ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಟಿಗಟ್ಟಲೆ ಇನ್ಫಿ ಷೇರು ಮಾರಿದ ರೋಹಿಣಿ

By Mahesh
|
Google Oneindia Kannada News

ಬೆಂಗಳೂರು, ಆ.4: ಇನ್ಫೋಸಿಸ್ ನ ಸಹ ಸಂಸ್ಥಾಪಕ ನಂದನ್ ನೀಲೇಕಣಿ ಅವರ ಪತ್ನಿ ರೋಹಿಣಿ ನಿಲೇಕಣಿ ಅವರು ದಾನ ಧರ್ಮಗಳಿಗಾಗಿ ತಮ್ಮ ಬಳಿ ಇದ್ದ 5.77 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಮೂಲಕ ಸಂಗ್ರಹಿಸಿದ 163.58 ಕೋಟಿಯನ್ನು ಸಮಾಜಸೇವೆಗಾಗಿ ವಿನಿಯೋಗಿಸುವುದಾಗಿ ಹೇಳಿದ್ದಾರೆ.

ರೋಹಿಣಿ ನೀಲೇಕಣಿ ಜು.16ರಿಂದ 19ರ ನಡುವೆ ಷೇರುಗಳನ್ನು [ಒಟ್ಟು ಮೊತ್ತ 163,51,83,925 ರು] ಮಾರಾಟ ಮಾಡಿದ್ದಾರೆ. ಇದರಿಂದಾಗಿ ಇನ್ನು ಮುಂದೆ ಇನ್ಫೋಸಿಸ್ ನಲ್ಲಿ ರೋಹಿಣಿ ಅವರು ಹೊಂದಿರುವ ಷೇರುಗಳ ಪ್ರಮಾಣ ಶೇ. 1.31ಕ್ಕೆ ಕುಸಿದಿದೆ.

Rohini Nilekani sells Infosys shares for philanthropic work

ಕಳೆದ ಹಲವು ವರ್ಷಗಳಿಂದ ಶಿಕ್ಷಣ, ನೀರು, ಪರಿಸರ ಮತ್ತು ಆಡಳಿತ ಕ್ಷೇತ್ರದ ಬೆಳವಣಿಗೆಗೆ ದಾನ ನೀಡುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಈ ಷೇರುಗಳನ್ನು ಮಾರಾಟ ಮಾಡುತ್ತಿರುವುದಾಗಿ ರೋಹಿಣಿ ನೀಲೇಕಣಿ ಅವರು ಬಿಎಸ್ ಇಗೆ ತಿಳಿಸಿದ್ದಾರೆ.

ಷೇರುಗಳ ಮಾರಾಟ ನಂತರ ರೋಹಿಣಿ ಅವರ ಬಳಿ ಇರುವ ಷೇರುಗಳ ಪ್ರಮಾಣ ಶೇ 1.31ರಷ್ಟು ಅಥವಾ 75,01,174 ಷೇರುಗಳಿಗೆ ಕುಸಿದಿದೆ. ಜೂ .30ರ ಗಣತಿಯಂತೆ ರೋಹಿಣಿ ಅವರ ಬಳಿ 80,78,174 ಷೇರುಗಳಿತ್ತು.

1981ರಲ್ಲಿ ಎನ್ಆರ್ ನಾರಾಯಣ ಮೂರ್ತಿ ಜೊತೆ ನಂದನ್ ನಿಲೇಕಣಿ ಸೇರಿ 7 ಜನ ಇಂಜಿನಿಯರ್ ಗಳು ಇನ್ಫೋಸಿಸ್ ಸ್ಥಾಪಿಸಿದರು. ರೋಹಿಣಿ ಅವರು ನಂದನ್ ಅವರ ಪತ್ನಿ. ಜೂ .30ರ ಗಣತಿಯಂತೆ ನಂದನ್ ಅವರ ಬಳಿ 83.45,870 ಷೇರುಗಳಿದೆ.

ಐಐಟಿ ಕ್ವಿಜ್ ಕಾರ್ಯಕ್ರಮವೊಂದರಲ್ಲಿ ರೋಹಿಣಿ ಅವರನ್ನು ಕಂಡು ಮೆಚ್ಚಿ ನಂದನ್ ನಿಲೇಕಣಿ ಮದುವೆಯಾಗಿದ್ದರು. ದಂಪತಿಗೆ ನಿಹಾರ್ ಹಾಗೂ ಜಾಹ್ನವಿ ಎಂಬ ಮಕ್ಕಳಿದ್ದಾರೆ. ರೋಹಿಣಿ ಅವರು 'ಆರ್ಘ್ಯಂ' ಎಂಬ ಸಾರ್ವಜನಿಕ ದತ್ತಿ ಸಂಸ್ಥೆಯ ಸ್ಥಾಪಕರಾಗಿದ್ದಾರೆ. ಈ ಸಂಸ್ಥೆ ಜಲ ನಿರ್ವಹಣೆ ಹಾಗೂ ಬಡ ಶೋಷಿತ ವರ್ಗಗಳಿಗೆ ಕುಡಿಯುವ ನೀರು ಒದಗಿಸುವ ಕಾರ್ಯ ನಿರ್ವಹಿಸುತ್ತಿದೆ.

ರೋಹಿಣಿ ನಿಲೇಕಣಿ ಅವರಂತೆ ವಿಪ್ರೋ ಚೇರ್ಮನ್ ಅಜೀಂ ಪ್ರೇಮ್ ಜಿ ಅವರು ಕೂಡಾ ಇತ್ತೀಚೆಗೆ ತಮ್ಮ ಪಾಲಿನ ಆಸ್ತಿಯ ಹೆಚ್ಚು ಭಾಗ ದಾನ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
IT services major Infosys has said wife of one of its co-founder Nandan Nilekani, Rohini Nilekani has raised about Rs 163.58 crore by selling 5.77 lakh of her shares of the company for philanthropic work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X