ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರುಣನ ಅಬ್ಬರಕ್ಕೆ ತುಂಬಿತು ಲಿಂಗನಮಕ್ಕಿ ಜಲಾಶಯ

|
Google Oneindia Kannada News

ಬೆಂಗಳೂರು, ಆ.3 : ಕರ್ನಾಟಕದಲ್ಲಿ ಈ ಬಾರಿಯ ಮುಂಗಾರು ಜನರಿಗೆ ನಿರಾಸೆ ಉಂಟು ಮಾಡದೆ ಉತ್ತಮವಾಗಿ ಮಳೆ ಸುರಿಸಿದೆ. ಜಲಾಶಯಗಳು ಅವಧಿಗೂ ಮೊದಲೇ ಭರ್ತಿಯಾಗಿವೆ. ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಲಿಂಗನಮಕ್ಕಿ ಜಲಾಶಯ ತುಂಬಲು ಕ್ಷಣಗಣನೆ ಆರಂಭಗೊಂಡಿದೆ.

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಶುಕ್ರವಾರ 1816 ಅಡಿಗಳಿಗೆ ತಲುಪಿದೆ. ಜಲಾಶಯದದ ಗರಿಷ್ಠ ಮಟ್ಟ 1819 ಅಡಿಗಳಾಗಿದ್ದು, ಡ್ಯಾಂ ಭರ್ತಿಯಾಗಲು ಕೇಲವ ಮೂರು ಅಡಿಗಳ ನೀರು ಬೇಕಾಗಿದೆ. ಜಲಾಶಯಕ್ಕೆ 1 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ.

ಮುಂಜಾಗ್ರತಾ ಕ್ರಮವಾಗಿ 11 ಗೇಟ್ ಗಳ ಮೂಲಕ 48,500 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಿಂದ ನೀರನ್ನು ನದಿಗೆ ಹರಿದು ಬಿಟ್ಟರೆ, ಜೋಗ ಜಲಪಾತ ಮೈದುಂಬುತ್ತದೆ. ಸದ್ಯ ಕೆಂಪು ನೀರಿನಿಂದ ಹೋಗ ಜಲಪಾತ ಕಂಗೊಳಿಸಿ, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಲಿಂಗನಮಕ್ಕಿ ಜಲಾಶಯ, ಕರ್ನಾಟಕದ ಬೃಹತ್‌ ಜಲ ವಿದ್ಯುತ್‌ ಯೋಜನೆಗಳಲ್ಲಿ ಒಂದಾಗಿದೆ. ಡ್ಯಾಂ ನಿರ್ಮಾಣಗೊಂಡ ನಂತರ ನಂತರ 14ನೇ ಬಾರಿಗೆ ಜಲಾಶಯ ಭರ್ತಿಯಾಗುತ್ತಿದೆ. ಕಳೆದ ವರ್ಷ ಮಳೆಯ ಕೊರತೆಯಿಂದ 1768.70 ಅಡಿ ನೀರು ಸಂಗ್ರಹವಾಗಿತ್ತು. ಈ ಬಾರಿ ಉತ್ತಮ ಮಳೆಯಿಂದಾಗಿ ಜಲಾಶಯ ಅವಧಿಗೂ ಮೊದಲೇ ಭರ್ತಿಯಾಗುತ್ತಿದೆ. (ಚಿತ್ರಗಳು : ಜಿ.ಎಸ್. ಜಯಕೃಷ್ಣ ತಲವಾಟ)

ಜಲಾಶಯದ ಕುರಿತು

ಜಲಾಶಯದ ಕುರಿತು

ಲಿಂಗಮಕ್ಕಿ ಜಲಾಶಯವನ್ನು ಶರಾವತಿ ನದಿಗೆ ಅಡ್ಡಲಾಗಿ, 1964ರಲ್ಲಿ ಕರ್ನಾಟಕ ಸರ್ಕಾರ ನಿರ್ಮಿಸಿತು. ಈ ಅಣೆಕಟ್ಟು 2.4 ಕಿ.ಮೀ. ಉದ್ದವಿದ್ದು, 1819 ಅಡಿ ಎತ್ತರವಿದೆ. 4368 ಮಿಲಿಯನ್ ಮೀಟರ್ ಕ್ಯೂಬ್ ನೀರು ಸಂಗ್ರಹ ಸಾಮರ್ಥ್ಯವನ್ನು ಜಲಾಶಯ ಹೊಂದಿದೆ.

ರಾಜ್ಯಕ್ಕೆ ವಿದ್ಯುತ್ ಒದಗಿಸುತ್ತದೆ

ರಾಜ್ಯಕ್ಕೆ ವಿದ್ಯುತ್ ಒದಗಿಸುತ್ತದೆ

ಕರ್ನಾಟಕ ರಾಜ್ಯಕ್ಕೆ ವಿದ್ಯುತ್ ಒದಗಿಸುವ ಪ್ರಮುಖ ಜಲಾಶಯಗಳಲ್ಲಿ ಲಿಂಗನಮಕ್ಕಿಯೂ ಒಂದು. ಅಣೆಕಟ್ಟೆಯಲ್ಲಿ ಮಹಾತ್ಮಾ ಗಾಂಧಿ ಜಲವಿದ್ಯುತ್ ಉತ್ಪಾದನಾ ಘಟಕದಿಂದ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ವಿದ್ಯುತ್ ಪೂರೈಕೆಯಾಗುತ್ತದೆ. ಆದ್ದರಿಂದ ಜಲಾಶಯ ತುಂಬಿದರೆ ವಿದ್ಯುತ್ ಸಮಸ್ಯೆ ಎದುರಾಗುವುದಿಲ್ಲ.

14 ನೇ ಬಾರಿ ತುಂಬುತ್ತಿದೆ

14 ನೇ ಬಾರಿ ತುಂಬುತ್ತಿದೆ

1964ರಲ್ಲಿ ಜಲಾಶಯ ನಿರ್ಮಾಣವಾದ ಬಳಿಕ ಜಲಾಶಯ 14 ನೇ ಬಾರಿ ತುಂಬುತ್ತಿದೆ. ಇದುವರೆಗೂ 1970, 1975, 1977, 1980, 1982, 1990, 1991, 1992, 1994, 2005, 2006, 2007, 2009 ರಲ್ಲಿ ಜಲಾಶಭರ್ತಿಯಾಗಿತ್ತು. ಇದೀಗ 14ನೇ ಬಾರಿ ಭರ್ತಿಯಾಗುತ್ತಿದೆ.

ಆಗಸ್ಟ್ ನಲ್ಲೇ ಜಲಾಶಯ ಭರ್ತಿ

ಆಗಸ್ಟ್ ನಲ್ಲೇ ಜಲಾಶಯ ಭರ್ತಿ

ಜಲಾಶಯ ಆಗಸ್ಟ್ ತಿಂಗಳಿನಲ್ಲಿ ತುಂಬಿ ನೀರನ್ನು ಹೊರಬಿಟ್ಟಿದ್ದು ಬಹಳ ಕಡಿಮೆ. 2009 ಜುಲೈ 6 ರಂದು ಗರಿಷ್ಠ ಮಟ್ಟ ತಲುಪಿದ ಹಿನ್ನೆಲೆಯಲ್ಲಿ ಜಲಾಶಯದ ಎಲ್ಲಾ 11 ಗೇಟನ್ನು ತೆರೆದು ರಾತ್ರಿ 10 ಸಾವಿರ ಕ್ಯೂಸೆಕ್‌ ನೀರನ್ನು ಹೊರಬಿಡಲಾಯಿತು. ಆದರೆ, ಬೆಳಗ್ಗೆ ಗೇಟುಗಳನ್ನು ಮುಚ್ಚಲಾಗಿತ್ತು.

ಒಮ್ಮೆ ಭರ್ತಿಯಾಗಿರಲಿಲ್ಲ

ಒಮ್ಮೆ ಭರ್ತಿಯಾಗಿರಲಿಲ್ಲ

2011ರಲ್ಲಿ ಜಲಾಶಯದ ನೀರಿನ ಮಟ್ಟ 1817.07 ಅಡಿ ತಲುಪಿದ ನಂತರ ಸೆಪ್ಟೆಂಬರ್ 8 ರಂದು ಮೂರು ಗೇಟುಗಳ ಮೂಲಕ 10,800 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗಿತ್ತು. ನಂತರ ಮಳೆ ಕಡಿಮೆ ಆಗಿ, ಜಲಾಶಯ ಭರ್ತಿಯಾಗಿರಲಿಲ್ಲ.

ನೀರಿನ ಮೂಲಗಳು

ನೀರಿನ ಮೂಲಗಳು

ಶರಾವತಿ ನದಿಗೆ ಅಡ್ಡಲಾಗಿ ಜಲಾಶಯವನ್ನು ಕಟ್ಟಲಾಗಿದೆ. ಆದರೆ, ನದಿಯ ನೀರು ಚಕ್ರ ಮತ್ತು ಸವಾಹಕ್ಲು ಜಲಾಶಯಗಳಲ್ಲಿಯೂ ಸಂಗ್ರಹವಾಗುತ್ತದೆ. ಈ ಎರಡೂ ಜಲಾಶಯಗಳಿಂದ ಲಿಂಗನಮಕ್ಕಿಗೆ ಸಣ್ಣ ಕಣಿವೆಯ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಲಿಂನಮಕ್ಕಿಯಲ್ಲಿ ನೀರಿನ ಕೊರತೆ ಉಂಟಾದರೆ ವಿದ್ಯುತ್ ಉತ್ಪಾದನೆಗೆ ಎರಡು ಜಲಶಾಯದಿಂದ ನೀರು ದೊರೆಯುತ್ತದೆ.(ಬೆಂಗಳೂರಿಗೆ ಲಿಂಗನಮಕ್ಕಿ ನೀರು)

ಜೋಗ ಜಗಮಗ

ಜೋಗ ಜಗಮಗ

ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿ ನೀರು ಹೊರಬಿಟ್ಟರೆ ಜೋಗ ಜಲಪಾತ ಮೈದುಂಬಿಕೊಳ್ಳುತ್ತದೆ. ಇದರಿಂದಾಗಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಸದ್ಯ ಭಾರೀ ಪ್ರಮಾಣದ ಕೆಂಪು ನೀರಿನಿಂದ ಜೋಗ ಜಲಪಾತ ಕಂಗೊಳಿಸುತ್ತಿದೆ.

English summary
Splendorous Linganamakki dam (1819 ft) constructed in 1964 across Sharavathi river in Sagar Taluk, Shimoga district is full after 4 years. All crest gates have been opened and it is a treat to watch. It is the right time to visit Jog Falls, which is just 6 KMs away from the dam. (Photos by G.S. Jayakrishna, Talawata)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X