ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವೀಟ್ ವಾರ್ : ನಾನ್ಯಾಕೆ ಕ್ಷಮೆ ಕೇಳಲಿ, ಶೋಭಾ ಡೇ

By Mahesh
|
Google Oneindia Kannada News

ಮುಂಬೈ, ಆ.1: ದೇಶದ 29ನೇ ರಾಜ್ಯವಾಗಿ ತೆಲಂಗಾಣ ಕಣ್ಣು ಬಿಡುತ್ತಿರುವ ವೇಳೆಗೆ ಪ್ರತ್ಯೇಕತೆಯ ಕೂಗು ದೇಶದ ವಿವಿಧ ಭಾಗಗಳಲ್ಲಿ ಕೇಳಿ ಬಂದಿದೆ. ಈ ನಡುವೆ ಜನಪ್ರಿಯ ಲೇಖಕಿ ಶೋಭಾ ಡೇ ಅವರ ಟ್ವೀಟ್ ವಿವಾದಕ್ಕೆ ಕಾರಣವಾಗಿದ್ದು, ಶಿವಸೇನೆ, ಎಂಎನ್ಎಸ್ ತಿರುಗಿಬಿದ್ದಿದೆ.

ಆದರೆ, ತಮ್ಮ ಟ್ವೀಟ್ ಗೆ ಸಮರ್ಥನೆ ನೀಡಿರುವ ಶೋಭಾ ಡೇ, ನಾನು ಯಾರಿಗೂ ಹೆದರಬೇಕಿಲ್ಲ, ಯಾರಲ್ಲೂ ಕ್ಷಮೆಯಾಚಿಸುವುದಿಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.

ಇಷ್ಟಕ್ಕೂ ಆಕೆ ಟ್ವೀಟ್ ಮಾಡಿದ್ದು ಏನು?: ಆಂಧ್ರಪ್ರದೇಶದಿಂದ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ವಿಭಜನೆಗೊಂಡಿರುವುದು ದೊಡ್ಡ ಬೆಳವಣಿಗೆ. ಇದೇ ರೀತಿ ಮಹಾರಾಷ್ಟ್ರದಿಂದ ಮುಂಬೈಯನ್ನು ಪ್ರತ್ಯೇಕಿಸಿ ಹೊಸ ರಾಜ್ಯ ಮಾಡಬಾರದೇಕೆ? ಮುಂಬೈಗೆ ತನ್ನದೇ ಆದ ಜೀವನಶೈಲಿಯಿದೆ ಹಾಗೂ ಸ್ವತಂತ್ರ ರಾಜ್ಯವಾಗುವ ಎಲ್ಲಾ ಅರ್ಹತೆಗಳಿವೆ ಎಂದು ಶೋಭಾ ಡೇ ಟ್ವೀಟ್ ಮಾಡಿದ್ದರು.

ಶೋಭಾ ಡೇ ಅವರ ವಿರುದ್ಧ ಮೊದಲು ದೂರು ದಾಖಲಿಸಬೇಕು, ಯಾರು ಈ ಶೋಭಾ? ಆಕೆ ಪೇಜ್ 3 ಸಂಪ್ರದಾಯದಂತೆ ಮಾತನಾಡುತ್ತಿದ್ದಾರೆ. ಮಹಾರಾಷ್ಟ್ರದ ಜನರ ಭಾವನೆಗಳಿಗೆ ತಕ್ಕಂತೆ ಮಾತನಾಡುತ್ತಿಲ್ಲ. ಮರಾಠಿಗರ ಸಂಸ್ಕೃತಿಯ ಅರಿವಿಲ್ಲ. ಕೂಡಲೇ ಆಕೆ ಕ್ಷಮೆಯಾಚಿಸಬೇಕೆಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಆಗ್ರಹಿಸಿದ್ದಾರೆ.

ಆದರೆ, ಶೋಭಾ ಡೇ ಸಮರ್ಥಿಸಿ ಹಲವಾರು ಮಂದಿ ಟ್ವೀಟ್ ಮಾಡಿದ್ದಾರೆ. ಒಟ್ಟಾರೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಮತ್ತೊಂದು ವಾಕ್ಸಮರಕ್ಕೆ ನಾಂದಿ ಹಾಡಲಾಗಿದೆ. ಟ್ವೀಟ್ ಪ್ರತಿ ಟ್ವೀಟ್ ಗಳ ಸ್ಯಾಂಪಲ್ ಹೆಕ್ಕಿ ನಿಮ್ಮ ಮುಂದಿಡುತ್ತಿದ್ದೇವೆ ನೋಡಿ...

ಟ್ವೀಟ್ ವಾರ್

ಟ್ವೀಟ್ ವಾರ್

ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮಾತನಾಡಿ, ಪ್ರತ್ಯೇಕ ರಾಜ್ಯ ರಚಿಸುವುದು ಡಿವೋರ್ಸ್ ಪಡೆದಷ್ಟು ಸುಲಭವಲ್ಲ ಎಂದಿದ್ದಾರೆ. ಗುರುವಾರ ಶೋಭಾ ಡೇ ಮನೆ ಮುಂದೆ ಎಂಎನ್ ಎಸ್ ಮಹಿಳಾ ಕಾರ್ಯಕರ್ತರು ಧರಣಿ ನಡೆಸಿದರು.

ನನ್ನ ಟ್ವೀಟ್ ತಿಳಿಹಾಸ್ಯದಿಂದ ಕೂಡಿದ್ದು, ರಾಜಕೀಯ ಲಾಭಕ್ಕಾಗಿ ಹೊಸ ರಾಜ್ಯ ಕಟ್ಟುವ ತಂತ್ರಕ್ಕೆ ಸವಾಲು ಹಾಕುವಂತಿದೆ. ನಾನು ಯಾವ ರಾಜ್ಯವನ್ನು ರಚಿಸಲು ಹೇಳಿಲ್ಲ. ಸುಮ್ಮನೆ ವಿವಾದ ಹುಟ್ಟಿಸಬೇಡಿ ಎಂದು ಶೋಭಾ ಪ್ರತಿಕ್ರಿಯಿಸಿದ್ದಾರೆ.

ಒಂದು ತಮಾಷೆ ಟ್ವೀಟ್

ಶೋಭಾ ಡೇ ನೀಡುವ ಹೇಳಿಕೆ ವಿವಾದಗಳ ಬಗ್ಗೆ ಬಂದ ಟ್ವೀಟ್

ವ್ಯವಸ್ಥೆ ಬಗ್ಗೆ ಬೇಸರ

ಆಡಳಿತ ವ್ಯವಸ್ಥೆ ಹದಗೆಟ್ಟಿರುವಾಗ ಶೋಭಾ ಡೇ ಬೈಯುವುದೇ ಸರಿ

ದಿಗ್ವಿಜಯ್ ಹೇಳಬಹುದಾದರೆ

ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಬೇಕಾಬಿಟ್ಟಿ ಹೇಳಿಕೆ ನೀಡಬಹುದಾದರೆ ಶೋಭಾ ಡೇ ಯಾಕೆ ಹೇಳಿಕೆ ಕೊಡಬಾರದು !

ಠಾಕ್ರೆ vs ಡೇ ವಾರ್

ರಾಜ್ ಠಾಕ್ರೆ ನೀಡಿರುವ ಡಿವೋರ್ಸ್ ಹೇಳಿಕೆಗೆ ಪ್ರತಿಯಾಗಿ ಈ ಟ್ವೀಟ್

ಮಾಧ್ಯಮಗಳ ವರದಿ

ಶೋಭಾ ಡೇ ಸಣ್ಣ ಟ್ವೀಟ್ ಬಗ್ಗೆ ಮಾಧ್ಯಮಗಳು ಈ ಪರಿ ಕವರೇಜ್ ಏಕೆ ನೀಡುತ್ತಿವೆ.

English summary
An innocuous Twitter comment by celebrity author Shobha De became the cause of a bitter backlash by two major political parties in the state in Mumbai on Wednesday. Shobha De refuses to apologize.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X