ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಎಫ್ ಡಿ ದರಗಳು ಏರುತ್ತಿವೆ; ಒಂದು ಕೈ ನೋಡಿ

By Srinath
|
Google Oneindia Kannada News

banks-fixed-deposit-interest-rates-raised-time-to-utilise-depositors
ಮುಂಬೈ, ಆಗಸ್ಟ್ 3: ರೂಪಾಯಿ ಅಪಮೌಲ್ಯವನ್ನು ತಡೆಗಟ್ಟಲು ಭಾರತೀಯ ರಿಸರ್ವ್ ಬ್ಯಾಂಕ್ ಹಲವು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಿಂದ ಬ್ಯಾಂಕುಗಳ ನಗದು ಪರಿಸ್ಥಿತಿ ಬಿಗಡಾಯಿಸುತ್ತಿದೆ. ಇದರಿಂದ ಪಾರಾಗಲು ನೇರವಾಗಿ ಗ್ರಾಹಕರ ಹಣದ ಮೇಲೆ ಕಣ್ಣುಹಾಕಿದೆ. ಇದು ಗ್ರಾಹಕರಿಗೆ ಲಾಭದಾಯಕವಾಗಿದೆ.

ಇದರ ಸಲುವಾಗಿ ಒಂದೊಂದೇ ಬ್ಯಾಂಕುಗಳು ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ದರಗಳನ್ನು ಏರಿಸಿದ್ದು, ಇದರಿಂದ ನಗದು ಲಭ್ಯತೆ ಹೆಚ್ಚಿಸಿಕೊಳ್ಳುವ ಮಾರ್ಗೋಪಾಯ ಕಂಡುಕೊಂಡಿದೆ- ಗ್ರಾಹಕರು ಹೆಚ್ಚಿನ ಮೊತ್ತದಲ್ಲಿ ಠೇವಣಿಯಿಡುವಂತೆ ನೋಡಿಕೊಳ್ಳುತ್ತಿದೆ.

ಈಗಾಗಲೇ ಖಾಸಗಿ ರಂಗದ ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ ಎಫ್ ಡಿ ದರಗಳನ್ನು ಶೇ. 4ರಷ್ಟು ಏರಿಸಿವೆ. ಇತರೆ ಬ್ಯಾಂಕುಗಳೂ ಇದೇ ನೀತಿಯನ್ನು ಅನುಸರಿಸುವ ಲಕ್ಷಣಗಳಿವೆ.

ದೇಶದ ಎರಡನೆಯ ಅತಿ ದೊಡ್ಡ ಕಾಸಗಿ ಬ್ಯಾಂಕ್ ಎನಿಸಿರುವ HDFC Bank 15 ದಿನಗಳಿಂದ 6 ತಿಂಗಳ ಅವಧಿಯ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ. 1 ರಷ್ಟು ಏರಿಸಿದೆ. ಇದು ಜುಲೈ 27ರಿಂದ ಜಾರಿಗೆ ಬಂದಿದೆ.

Axis Bank 14 ರಿಂದ 29 ದಿನಗಳ ಫಿಕ್ಸೆಡ್ ಡೆಪಾಸಿಟ್ ಠೇವಣಿ ದರಗಳನ್ನು ಶೇ. 8ಕ್ಕೆ ಏರಿಸಿದೆ. ಇನ್ನು, 29ರಿಂದ 1 ವರ್ಷದ ತನಕ ವಿಧ ವಿಧ ಅವಧಿಗಳ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಶೇ. 0.5 ರಿಂದ ಶೇ. 2.25ರ ತನಕ ಏರಿಸಿದೆ.

English summary
Banks Fixed Deposit interest rates raised- Time to utilise for depositors. Faced with a tight liquidity condition, two leading private sector banks - HDFC Bank and Axis Bank - have raised fixed deposit rates by up to 4 per cent, a move which may be followed by others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X