ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ವಿ.ನಿಲ್ದಾಣ- ಮೈಸೂರು ಮಧ್ಯೆ ಫ್ಲೈ ಬಸ್

By Srinath
|
Google Oneindia Kannada News

ಬೆಂಗಳೂರು, ಆಗಸ್ಟ್ 5: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಧಾನಿ ಬೆಂಗಳೂರಿನೊಳಕ್ಕೆ ಪ್ರವೇಶಿಸದೆ ಹೊರವಲಯದಿಂದ ನೇರವಾಗಿ ಮೈಸೂರಿಗೆ ಸಂಚರಿಸುವಂತೆ ಸದ್ಯದಲ್ಲೇ ವೋಲ್ವೋ ಲಕ್ಷುರಿ ಎಕ್ಸ್ ಪ್ರೆಸ್ ಬಸ್ಸುಗಳು (ಫ್ಲೈ ಬಸ್) ಓಡಾಡಲಿವೆ.

ಹೌದು, ರಾಜ್ಯ ಸಾರಿಗೆ ಸಂಸ್ಥೆಯು (ಕೆಎಸ್ಆರ್ ಟಿಸಿ) ಕೆಂಪೇಗೌಡ ವಿಮಾನ ನಿಲ್ದಾಣ ಮತ್ತು ಮೈಸೂರು ಮಧ್ಯೆ ಈ ಫ್ಲೈ ಬಸ್ ಸಂಚಾರವನ್ನು ಒದಗಿಸಲಿದೆ. ಇದು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ KSRTC ಕೊಡುಗೆಯಾಗಿದೆ.

volvo-ksrtc-flybus-mysore-bangalore-international-airport-aug-14

Flybusಗಳು ದಿನಂಪ್ರತಿ 2 ಟ್ರಿಪ್ ಸಂಚರಿಸಲಿವೆ. ತಾನ್ನು ತಾವು ಸಂಚರಿಸಬೇಕಾದ ವಿಮಾನಗಳ ಬಗ್ಗೆ real-time ಮಾಹಿತಿ, GPS, ಪ್ಯಾಂಟ್ರಿ, ಕೆಮಿಕಲ್ ಟಾಯ್ಲೆಟ್, ಪ್ರತಿಯೊಂದು ಆಸನಕ್ಕೂ ಒಂದೊಂದು ಟಿವಿ (70 ಚಾನೆಲುಗಳನ್ನು liveನಲ್ಲಿ ನೋಡಬಹುದು), ವೈ-ಫೈ ವ್ಯವಸ್ಥೆಗಳು ಇರುತ್ತವೆ. ಒಟ್ಟಾರೆಯಾಗಿ, ವಿಮಾನವೇರುವ ಮುನ್ನ ವಿಮಾನದಲ್ಲಿಯೇ ಸಂಚರಿಸುತ್ತಿರುವಂತಹ ಅನುಭವ ಈ ಫ್ಲೈ ಬಸ್ ನಲ್ಲಿ ಲಭ್ಯವಾಗಲಿದೆ.

August 14ರಿಂದ ಈ Flybus ಸೇವೆ ಆರಂಭವಾಗಲಿದ್ದು, ಅಡ್ವಾನ್ಸ್ ಬುಕಿಂಗ್ ಗಾಗಿ www.ksrtc.in ವೆಬ್ ಸೈಟ್ ನೋಡಬಹುದು. Make My Trip , RedBus, Via.Booking ಮೂಲಕವೂ ಇಂದಿನಿಂದ ಬುಕಿಂಗ್ ಮಾಡಿಸಬಹುದು.

'ಇದು ನಿಜಕ್ಕೂ ಜನೋಪಯೋಗಿ ಆಗಲಿದೆ. ಪ್ರಸ್ತುತ ತುರ್ತಾಗಿ ಮೈಸೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಚರಿಸಬೇಕು ಅಂದರೆ ಟ್ಯಾಕ್ಸಿ ಪ್ರಯಾಣಕ್ಕೆ 4,000 ರೂ. ಖರ್ಚಾಗುತ್ತದೆ. ಬಸ್ಸಿನಲ್ಲೇ ಪ್ರಯಾಣಿಸುತ್ತೇವೆ ಅಂದರೆ 2 ಬಸ್ಸುಗಳಲ್ಲಿ ಸಂಚರಿಸುವ ರಗಳೆ ಇದೆ. ಇದು ತಪ್ಪುತ್ತದೆ' ಎನ್ನುತ್ತಾರೆ KSRTC ವ್ಯವಸ್ಥಾಪಕ ನಿರ್ದೇಶಕ ಎನ್ ಮಂಜುನಾಥ್ ಪ್ರಸಾದ್.

English summary
Volvo KSRTC Flybus service between Mysore- Bangalore International Airport from Aug 14. Mysoreans travelling out of Bangalore airport will soon have it easier. KSRTC will launch a luxury bus service which will connect their city with BIA. The service is expected to kick off from August 14. Booking will open on August 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X