಿದ್ದಾರೆ. ಸಾಮಾನ್ಯ ಪ್ರಜ್ಞೆ ಬಳಸಿ ವಸ್ತುಗಳನ್ನು ಖರೀದಿಸಿ ಎಂದಿದ್ದಾರೆ ಎಂದು ಹೆರಾಲ್ಡ್ ಸನ್ ವರದಿ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವೆಬ್ ಸೈಟ್ ನಿರ್ವಾಹಕರು ನಾವು ಎಂದಿಗೂ ಗ್ರಾಹಕರನ್ನು ಈ ರೀತಿ ಭೇಟಿ ಮಾಡಿ ವಸ್ತುಗಳನ್ನು ನೀಡಿಲ್ಲ. ಇಲ್ಲಿ ಯಾರೋ ಮೋಸ ಮಾಡಿದ್ದಾರೆ. ನಾವು ಸುರಕ್ಷಿತ ವ್ಯವಹಾರವನ್ನು ಪ್ರೋತ್ಸಾಹಿಸುತ್ತೇವೆ ಎಂದಿದ್ದಾರೆ.

English summary
A 21-year-old Australian woman who was trying to buy Apple smartphones online was conned into paying $1,200 for two edible apples!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X