ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟಾರ್ ಬಕ್ಸ್ ಗೆ ಗೂಗಲ್ ವೈ ಫೈ ನೀಡಿದ್ದೇಕೆ?

By Mahesh
|
Google Oneindia Kannada News

Google to make Starbucks Wifi faster
ನ್ಯೂಯಾರ್ಕ್, ಆ.4: ಕಾಫಿ ಶಾಪ್ ಜೊತೆ ಇಂಟರ್ನೆಟ್ ಸೌಲಭ್ಯ ಇದು ಅಮೆರಿಕದಲ್ಲಿ ಕಂಡು ಬರುವ ಸಾಮಾನ್ಯ ಸಂಗತಿ. ಕಚೇರಿಯಲಿ ಕೆಲಸ, ಪ್ರಯಾಣದ ವೇಳೆ, ವಿರಾಮದ ವೇಳೆಯಲ್ಲಿ ಕೆಫೆಗೆ ಹೋದಾಗಲೂ ಎಲ್ಲೆಡೆ ವೈ ಫೈ ಸೌಲಭ್ಯವಿದ್ದ ಸಮಯ ಆನಂದಮಯ ಹಾಗೂ ಕಾರ್ಯಕ್ಷಮತೆ ಹೆಚ್ಚಳಕ್ಕೂ ಕಾರಣ. ಈ ನಿಟ್ಟಿನಲ್ಲಿ ಸ್ಟಾರ್ ಬಕ್ಸ್ ಜೊತೆ ಕೈ ಜೋಡಿಸಿರುವ ಗೂಗಲ್ ಉಚಿತ್ರ ವೈಫೈ ಸಂಪರ್ಕ ನೀಡುತ್ತಿದೆ.

ಅಮೆರಿಕದ ಸ್ಟಾರ್ ಬಕ್ಸ್ ಸಂಪರ್ಕದಲ್ಲಿರುವ ಸುಮಾರು 7000ಕ್ಕೂ ಅಧಿಕ ಕಂಪನಿಗಳಿಗೆ ತ್ವರಿತ ಗತಿಯಲ್ಲಿ ಉಚಿತ ವೈಫೈ ಸಂಪರ್ಕ ಒದಗಿಸಲು ಗೂಗಲ್ ಮುಂದೆ ಬಂದಿದೆ. ಮುಂದಿನ 18 ತಿಂಗಳವರೆಗೂ ಈ ಉಚಿತ ವೈಫೈ ಸೌಲಭ್ಯ ನೀಡುವುದಾಗಿ ಗೂಗಲ್ ತನ್ನ ಅಧಿಕೃತ ಬ್ಲಾಗಿನಲ್ಲಿ ಹೇಳಿಕೊಂಡಿದೆ.

ನಿಮ್ಮ ಸ್ಥಳೀಯ ಸ್ಟಾರ್ ಬಕ್ಸ್ ವೈಫ್ ಜಾಲದೊಡನೆ ಗೂಗಲ್ ಬೆರೆತರೆ, ವೆಬ್ ಲೋಕದಲ್ಲಿ 10‌x ಅಧಿಕ ವೇಗದಲ್ಲಿ ನೀವು ಜಾಲಾಡಬಹುದು ಎಂದು ಬ್ಲಾಗಿನಲ್ಲಿ ಹೇಳಲಾಗಿದೆ.ಗೂಗಲ್ ಫೈಬರ್ ಸಿಟಿಯಲ್ಲಿ ನೀವಿದ್ದರೆ ನಿಮಗೆ ಸುಮಾರು 100‌x ವೇಗದಲ್ಲಿ ನಿಮಗಎ ಅಂತರ್ಜಾಲ ಸಂಪರ್ಕ ಒದಗಿಸಲು ನಾವು ಬದ್ಧರಾಗಿದ್ದೇವೆ. ಅಂತರ್ಜಾಲ ವೇಗವಾಗಿ ವೃದ್ಧಿಯಾಗಬೇಕು ಇನ್ನಷ್ಟು ವಿಸ್ತೃತ ಜಾಲ ಹೊಂದಬೇಕು ಎಂದು ಗೂಗಲ್ ಇಚ್ಛಿಸಿದೆ.

ಸ್ಯಾಂಡಿ ಚಂಡಮಾರುತ ಅಪ್ಪಳಿಸಿದ ನಂತರ ಸ್ಟಾರ್ ಬಕ್ಸ್ ನಲ್ಲಿ ವೈಫೈ ಇಂಟರ್ನೆಟ್ ಬಳಕೆ ಹೆಚ್ಚಳ ಕಂಡಿದೆ. ವಿದ್ಯಾರ್ಥಿಗಳು ಸೇರಿದಂತೆ ನೆಟ್ಟಿಗರು ತಮ್ಮ ಕಾರ್ಯಗಳನ್ನು ಮನೆಗಿಂತ ಹೆಚ್ಚಾಗಿ ಸ್ಟಾರ್ ಬಕ್ಸ್ ನಲ್ಲಿ ಕೂತು ಮುಗಿಸುತ್ತಿದ್ದಾರೆ.

ಗೂಗಲ್ ತನ್ನ ಹೊಸ ಜಾಲವನ್ನು ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ. ಗೂಗಲ್ ಸ್ಟಾರ್ ಬಕ್ಸ್ SSID ಗೆ ಲಾಗ್ ಇನ್ ಆಗಿ ಸಂಪರ್ಕ ಹೊಂದಬಹುದು ಎಂದು ಗೂಗಲ್ ಆಕ್ಸೆಸ್ ನ ಪ್ರಧಾನ ವ್ಯವಸ್ಥಾಪಕ ಕೆವಿನ್ ಲೊ ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ಗೂಗಲ್ ಬ್ಲಾಗ್ ನಲ್ಲಿ ಓದಬಹುದು.

English summary
Coffee shop + Internet—it’s a pairing that many of us have come to rely on. Google is teaming up with Starbucks to bring faster, free WiFi connections to all 7,000 company-operated Starbucks stores in the United States over the next 18 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X