ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಪಾವತಿ ಅತಿ ಹೆಚ್ಚು ಎಲ್ಲಿ ಗೊತ್ತಾ?

By Srinath
|
Google Oneindia Kannada News

ನವದೆಹಲಿ, ಆಗಸ್ಟ್ 3: ಭಾರತದಾದ್ಯಂತ ಆದಾಯ ತೆರಿಗೆ ಪಾವತಿ ಮೇಳಗಳು ಈಗ ಎಲ್ಲೆಡೆ ನಡೆದಿದೆ. ಅದರಲ್ಲೂ ಉದ್ಯೋಗಸ್ಥ ಮಂದಿಗೆ ಜುಲೈ ಬಂತೆಂದರೆ ಒಳಗೊಳಗೆ ಆತಂಕ ಮನೆ ಮಡುವುಗಟ್ಟುತ್ತದೆ. ಒಂದು ಕಡೆ ಆದಾಯ ತೆರಿಗೆ ಹೊರೆ ಹೆಚ್ಚಾಗಿದೆ ಎಂಬ ಸಂಕಟ ಕಾಡಿದರೆ ಮತ್ತೊಂದೆಡೆ ಆದಾಯ ತೆರಿಗೆ ರಿಟರ್ನ್ಸ್ ರಗಳೆ ಸಾಕಪ್ಪಾ ಸಾಕು ಎನಿಸುವಂತಿರುತ್ತದೆ.

ಈ ಸಂದರ್ಭದಲ್ಲಿ ಯಾವ ರಾಷ್ಟ್ರ ಗರಿಷ್ಠ ಮಟ್ಟದಲ್ಲಿ ಆದಾಯ ತೆರಿಗೆ ಕಟ್ಟಿಸಿಕೊಳ್ಳುತ್ತದೆ ಎಂಬುದರತ್ತ ಒಂದು ನೋಟ ಇಲ್ಲಿದೆ. ಸೌದಿ ಅರೇಬಿಯಾ, ಯುಎಇ, ಕುವೈಟ್ ನಂತಹ ದೇಶಗಳಲ್ಲಿ ಆದಾಯ ತೆರಿಗೆ ಕಟ್ಟುವ ಮಾತೇ ಇಲ್ಲ. ಅಲ್ಲಿನ ಜನ ಅಷ್ಟರಮಟ್ಟಿಗೆ ನಿರಾಳ.

ಇನ್ನು ಭಾರತದಲ್ಲಿ ಗರಿಷ್ಠ ಶೇ. 40ರಷ್ಟು ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ. ಅದೊಂದೇ ಆಗಿದ್ದರೆ ಹೇಗೋ ಕಟ್ಗಟಿ ಸುಮ್ಮನಾಗಬಹುದಿತ್ತು. ಆದರೆ ಅದರ ಜತೆಗೆ ಇನ್ನೂ ಯಾವುದೆಲ್ಲಾ ತೆರಿಗೆಗಳನ್ನು ಕಟ್ಟುತ್ತಿದ್ದೀರಿ ಎಂಬುದನ್ನು ನೋಡಿದರೆ ಎದೆ ಧಸಕ್ಕೆನ್ನುತ್ತದೆ. ಇದು ನೇರವಾಗಿ ದೇಶದ ಶ್ರೇಯೋಭಿವೃದ್ಧಿಗೆ ಸಲ್ಲುವಂತಾದರೆ ತೆರಿಗೆ ಕಟ್ಟಲು ಯಾರದೇನೂ ಕೊಂಕು ಇಲ್ಲ. ಆದರೆ ನಾವು ಕಟ್ಟುವ ತೆರಿಗೆ ಹಣವನ್ನೆಲ್ಲ ಅಪಾತ್ರರು ದಕ್ಕಿಸಿಕೊಳ್ಳುತ್ತಿದ್ದಾರೆ ಎಂಬುದು ತಿಳಿದಾಗ ಸಂಕಟ ಹೆಚ್ಚಾಗುತ್ತದೆ.

ಆದಾಯ ತೆರಿಗೆ ಜತೆಗೆ ವ್ಯಾಟ್/ ಸೇಲ್ಸ್ ಟ್ಯಾಕ್ಸ್, ಅಕ್ಟ್ರಾಯ್, ಸೇವಾ ತೆರಿಗೆ, ಸೆಸ್ ಅದೂ ಇದೂ ಅಂತ ಇನ್ನೂ ಇನ್ನೂ... ಇದೆ. ಇದೆಲ್ಲಾ ಸೇರಿದರೆ ಆದಾಯದಲ್ಲಿ ಶೇ. 50ರಷ್ಟನ್ನು ತೆರಿಗೆ ರೂಪದಲ್ಲಿ ಸರಕಾರಕ್ಕೆ ಪಾವತಿಸಬೇಕಾದ ಅನಿವಾರ್ಯತೆಯಲ್ಲಿದ್ದೇವೆ. ಬನ್ನಿ ಯಾವೆಲ್ಲಾ ದೇಶಗಳು ಯಾವ ಪ್ರಮಾಣದಲ್ಲಿ ಆದಾಯ ತೆರಿಗೆಗಳನ್ನು ಕಟ್ಟುತ್ತಿದೆ, ಲೆಕ್ಕಾಚಾರ ಹಾಕಿನೋಡೋಣ.

India

India

ಭಾರತ
ಗರಿಷ್ಠಮಟ್ಟದ ಆದಾಯ ತೆರಿಗೆ - ಶೇ. 30ರಷ್ಟು.
ಆದರೆ ಇತರೆ ಕೆಲ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಇದು ಕಡಿಮೆಯೇ. ಕೆಲವು ರಾಷ್ಟ್ರಗಳು ಶೇ. 50ರಷ್ಟು ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

 Aruba - Rank 1

Aruba - Rank 1

ಅರುಬಾ ರಾಷ್ಟ್ರ
ಗರಿಷ್ಠಮಟ್ಟದ ಆದಾಯ ತೆರಿಗೆ - ಶೇ. 59 ರಷ್ಟು.

ದಕ್ಷಿಣ ಕೆರೇಬಿಯ ಸಮುದ್ರ ತಟದಲ್ಲಿರುವ ಅರುಬಾ ದ್ವೀಪ ರಾಷ್ಟ್ರ ಇಡೀ ಜಗತ್ತಿನಲ್ಲೇ ಅತ್ಯಧಿಕ ಆದಾಯ ತೆರಿಗೆ ಗಳಿಸುವ ರಾಷ್ಟ್ರವಾಗಿದೆ.

Sweden -Overall rank: 2

Sweden -Overall rank: 2

ಸ್ವೀಡನ್
ಗರಿಷ್ಠಮಟ್ಟದ ಆದಾಯ ತೆರಿಗೆ - ಶೇ. 56 ರಷ್ಟು.

ಸ್ವೀಡನ್ ವಾಸಿಗಳು ಮೂರು ಹಂತದಲ್ಲಿ ಆದಾಯ ತೆರಿಗೆ ತುಂಬುತ್ತಾರೆ- ಮುನ್ಸಿಪಾಲಿಟಿ, ದೇಶೀಯ ಆಡಳಿತ, ಕೇಂದ್ರ ಸರಕಾರ ಸ್ತರದಲ್ಲಿ ಮೂರು ಬಾರಿ ತೆರಿಗೆ ಪಾವತಿಸಬೇಕಾಗುತ್ತದೆ.

Denmark - Overall rank: 3

Denmark - Overall rank: 3

ಡೆನ್ಮಾರ್ಕ್
ಗರಿಷ್ಠಮಟ್ಟದ ಆದಾಯ ತೆರಿಗೆ - ಶೇ. 55 ರಷ್ಟು.
ಡೆನ್ಮಾರ್ಕ್ ದೇಶದ ನೌಕರರು ಆದಾಯ ತೆರಿಗೆ ಪಾವತಿಸುವುದಕ್ಕೂ ಮುನ್ನವೇ ಶೇ. 8ರಷ್ಟು ತೆರಿಗೆಯನ್ನು ಆರಂಭಿಕ ತೆರಿಗೆಯನ್ನಾಗಿ ಕಟ್ಟುತ್ತಾರೆ! ಇದನ್ನು gross tax ಅನ್ನುತ್ತಾರೆ. ಸ್ವಯಂ ಉದ್ಯೋಗಿಗಳೂ ಈ ತೆರಿಗೆಯನ್ನು ತುಂಬಬೇಕಾಗುತ್ತದೆ.

The Netherlands -Overall rank: 4

The Netherlands -Overall rank: 4

ನೆದರ್ ಲ್ಯಾಂಡ್ಸ್
ಗರಿಷ್ಠಮಟ್ಟದ ಆದಾಯ ತೆರಿಗೆ - ಶೇ. 52 ರಷ್ಟು.

Spain- Overall rank: 5

Spain- Overall rank: 5

ಸ್ಪೇನ್
ಗರಿಷ್ಠಮಟ್ಟದ ಆದಾಯ ತೆರಿಗೆ - ಶೇ. 52 ರಷ್ಟು.

Finland - Overall rank: 6

Finland - Overall rank: 6

ಫಿನ್ ಲ್ಯಾಂಡ್
ಗರಿಷ್ಠಮಟ್ಟದ ಆದಾಯ ತೆರಿಗೆ - ಶೇ. 51 ರಷ್ಟು.

Japan - Overall rank: 8

Japan - Overall rank: 8

ಜಪಾನ್
ಗರಿಷ್ಠಮಟ್ಟದ ಆದಾಯ ತೆರಿಗೆ - ಶೇ. 50 ರಷ್ಟು.

ಆಸ್ಟ್ರೇಲಿಯಾ-ಚೀನಾ-ಇಂಗ್ಲೆಂಡ್-ಜರ್ಮನಿಯಲ್ಲಿ ಶೇ. 45

ಆಸ್ಟ್ರೇಲಿಯಾ-ಚೀನಾ-ಇಂಗ್ಲೆಂಡ್-ಜರ್ಮನಿಯಲ್ಲಿ ಶೇ. 45

ದಕ್ಷಿಣ ಆಫ್ರಿಕಾದಲ್ಲಿ ಶೇ. 40, ಇಟಲಿಯಲ್ಲಿ ಶೇ. 43, ಆಸ್ಟ್ರೇಲಿಯಾ-ಚೀನಾ-ಇಂಗ್ಲೆಂಡ್ ಮತ್ತು ಜರ್ಮನಿಯಲ್ಲಿ ಶೇ. 45, ಐಸ್ ಲ್ಯಾಂಡ್- ಜಿಂಬಾಬ್ವೆಗಳಲ್ಲಿ ಶೇ. 47. ಪೋರ್ಚುಗಲ್ - ಐರ್ಲೆಂಡ್ ನಲ್ಲಿ ಶೇ. 48, ಬೆಲ್ಜಿಯಂ-ಆಸ್ಟ್ರಿಯಾದಲ್ಲಿ ಶೇ. 50ರಷ್ಟು ಆದಾಯ ತೆರಿಗೆ ಭರ್ತಿಯಾಗುತ್ತಿದೆ.

English summary
Which country has highest income tax rate? Let's take a look at countries that have some of the highest income-tax rates. There are some countries, such as Saudi Arabia, the United Arab Emirates and Kuwait, that don't levy any income tax at all. In come Tax may be 30% only in India. But Indians is the amongs the highest tax payers. Just add up all average monthly expenses and calculate the VAT / sales tax, octroi, Service Tax etc. you will find we are paying nearly 50% of incomes as taxes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X