ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ ಹೋರಾಟ ಸಂಕ್ಷಿಪ್ತ ಇತಿಹಾಸ

By Mahesh
|
Google Oneindia Kannada News

ಬೆಂಗಳೂರು, ಆ.1: ಹಲವು ದಶಕಗಳ ಹೋರಾಟ, ತ್ಯಾಗ, ಬಲಿದಾನಗಳ ನಂತರ ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯಿಸಿದೆ. ತೆಲಂಗಾಣ ರಾಜ್ಯವಾಗಿ ಅಸ್ತಿತ್ವಕ್ಕೆ ಬರುವ ಮುನ್ನ ಪ್ರತಿಭಟನೆ ಕಾವು ಯುಪಿಎ ಎದುರಿಸಬೇಕಾಗಿದೆ. ತೆಲಂಗಾಣ ಹಾಗೂ ಆಂಧ್ರಪದೇಶ ಹೋರಾಟ ಇತಿಹಾಸದ ಸಂಕ್ಷಿಪ್ತ ಅವಲೋಕನ ಇಲ್ಲಿದೆ.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವಾಸದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ನಂತರ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಆಂಧ್ರ ಪ್ರದೇಶದ ವಿಭಜನೆಗೆ ಅಂಕಿತ ಹಾಕಲಾಗಿದೆ.

ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ತೆಲಂಗಾಣ ಪ್ರಾಂತ್ಯದಲ್ಲಿ ಹೈದರಾಬಾದ್ ಬಿಟ್ಟರೆ ಮಿಕ್ಕ ಭಾಗಗಳಿಗೆ ಅಂದಿನಿಂದ ಇಂದಿನವರೆಗೂ ಸರಿಯಾದ ಸ್ಥಾನ ಮಾನ ಸಿಕ್ಕಿರಲಿಲ್ಲ. ಇದಕ್ಕಾಗಿ ಹಲವು ದಶಕಗಳ ಕಾಲ ಹೋರಾಟ ನಡೆಸಬೇಕಾಯಿತು. ತೆಲಂಗಾಣ ರಾಜ್ಯದ ಬಗ್ಗೆ 10 ಸಂಗತಿಗಳನ್ನು ಇಲ್ಲಿ ಓದಿರುತ್ತೀರಿ. ಈಗ ಚಿತ್ರ ಸರಣಿಯಲ್ಲಿ ಹೋರಾಟದ ಇತಿಹಾಸ ಅವಲೋಕನ ಮಾಡಿ...

ತೆಲಂಗಾಣ ಕಥೆ

ತೆಲಂಗಾಣ ಕಥೆ

ಹೊಸ ರಾಜ್ಯ ತೆಲಂಗಾಣ (ತೆಲುಗರ ನಾಡು) ಈ ಮೊದಲು ಹೈದರಾಬಾದ್ ರಾಜ್ಯದ ಭಾಗವಾಗಿತ್ತು ಭಾರತ ಗಣರಾಜ್ಯದಲ್ಲಿ ಸೆಪ್ಟೆಂಬರ್ 17, 1948ರಲ್ಲಿ ಸೇರ್ಪಡೆಗೊಂಡಿತು.

ಮೊದಲ ಸಿಎಂ

ಮೊದಲ ಸಿಎಂ

ಎಂ.ಕೆ ವೆಲ್ಲೊಡಿ ಅವರನ್ನು ಹೈದರಾಬಾದ್ ರಾಜ್ಯ ಮುಖ್ಯಮಂತ್ರಿಯಾಗಿ ಕೇಂದ್ರ ಸರ್ಕರ 26 ಜನವರಿ 1950ರಲ್ಲಿ ನೇಮಿಸಿತು.

ಚಿತ್ರದಲ್ಲಿ : ಟಿಆರ್ ಎಸ್ ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ಹಾಗೂ ಮಾಜಿ ಕಾಂಗೆಸ್ಸಿಗ ಕೆ ಕೇಶವರಾವ್
ಚುನಾಯಿತ ಮುಖ್ಯಮಂತ್ರಿ

ಚುನಾಯಿತ ಮುಖ್ಯಮಂತ್ರಿ

1952ರಲ್ಲಿ ಬುರ್ಗಲ ರಾಮಕೃಷ್ಣರಾವ್ ಅವರು ಹೈದರಾಬಾದ್ ರಾಜ್ಯದ ಮೊದಲ ಚುನಾಯಿತ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದರು.

ಆಂಧ್ರ ಪ್ರದೇಶ ಉದಯ

ಆಂಧ್ರ ಪ್ರದೇಶ ಉದಯ

ಬ್ರಿಟಿಷರ ಅಧೀನದಲ್ಲಿ ಮದ್ರಾಸ್ ರಾಜ್ಯದ ಭಾಗವಾಗಿದ್ದ ಈ ಪ್ರದೇಶವನ್ನು ಭಾಷಾ ಆಧಾರದ ಮೇಲೆ ಆಂಧ್ರಪ್ರದೇಶವನ್ನು ರಚಿಸಲಾಯಿತು. ನವೆಂಬರ್ 1, 1953ಕ್ಕೆ ಹೊಸ ರಾಜ್ಯವಾಗಿ ಆಂಧ್ರಪ್ರದೇಶ ಉದಯವಾಯಿತು.

ಮೊದಲ ರಾಜಧಾನಿ

ಮೊದಲ ರಾಜಧಾನಿ

ಆಂಧ್ರಪ್ರದೇಶ ಸ್ಥಾಪನೆಗೆ ಕಾರಣರಾದ ಪೊಟ್ಟಿ ಶ್ರೀರಾಮುಲು ಅವರು 53 ದಿನಗಳ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿ ಹುತಾತ್ಮರಾದ ಮೇಲೆ ರಾಯಲ ಸೀಮೆ ಪ್ರಾಂತ್ಯದ ಕರ್ನೂಲ್ ನಗರವನ್ನು ಹೊಸ ರಾಜ್ಯದ ರಾಜಧಾನಿಯಾಗಿ ಘೋಷಿಸಲಾಯಿತು.

ಮೊದಲಿಂದಲೂ ಪ್ರತ್ಯೇಕತೆ ಕೂಗು

ಮೊದಲಿಂದಲೂ ಪ್ರತ್ಯೇಕತೆ ಕೂಗು

1953ರಲ್ಲಿ ಹೊಸ ರಾಜ್ಯ ಸ್ಥಾಪನೆಯಾದ ಮೇಲೂ ಪ್ರತ್ಯೇಕತೆ ಕೂಗು ಇದ್ದೇ ಇತ್ತು. ಅಂದಿನ ಹೈದರಾಬಾದ್ ಸಿಎಂ ಬಿ ರಾಮಕೃಷ್ಣರಾವ್ ಅವರು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಲೆಯಾಡಿಸಿ ಭಾಷಾ ಆಧಾರದ ಮೇಲೆ ಆಂಧ್ರಪ್ರದೇಶ ಸ್ಥಾಪನೆಗೆ ಒಪ್ಪಿಗೆ ಸೂಚಿಸಿದರು. ತೆಲಂಗಾಣ ಪ್ರಾಂತ್ಯದ ಜನರಿಗೆ ತಮ್ಮ ಅಸ್ತಿತ್ವದ ಬಗ್ಗೆ ಆಗಲೇ ಚಿಂತೆ ಶುರುವಾಯಿತು.

ತೆಲಂಗಾಣಕ್ಕೆ ಆಶ್ವಾಸನೆ

ತೆಲಂಗಾಣಕ್ಕೆ ಆಶ್ವಾಸನೆ

ಆದರೆ, ತೆಲಂಗಾಣದ ಜನರ ಆಶೋತ್ತರಗಳನ್ನು ಈಡೇರಿಸುವ ಭರವಸೆಯೊಂದಿಗೆ ನವೆಂಬರ್ 25, 1955ರಂದು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಹೊಸ ರಾಜ್ಯ ಸ್ಥಾಪನೆ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕಿತ್ತು.

ತೆಲಂಗಾಣ ಜೊತೆ ವಿಲೀನ

ತೆಲಂಗಾಣ ಜೊತೆ ವಿಲೀನ

ಹೈದರಾಬಾದ್ ರಾಜ್ಯ ಹೊಸ ರಾಜ್ಯವಾಗುವ ಮೊದಲು ತೆಲಂಗಾಣ ಹಾಗೂ ಆಂಧ್ರಪ್ರದೇಶ ವಿಲೀನ ಚರ್ಚೆ ಆರಂಭವಾಗಿತ್ತು. ಫೆಬ್ರವರಿ 20, 1956 ರಂದು ಎರಡು ಭಾಗದ ರಾಜಕೀಯ ಮುಖಂಡರ ನಡುವೆ ಭಾರಿ ಚರ್ಚೆ, ಸಂಧಾನ ನಡೆಯಿತು. ತೆಲಂಗಾಣಕ್ಕೆ ಸೂಕ್ತ ಸ್ಥಾನಮಾನದ ಭರವಸೆ ಸಿಕ್ಕ ಮೇಲೆ ಅಖಂಡ ಆಂಧ್ರಪ್ರದೇಶಕ್ಕೆ ನಾಂದಿ ಹಾಡಲಾಯಿತು.

ಮಹತ್ವದ ಒಪ್ಪಂದ

ಮಹತ್ವದ ಒಪ್ಪಂದ

ಭಾಷಾ ಆಧಾರಿತ ರಾಜ್ಯ ರೂಪಗೊಳ್ಳುವಾಗ ಬಹುತೇಕ ಎರಡು ಭಾಗಗಳಲ್ಲೂ ತೆಲುಗು ಭಾಷೆ ಪ್ರಧಾನವಾಗಿದ್ದರೂ ಪ್ರತ್ಯೇಕತೆ ಕೂಗು ಎದ್ದಿದ್ದು ವಿಶೇಷವಾಗಿತ್ತು. ಆಂಧ್ರಾ ಕೋಸ್ತಾ ಭಾಗದ ಬೇಜವಾಡದ ಗೋಪಾಲ ರೆಡ್ಡಿ ಅಂದಿನ ಸಿಎಂ ಬುರ್ಗುಲ ರಾಮಕೃಷ್ಣ ರಾವ್ ಅವರ ನಡುವೆ 'Gentlemen's Agreement' ಒಪ್ಪಂದ ಮಾಡಿಕೊಳ್ಳಲಾಯಿತು

ರಾಜ್ಯ ಮರು ಆಯೋಜನೆ ವಿಧೇಯಕ

ರಾಜ್ಯ ಮರು ಆಯೋಜನೆ ವಿಧೇಯಕ

ರಾಜ್ಯ ಮರು ಆಯೋಜನೆ ವಿಧೇಯಕದ ಪ್ರಕಾರ ಹೈದರಾಬಾದ್ ರಾಜ್ಯದ ತೆಲುಗು ಭಾಷಿಕರೇ ಹೆಚ್ಚಾಗಿರುವ ಪ್ರದೇಶವನ್ನು ಮೊದಲಿಗೆ ಆಂಧ್ರಪ್ರದೇಶದೊಡನೆ ವಿಲೀನಗೊಳಿಸಲಾಯಿತು.

ತೆಲಂಗಾಣ ಕೂಡಾ ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ಕೇಂದ್ರ ಕಾಂಗ್ರೆಸ್ ಸರ್ಕಾರ ಅಂದುಕೊಂಡಂತೆ ಆಂಧ್ರಪ್ರದೇಶ ನವೆಂಬರ್ 1, 1956ರಂದು ಉದಯವಾಗಲು ಯಾವುದೇ ಅಡ್ಡಿ ಕಂಡು ಬರಲಿಲ್ಲ.
ಹೈದರಾಬಾದ್ ಸ್ಥಿತಿ ಗತಿ

ಹೈದರಾಬಾದ್ ಸ್ಥಿತಿ ಗತಿ

ಬ್ರಿಟಿಷರ ಕಾಲದಲ್ಲಿ ಮದ್ರಾಸ್ ರಾಜ್ಯ ನಂತರ ಹೈದರಾಬಾದ್ ರಾಜ್ಯವಾಗಿದ್ದು ನಂತರ ಆಂಧ್ರಪ್ರದೇಶವಾಯಿತು ಈಗ ತೆಲಂಗಾಣ ಹಾಗೂ ಸೀಮಾಂಧ್ರವಾಗಿಬಿಟ್ಟಿದೆ.

ನವಾಬರ ಕಾಲದ ಮುತ್ತಿನ ನಗರಿ ಹೈದರಾಬಾದ್ ರಾಜ್ಯವಾಗಿ ನಂತರ ಆಂಧ್ರಪ್ರದೇಶದ ರಾಜಧಾನಿಯಾಗಿ ಮೆರೆದಿತ್ತು.ಈಗ ತೆಲಂಗಾಣ ಹಾಗೂ ಸೀಮಾಂಧ್ರ ಉಭಯ ರಾಜ್ಯಗಳಿಗೆ 10 ವರ್ಷಗಳ ಕಾಲ ರಾಜಧಾನಿಯಾಗಲಿದೆ. ಮುಂದೆ ಕೇಂದ್ರಾಡಳಿತ ಪ್ರದೇಶವಾದರೂ ಅಚ್ಚರಿಯೇನಿಲ್ಲ.

ತೆಲಂಗಾಣದಲ್ಲಿ ಕಿಚ್ಚು

ತೆಲಂಗಾಣದಲ್ಲಿ ಕಿಚ್ಚು

1956ರಲ್ಲಿ ಮಾಡಿಕೊಂಡ ಒಪ್ಪಂದ, ತೆಲಂಗಾಣಕ್ಕೆ ಸೂಕ್ತ ಸ್ಥಾನ ಮಾನ ಭರವಸೆಗಳು ಹುಸಿಯಾದ ಮೇಲೆ ತೆಲಂಗಾಣ ಪ್ರಾಂತ್ಯದಲ್ಲಿ ಹೋರಾಟಕ ಕಿಚ್ಚು ಹೆಚ್ಚಾಯಿತು. Gentlemen's agreement ಬೆಲೆ ಕಳೆದುಕೊಂಡಿತ್ತು.1969ರಿಂದ ಪ್ರತ್ಯೇಕತೆ ಕೂಗು ಇನ್ನಷ್ಟು ಬಲವಾಗಿ ಕೇಳತೊಡಗಿತು.

ಹೊಸ ಸಮಿತಿ ರಚನೆ

ಹೊಸ ಸಮಿತಿ ರಚನೆ

ಮರ್ರಿ ಚನ್ನಾ ರೆಡ್ಡಿ ನೇತೃತ್ವದಲ್ಲಿ ತೆಲಂಗಾಣ ಪ್ರಜಾ ಸಮಿತಿ ಸ್ಥಾಪಿಸಿ ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆ ಹೋರಾಟ ತೀವ್ರಗೊಳಿಸಲಾಯಿತು.

ವಿದ್ಯಾರ್ಥಿಗಳ ಬಲಿ

ವಿದ್ಯಾರ್ಥಿಗಳ ಬಲಿ

ಹೈದರಾಬಾದ್ ಸೇರಿದಂತೆ ರಾಜ್ಯದ ಹಲವೆಡೆ ಇರುವ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳು ಪ್ರತ್ಯೇಕ ರಾಜ್ಯ ಚಳವಳಿಗೆ ಧುಮುಕಿದರು. ಪೊಲೀಸರು ನಡೆದ ಗುಂಡಿನ ದಾಳಿಗೆ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಬಲಿಯಾಗಿದ್ದರು.

ಚಿತ್ರದಲ್ಲಿ : ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತೆಲಂಗಾಣ ರಾಜ್ಯ ಘೋಷಣೆ ನಂತರ ಸಂಭ್ರಮಾಚರಣೆಯಲ್ಲಿ
ಇಂದಿರಾ ಗಾಂಧಿ ಸೂತ್ರ

ಇಂದಿರಾ ಗಾಂಧಿ ಸೂತ್ರ

ಪ್ರತಿಭಟನೆಗಳನ್ನು ಹತ್ತಿಕ್ಕಲು ಸಾಧ್ಯವಾಗದ ಕಾರಣ ಕೇಂದ್ರ ಸರ್ಕಾರ ಮಧ್ಯಪ್ರವೇಶ ಅನಿವಾರ್ಯವಾಯಿತು. ಉಭಯ ಪ್ರದೇಶಗಳ ಮುಖಂಡರನ್ನು ಕರೆಸಿಕೊಂಡು ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಮಹತ್ವದ ಮಾತುಕತೆ ನಡೆಸಿದರು.

ಸಂಧಾನ ಪ್ರಕ್ರಿಯೆ ನಂತರ ಎಂಟು ಅಂಶಗಳ ಹೊಸ ಯೋಜನೆಯನ್ನು ಇಂದಿರಾಗಾಂಧಿ ಅವರು ಏಪ್ರಿಲ್ 12, 1969ರಂದು ಪ್ರಕಟಿಸಿದರು.

ಇಂದಿರಾ ಸಂಧಾನ ವಿಫಲ

ಇಂದಿರಾ ಸಂಧಾನ ವಿಫಲ

ಆದರೆ, ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಾ ಬಂದಿದ್ದ ತೆಲಂಗಾಣ ಪ್ರಜಾ ಸಮಿತಿ ಇಂದಿರಾಗಾಂಧಿ ಅವರ ಎಂಟು ಅಂಶಗಳ ಯೋಜನೆಯನ್ನು ಸಾರಾಸಗಟಾಗಿ ತಿರಸ್ಕರಿಸಿತು.

ತಂತ್ರ ಪ್ರತಿ ತಂತ್ರ

ತಂತ್ರ ಪ್ರತಿ ತಂತ್ರ

ಪ್ರತ್ಯೇಕ ತೆಲಂಗಾಣ ಕೂಗನ್ನು ಹತ್ತಿಕ್ಕಲು 1972ರಲ್ಲಿ ಜೈ ಆಂಧ್ರ ಪ್ರದೇಶ ಚಳವಳಿಗೆ ನಾಂದಿ ಹಾಡಲಾಯಿತು. ಆಂಧ್ರ ಪ್ರದೇಶ ಹಾಗೂ ರಾಯಲಸೀಮಾ ಪ್ರಾಂತ್ಯದ ಜನರು ಆರಂಭಿಸಿದ ಈ ಚಳವಳಿ ಮುಖ್ಯ ಉದ್ದೇಶ ತೆಲಂಗಾಣ ಹೋರಾಟವನ್ನು ಹತ್ತಿಕ್ಕುವುದಾಗಿತ್ತು.

ಮತ್ತೊಂದು ಸೂತ್ರ ಸಿದ್ಧ

ಮತ್ತೊಂದು ಸೂತ್ರ ಸಿದ್ಧ

1973ರ ಸೆಪ್ಟೆಂಬರ್ 21ರಂದು ರಾಜಕೀಯ ಒಪ್ಪಂದಕ್ಕೆ ತೆಲಂಗಾಣ ಮುಖಂಡರಿಗೆ ಅಹ್ವಾನ ನೀಡಲಾಯಿತು. ಕೇಂದ್ರ ಸರ್ಕಾರ ಇಂದಿರಾ ಗಾಂಧಿ ಅವರ 8 ಅಂಶದ ಯೋಜನೆಯ ನಕಲಿಯಂತಿದ್ದ 6 ಅಂಶಗಳ ಸೂತ್ರವನ್ನು ತಯಾರಿಸಿ ಉಭಯ ಪ್ರದೇಶದ ಜನರ ಮುಂದಿಟ್ಟಿತು

ಹುಸಿಯಾದ ಹೊಸ ಸೂತ್ರ

ಹುಸಿಯಾದ ಹೊಸ ಸೂತ್ರ

ಉದ್ಯೋಗ ಭರವಸೆ, ಸಂಪನ್ಮೂಲ ಹಂಚಿಕೆ, ಸೂಕ್ತ ಸ್ಥಾನ ಮಾನ ಆಶ್ವಾಸನೆ ಎಲ್ಲವೂ 1985ರ ಹೊತ್ತಿಗೆ ಹುಸಿಯಾಯಿತು. ತೆಲಂಗಾಣ ಭಾಗದ ಅಭ್ಯರ್ಥಿಗಳಿಗೆ ಸರ್ಕಾರಿ ಕಚೇರಿಗಳಲ್ಲಿ ಸರಿಯಾದ ಉದ್ಯೋಗ ಸಿಗದೆ ಒದ್ದಾಡಿದರು. ಮತ್ತೊಮ್ಮೆ ತೆಲಂಗಾಣ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಜಗಜ್ಜಾಹೀರಾಯಿತು.

ಎನ್ಟಿಆರ್ ಭರವಸೆ

ಎನ್ಟಿಆರ್ ಭರವಸೆ

ತೆಲಂಗಾಣ ಪ್ರದೇಶದ ಜನರ ಹಿತ ಕಾಯಲು ಅಂದಿನ ತೆಲುಗುದೇಶಂ ಸರ್ಕಾರ ಹೊಸ ಆದೇಶ ಹೊರಡಿಸಿತು. ಎನ್ ಟಿ ರಾಮರಾವ್ ಅವರಿಂದ ತೆಲಂಗಾಣ ಭಾಗದ ಅಭ್ಯರ್ಥಿಗಳು ಸರ್ಕಾರಿ ಹುದ್ದೆಗಳನ್ನು ಪಡೆಯುವಂತಾಯಿತು. ಅದರೆ, ಇದು ಶಾಶ್ವರ ಪರಿಹಾರ ನೀಡುವಲ್ಲಿ ವಿಫಲವಾಯಿತು.

ಪ್ರಾದೇಶಿಕತೆಯ ಕೂಗು

ಪ್ರಾದೇಶಿಕತೆಯ ಕೂಗು

1999ರ ತನಕ ಪ್ರತ್ಯೇಕತೆ, ಪ್ರಾದೇಶಿಕ ಅಸಮತೋಲನದ ಕೂಗು ಸ್ವಲ್ಪ ಮಟ್ಟಿಗೆ ತಣ್ಣಗಾಗಿತ್ತು. ಉದ್ಯೋಗದ ಭರವಸೆ ಸಿಕ್ಕ ಮೇಲೆ ತೆಲಂಗಾಣದ ಜನರು ಸ್ವಲ್ಪ ನೆಮ್ಮದಿ ಕಂಡಿದ್ದರು.

ಕಾಂಗ್ರೆಸ್ ವಿಚಿತ್ರ ನಡೆ

ಕಾಂಗ್ರೆಸ್ ವಿಚಿತ್ರ ನಡೆ

ಆದರೆ, 1999ರಲ್ಲಿ ಸ್ವತಃ ಕಾಂಗ್ರೆಸ್ ಪಕ್ಷವೇ ತೆಲಂಗಾಣ ರಾಜ್ಯ ಪ್ರತ್ಯೇಕತೆ ಕೂಗೆಬ್ಬಿಸಿತು. ಇತಿಹಾಸವನ್ನು ಅವಲೋಕಿಸಿದರೆ ತೆಲಂಗಾಣ ರಾಜ್ಯ ಸ್ಥಾಪನೆಗೆ ಕಾಂಗ್ರೆಸ್ ಎಂದೂ ಕೂಡಾ ಬೆಂಬಲಿಸಿರಲಿಲ್ಲ. ಆದರೆ, ರಾಜಕೀಯ ಲಾಭಕ್ಕಾಗಿ ಮೊದಲ ಬಾರಿಗೆ ತೆಲಂಗಾಣ ಪರ ಕಾಂಗ್ರೆಸ್ ವಾದಿಸಿತು.

ಚುನಾವಣೆ ಮುಖ್ಯವಾಯಿತು

ಚುನಾವಣೆ ಮುಖ್ಯವಾಯಿತು

ತೆಲಂಗಾಣ ಪ್ರದೇಶದ ಅಭಿವೃದ್ಧಿಗಿಂತ ರಾಜಕೀಯ ಲಾಭ ಮುಖ್ಯವಾಯಿತು. ಚುನಾವಣೆಗಳಲ್ಲಿ ಸತತ ಸೋಲು ಕಾಂಗ್ರೆಸ್ ಪಕ್ಷವನ್ನು ಕಂಗೆಡಿಸಿತ್ತು. ತೆಲುಗುದೇಶಂ ಪಕ್ಷದ ಪ್ರಾಬಲ್ಯ ಮುರಿಯಲು ವಿಚಿತ್ರ ನಡೆ ಇಟ್ಟ ಕಾಂಗ್ರೆಸ್ ಪಕ್ಷ ಸುಮಾರು ದಶಕಗಳ ಕಾಲ ತೆಲಂಗಾಣ ರಾಜ್ಯ ಸ್ಥಾಪನೆ ಭರವಸೆ ನೀಡುತ್ತಾ ಬಂದಿತು.

ಕೆಸಿಆರ್ ಉಪವಾಸ

ಕೆಸಿಆರ್ ಉಪವಾಸ

ಕಲ್ವಕುಂಟ್ಲ ಚಂದ್ರಶೇಖರ ರಾವ್ ಅವರು ನಿರಶನ ಕೂತಮೇಲೆ ತೆಲಂಗಾಣ ಹೋರಾಟ ಮಹತ್ವದ ತಿರುವು ಪಡೆಯಿತು.

ಚಂದ್ರಬಾಬು ನಾಯ್ಡು ಅವರ ಕ್ಯಾಬಿನೆಟ್ ನಲ್ಲಿ ಸ್ಥಾನ ವಂಚಿತರಾದ ಮೇಲೆ ಪ್ರತ್ಯೇಕ ತೆಲಂಗಾಣ ರಾಜ್ಯಕಾರಿ ಕೆಸಿಆರ್ ಉಗ್ರ ಹೋರಾಟ ನಡೆಸಿದರು. ಟಿಡಿಪಿ ತೊರೆದು ತೆಲಂಗಾಣ ರಾಷ್ಟ್ರ ಸಮಿತಿ ಏಪ್ರಿಲ್ 27, 2001ರಲ್ಲಿ ಸ್ಥಾಪಿಸಲಾಯಿತು. ಆದರೆ, ಇದರ ಉದ್ದೇಶ ಈಡೇರಿದ್ದು 2013ರಲ್ಲಿ

English summary
It will take some more time to complete the formalities before the youngest state of the Indian Union, Telengana, becomes a reality in administrative terms.Following is a brief history of Andhra Pradesh and chronology of the movement for Telangana state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X