ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ರೇವ್ ಪಾರ್ಟಿ: 12 ಯುವತಿಯರ ಬಂಧನ

By Srinath
|
Google Oneindia Kannada News

rave-party-12-girls-held-for-obscenity-at-pawana-dam-mumbai
ಮುಂಬೈ, ಆಗಸ್ಟ್ 1: ವಾಣಿಜ್ಯ ನಗರಿಯ ಹೊರವಲಯದಲ್ಲಿ ಬುಧವಾರ ರಾತ್ರಿ ನಡೆಯುತ್ತಿದ್ದ ಅಶ್ಲೀಲ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದ ಪೊಲೀಸರು 12 ಯುವತಿಯರು ಸೇರಿದಂತೆ ಒಟ್ಟು 59 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಯುವತಿಯರು 20 ರಿಂದ 35 ವರ್ಷ ವಯಸ್ಸಿನವರು.

ಪವನಾ ಡ್ಯಾಂ ಹಿನ್ನೀರಿನ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗಿದ್ದ ಅಶ್ಲೀಲ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಲಾಗಿದೆ. ಬಂಧಿತರು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದು, ಅರೆನಗ್ನಾವಸ್ಥೆಯಲ್ಲಿದ್ದ ಯುವತಿಯರನ್ನು ಬಂಧಿಸಲಾಗಿದೆ ಎಂದು ಪುಣೆ ಗ್ರಾಮಾಂತರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಲೊಹಿಯಾ ಹೇಳಿದ್ದಾರೆ.

ಖಚಿತ ಸುಳಿವಿನ ಮೇರೆಗೆ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಲಾಗಿದೆ. ಪಾರ್ಟಿಯ ನಡೆಯುತ್ತಿದ್ದ ಇಡೀ ಬಂಗಲೆಯನ್ನು ಜಾಲಾಡಿದೆವು. ಯಾವುದೇ ಮಾದಕ ದ್ರವ್ಯಗಳು ಸ್ಥಳದಲ್ಲಿ ಕಂಡುಬರಲಿಲ್ಲ ಎಂದು ಎಸ್ಪಿ ಮನೋಜ್ ಕುಮಾರ್ ಹೇಳಿದ್ದಾರೆ. ಬಂಧಿತರನ್ನು ರಕ್ತ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮಾದಕ ದ್ರವ್ಯ ತೆಗೆದುಕೊಂಡಿದ್ದರೇ, ಇಲ್ವೇ ಎಂಬುದು ವರದಿಯಿಂದ ತಿಳಿದುಬರಲಿದೆ.

ರೇವ್ ಪಾರ್ಟಿಯ ಮೋಜು ಮಸ್ತಿಯಲ್ಲಿದ್ದವರು ಮುಂಬೈನ ರಿಯಲ್ ಎಸ್ಟೇಟ್ ಡೆವಲಪರ್ಸ್, ಏಜೆಂಟುಗಳು ಮತ್ತು ಉದ್ಯಮಿ/ ವ್ಯಾಪಾರಿಗಳು ಎನ್ನಲಾಗಿದೆ. ಬಂಧಿತರು ಮದ್ಯದ ಅಮಲಿನಲ್ಲಿದ್ದರು. ಬಂಗಲೆಯಲ್ಲಿ 40 ಖಾಲಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

English summary
Mumbai rave party 12 girls arrested for obscenity. The Lonavala police on Wednesday busted a party organised in a bungalow on the backwaters of Pawana Dam, and arrested 47 people, including 12 girls for obscenity. The raid was conducted following a tip-of about a suspected rave party. The revellers were indulging in obscene activities and the girls were found in a semi-nude state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X