ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಟಿಐ ತಿದ್ದುಪಡಿ : ಬೆಂಗಳೂರಲ್ಲಿ ಎಎಪಿ ಪ್ರತಿಭಟನೆ

By Prasad
|
Google Oneindia Kannada News

Protest by AAP Karnataka against dilution of RTI act
ಬೆಂಗಳೂರು, ಆ. 3 : ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಯಿಂದ ಹೊರಗಿಡುವ ಕಾನೂನು ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವುದನ್ನು ಕರ್ನಾಟಕದ ಆಮ್ ಆದ್ಮಿ ಪಾರ್ಟಿ (ಎಎಪಿ) ತೀವ್ರವಾಗಿ ಖಂಡಿಸಿದೆ. ಕೇಂದ್ರದ ನೀತಿ ವಿರೋಧಿಸುವ ಮತ್ತು ಜನರಲ್ಲಿ ಈ ಕುರಿತು ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಶನಿವಾರ, ಆ. 3ರಂದು ಸಂಜೆ 5ಕ್ಕೆ ಬೆಂಗಳೂರಿನ ಟೌನ್ ಹಾಲ್ ಎದುರುಗಡೆ ಭಾರೀ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಹಿತಿ ಹಕ್ಕು ಕಾಯ್ದೆ 2005 ಕಲಂ-2 ಮತ್ತು ಜನತಾ ಪ್ರತಿನಿದಿ ಕಾಯ್ದೆ 1951ರ ಕಲಂ-8(4) ಅನ್ನು ಇತ್ತೀಚಿನ CEC (ಕೇಂದ್ರ ಮಾಹಿತಿ ಆಯೋಗ) ಮತ್ತು ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶಗಳ ಪರಿಣಾಮವನ್ನು ತಡೆಯಲು ಮತ್ತು ಈ ಕಾಯ್ದೆಗಳಿಂದ ತನ್ನನ್ನು ತಾನು ದೂರವಿಡಲು, ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿದ್ದು ಆಮ್ ಆದ್ಮಿ ಪಾರ್ಟಿ (AAP) ಕರ್ನಾಟಕ ವಿರೋಧಿಸುತ್ತದೆ. ಎಲ್ಲಾ ರಾಷ್ಟ್ರೀಯ ಪಕ್ಷಗಳು ಇದಕ್ಕೆ ಸಮ್ಮತಿ ಸೂಚಿಸಿರುವುದು ನಿಜಕ್ಕೂ ದುರಂತ.

ದಿನಾಂಕ 1-8-2013 ರಂದು ನಡೆದ ಸರ್ವಪಕ್ಷ ಸಭೆಯಲ್ಲಿ ತಿದ್ದುಪಡಿಗೆ ಎಲ್ಲ ಪಕ್ಷಗಳು ಭೇದ ಮರೆತು ತಿದ್ದುಪಡೆಯನ್ನು ಬೆಂಬಲಿಸಿರುವುದು ದೇಶದ ಭ್ರಷ್ಟ ವ್ಯವಸ್ಥೆಗೆ ಪಕ್ಷಗಳು ಎಷ್ಟರಮಟ್ಟಿಗೆ ಬದ್ಧ ಮತ್ತು ಗಂಭೀರವಾಗಿದೆ ಎಂಬುದನ್ನು ತೋರಿಸುತ್ತದೆ. ಇಂತಹ ತಿದ್ದುಪಡಿಗಳು ಭಾರತದ ಹಿಂದಿನ ರಾಜಕೀಯ ವ್ಯವಸ್ಥೆಗೆ ಪ್ರತಿಕೂಲವಾಗಿದ್ದು, ಇದರಿಂದ ಪ್ರಸ್ತುತ ವ್ಯವಸ್ಥೆಯಲ್ಲಿ ಭ್ರಷ್ಟತೆಗೆ ಸಮ್ಮತಿ ಮತ್ತು ಉತ್ತೇಜನ ನೀಡಿದಂತಾಗಿದೆ.

ಇದರ ವಿರುದ್ದ ಜನತೆ ಎಚ್ಚೆತ್ತು ಇದನ್ನು ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ. AAP ಕರ್ನಾಟಕವು ತನ್ನ ಅಂತರ್ಜಾಲದಲ್ಲಿ ತಮ್ಮೆಲ್ಲ ಮಾಹಿತಿಗಳನ್ನು ಈಗಾಗಲೇ ಸಾರ್ವಜನಿಕರ ವೀಕ್ಷಣೆಗೆ ಇರಿಸಿದೆ. ಪ್ರಜಾಪ್ರತಿನಿಧಿ ಕಾಯ್ದೆಗೆ ಒಳಪಟ್ಟು, ಯಾವುದೇ ಅಪರಾಧಿಗಳಿಗೆ ಪಕ್ಷವು ಸ್ಥಾನ ಅಥವಾ ಟಿಕೆಟನ್ನು ನೀಡದೆ ಮಾದರಿಯಾಗಿದ್ದು ರಾಷ್ರೀಯ ಪಕ್ಷಗಳು ತಿದ್ದುಪಡೆಗೆ ನೀಡುತ್ತಿರುವ ಕಾರಣಗಳು ಕ್ಷುಲ್ಲಕ ಮತ್ತು ಜನತೆಯನ್ನು ವಾಸ್ತವದಿಂದ ದೂರವಿರಿಸುವ ಯತ್ನವಾಗಿದೆ.

CEC ಮತ್ತು SC ಈ ತೀರ್ಪು ಸ್ವಾಗತಿಸಿದಂತಹ ಏಕಮಾತ್ರ ಪಕ್ಷ AAPಯಾಗಿದ್ದು ಸಮಾಜಿಕ ಹಿತಾಸಕ್ತಿಗೆ ಮತ್ತು ಭ್ರಷ್ಟ ವ್ಯವಸ್ಥೆಯನ್ನು ಉತ್ತೇಜಿಸುವಂತಹ ಇಂತಹ ತಿದ್ದ್ಡುಪಡಿಗಳನ್ನು ಒಂದು ವೇಳೆ ಕೇಂದ್ರ ಸರ್ಕಾರವು ಜಾರಿಗೆ ತಂದದ್ದೆ ಆದಲ್ಲಿ AAP ಅದನ್ನು ಉಗ್ರವಾಗಿ ಖಂಡಿಸುತ್ತದೆ ಮತ್ತು ಇದರ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುವುದಾಗಿ ಕೇಂದ್ರ ಸರ್ಕಾರಕ್ಕೆ ಈ ಮೂಲಕ ಎಚ್ಚರಿಸಲಾಗುತ್ತದೆ. ಆಮ್ ಆದ್ಮಿ ಪಾರ್ಟಿಯು ಅಮಾನತಿಗೆ ಒಳಗಾಗಿರುವ ಉತ್ತರಪ್ರದೇಶದ ನಿಷ್ಟಾವಂತ IAS ಅಧಿಕಾರಿ ದುರ್ಗಾ ನಾಗಪಾಲ್ ಅವರಿಗೆ ನಮ್ಮ ಪಕ್ಷಕ್ಕೆ ಸೇರಲು ಕೋರಿಕೊಂಡಿದೆ.

English summary
Aam Aadmi Party (AAP) will be conducting a demonstration appealing all political parties to refrain from diluting the Right to Information (RTI) provision in the forthcoming monsoon session of Parliament. AAP Karnataka has organized protest in front of Town Hall on Saturday, 3rd August, 2013 at 5 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X