ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ವಿರುದ್ಧವಾಗಿ ಅಂತೂ ಸ್ನೋಡೆನಿಗೆ ಆಶ್ರಯ ದಕ್ಕಿತು

By Srinath
|
Google Oneindia Kannada News

ಮಾಸ್ಕೊ, ಆಗಸ್ಟ್ 2: ಅಮೆರಿಕದ ತೀವ್ರ ಎಚ್ಚರಿಕೆ/ಬೆದರಿಕೆ ನಡುವೆಯೂ ಎಡ್ವರ್ಡ್ ಸ್ನೋಡನ್‌ ಗೆ ರಷ್ಯಾ ತಾತ್ಕಾಲಿಕ ಆಶ್ರಯ ನೀಡಲು ಒಪ್ಪಿಕೊಂಡಿದೆ. ಹಾಗಾಗಿ ಅಮೆರಿಕ ಕೆಂಗಣ್ಣಿನಿಂದ ಪಾರಾಗಲು ರಷ್ಯಾದ ಗಡಿ ಸಮೀಪ ಠಿಕಾಣಿ ಹೂಡಿದ್ದ ಸ್ನೋಡನ್‌ ಮಾಸ್ಕೋದೊಳಕ್ಕೆ ಪ್ರವೇಶಿಸಲು ಸಿದ್ಧರಾಗಿದ್ದಾರೆ ಎಂದು ಸ್ನೋಡನ್ ಪರ ವಕೀಲರು ತಿಳಿಸಿದ್ದಾರೆ.

ಇಷ್ಟಕ್ಕೂ ಸ್ನೋಡನ್‌ (ಅಮೆರಿಕಕ್ಕೆ) ಮಾಡಬಾರದ್ದನ್ನು ಏನು ಮಾಡಿದ್ದರೆಂದರೆ ವಿಕಿಲೀಕ್ಸ್ ನ ಜುಲಿಯನ್ ಅಸ್ಸಾಂಜ್ (42) ಮಾದರಿ ಅಮೆರಿಕದ ಗೌಪ್ಯ ಮಾಹಿತಿಗಳನ್ನು ಬಹಿರಂಗಗೊಳಿಸಿದ್ದರು. ರಾಷ್ಟ್ರೀಯ ಭದ್ರತಾ ಸಂಸ್ಥೆಯ ಒಬ್ಬ ಮಾಜಿ ಗುತ್ತಿಗೆದಾರ ಹಾಗೂ ವಿವಿಧ ರಾಷ್ಟ್ರಗಳ ಮೇಲೆ ಅಮೆರಿಕ ನಡೆಸುತ್ತಿದ್ದ ನಿಗಾ ಕಾರ್ಯಾಚರಣೆಗಳ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದರು.

Thanks to Russia NSA Leaker Edward Snowden gets Asylum

ಸ್ನೋಡನ್ ಕಳೆದ ಒಂದು ತಿಂಗಳಿಂದ ಮಾಸ್ಕೋದ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಆಶ್ರಿತರಾಗಿ, ತಾತ್ಕಾಲಿಕ ಆಶ್ರಯಕ್ಕಾಗಿ ರಷ್ಯಾದ ಮೊರೆ ಹೋಗಿದ್ದರು. 30ರ ಹರೆಯದ ಸ್ನೋಡೆನ್‌ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಸ್ನೋಡೆನ್‌ ನನ್ನು ಗಡೀಪಾರು ಮಾಡುವಂತೆ ಅಮೆರಿಕ ರಷ್ಯಾವನ್ನು ಕೋರಿತ್ತು. ಆದರೆ ಇದೀಗ ರಷ್ಯಾ, ಅಮೆರಿಕದ ಈ ಮನವಿಯನ್ನು ತಿರಸ್ಕರಿಸುವ ಸಾಹಸ ಮಾಡಿದೆ.

ಅಂದಹಾಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಮಾಬಾ ರಷ್ಯಾದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಈ ಮಧ್ಯೆ, ಬರಾಕ್ ಒಮಾಬಾ ಮುಂದಿನ ತಿಂಗಳು ದ್ವಿಪಕ್ಷೀಯ ಬಾಂಧವ್ಯ ಸುಧಾರಣೆಗಾಗಿ ಮಾಸ್ಕೋಗೆ ಪೂರ್ವ ನಿಗದಿತ ಭೇಟಿ ನೀಡುತ್ತಿದ್ದಾರೆ.

ಇದೀಗ ಮಾಸ್ಕೋದ ಶೆರೆಮೆಟಿಯಾವೊ ವಿಮಾನ ನಿಲ್ದಾಣ ಪ್ರದೇಶವನ್ನು ಬಿಟ್ಟು ಬೇರೆಡೆಗೆ ತೆರಳಲು ಅನುಮತಿ ನೀಡುವುದರೊಂದಿಗೆ ರಷ್ಯಾ ಸರಕಾರವು ಗುರುವಾರ ಮುಂಜಾನೆ ಅವರಿಗೆ ತಾತ್ಕಾಲಿಕ ಆಶ್ರಯ ನೀಡುವುದಾಗಿ ಘೋಷಿಸಿದೆ. ಇದೇ ಸಂದರ್ಭದಲ್ಲಿ ರಷ್ಯಾದ ಅತಿ ಜನಪ್ರಿಯ ಸಾಮಾಜಿಕ ಜಾಲತಾಣ 'ವಿಕಾಂಟ್ಯಾಕ್ಟ್' ಸಹಸಂಸ್ಥಾಪಕ ಪವೆಲ್ ಡುರೊವ್, ಸ್ನೋಡನ್‌ ಗೆ ಉದ್ಯೋಗ ನೀಡುವುದಾಗಿ ಪ್ರಕಟಿಸಿದ್ದಾರೆ.

'ಸ್ನೋಡನ್ ಈಗಾಗಲೇ ಮಾಸ್ಕೊ ಶೆರೆಮೆಟಿಯಾವೊ ವಿಮಾನ ನಿಲ್ದಾಣ ವ್ಯಾಪ್ತಿಯ ಪ್ರದೇಶದಿಂದ ಹೊರಬಂದಿದ್ದಾರೆ. ರಷ್ಯಾದಲ್ಲಿ ಒಂದು ವರ್ಷದ ಅವಧಿಗೆ ಆಶ್ರಯ ನೀಡುವ ಸಂಬಂಧ ಪ್ರಮಾಣ ಪತ್ರವೊಂದನ್ನು ಅವರಿಗೆ ನೀಡಲಾಗಿದೆ' ಎಂದು ಸ್ನೋಡನ್ ಪರ ವಕೀಲ ಅನಾಟೊಲಿ ಕಚರೆನಾ ತಿಳಿಸಿದ್ದಾರೆ. ಸ್ನೋಡನ್‌ ರನ್ನು ತನಗೆ ಹಸ್ತಾಂತರಿಸುವಂತೆ ಅಮೆರಿಕವು ರಷ್ಯಾ ಸರಕಾರವನ್ನು ಒತ್ತಾಯಿಸಿತ್ತಾದರೂ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ಬೇಡಿಕೆಯನ್ನು ತಿರಸ್ಕರಿಸಿದ್ದರು.

English summary
Thanks to Russia NSA Leaker Edward Snowden gets Asylum. NSA whistleblower Edward Snowden left Moscow's international airport today for the first time six weeks and thanked Russia for granting him temporary asylum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X