ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ರೋ ರೈಲಿನಲ್ಲಿ ಉಚಿತ ವೈಫೈ ಸೇವೆ

|
Google Oneindia Kannada News

merto
ಬೆಂಗಳೂರು, ಆ.1 : ನಮ್ಮ ಮೆಟ್ರೋ ರೈಲು ಮತ್ತಷ್ಟು ಹೈಟೆಕ್ ಆಗಿದೆ. ಪ್ರಯಾಣಿಕರಿಗಾಗಿ ರೈಲಿನಲ್ಲಿ ಉಚಿತ ವೈಫೈ ಸೇವೆ ಒದಗಿಸಲಾಗಿದೆ. ಪ್ರಾಯೋಗಿಕವಾಗಿ ಒಂದು ರೈಲಿನಲ್ಲಿ ಇದನ್ನು ಅಳವಡಿಸಲಾಗಿದ್ದು, ಮೂರು ತಿಂಗಳಿನಲ್ಲಿ ಎಲ್ಲಾ ರೈಲಿಗಳಿಗೂ ವಿಸ್ತರಿಸಲು ಬಿಎಂಆರ್ ಸಿಎಲ್ ಯೋಜನೆ ರೂಪಿಸಿದೆ.

ಉಚಿತ ವೈಫೈ ಸೇವೆ ಸದ್ಯ, ಎಂಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ಸಂಚರಿಸುವ ಟ್ರೇನ್ ನಂ 9 ರಲ್ಲಿ ಲಭ್ಯವಿದೆ. ಸೌಲಭ್ಯದ ಕಾರ್ಯಕ್ಷಮತೆಯನ್ನು ಬಿಎಂಆರ್ ಸಿಎಲ್ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆ ಪೂರ್ಣಗೊಂಡ ಬಳಿಕ ಎಲ್ಲಾ ರೈಲುಗಳಲ್ಲಿ ವೈಫೈ ಸೇವೆ ಅಳವಡಿಸಲು ಯೋಜನೆ ರೂಪಿಸಲಾಗಿದೆ.

ಉತ್ತಮ ಸ್ಪಂದನೆ : ವೈಫೈ ಸೇವೆ ಪ್ರಾರಂಭವಾದ ನಂತರ 60 ಪ್ರಯಾಣಿಕರು ಇದನ್ನು ಬಳಸಿದ್ದಾರೆ. ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ. ಎಲ್ಲಾ ರೈಲುಗಳಿಗೂ ಸೇವೆ ವಿಸ್ತರಿಸಿದರೆ, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಲ್ಲಿ ನಮ್ಮ ಮೆಟ್ರೋ ನಿಗಮವಿದೆ.

ಲಾಗಿನ್ ಆಗುವುದು ಹೇಗೆ : ನಮ್ಮ ಮೆಟ್ರೋದಲ್ಲಿನ ಉಚಿವ ವೈಫೈ ಸೇವೆಗೆ ಲಾಗಿನ್ ಆಗಲು ನೀವು ಮೊದಲು ಬಿಎಂಆರ್ ಸಿಎಲ್ ವೈಫೈ ಸೇವೆಗೆ ಕನೆಕ್ಟ್ ಆಗಿ, ಬ್ರೌಸರ್ ಓಪನ್ ಮಾಡಿ ಅಕ್ಸ್ ಸ್ ಮಾಡಬೇಕು.

ಕ್ರಿಯೇಟ್ ಅಕೌಂಟ್ ಎಂಬ ಗುರುತಿನ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂ ನೀಡಿ, ನಿಬಂಧನೆಗಳಿಗೆ ಒಪ್ಪಿಗೆ ನೀಡಬೇಕು. ನಂತರ ನಿಮ್ಮ ಮೊಬೈಲ್ ಗೆ ಪಾಸ್ ವರ್ಡ್ ಮುಂತಾದ ಮಾಹಿತಿಗಳು ಬರುತ್ತವೆ.

ನಮ್ಮ ಮೆಟ್ರೋ ಹೊಸ ಹೊಸ ಸೇವೆಗಳನ್ನು ಪರಿಚಯಿಸಿ ಮತ್ತಷ್ಟು ಗ್ರಾಹಕ ಸ್ನೇಹಿಯಾಗಲು ಪ್ರಯತ್ನಿಸುತ್ತಿದೆ. ನೀವು ಎಂಜಿ ರಸ್ತೆ ಬೈಯಪ್ಪನಹಳ್ಳಿ ನಡುವೆ ಮೆಟ್ರೋ ರೈಲಿನಲ್ಲಿ ಓಡಾಡುತ್ತಿದ್ದರೆ, ಉಚಿತ ವೈಫೈ ಸೇವೆಯನ್ನು ಬಳಿಸಿನೋಡಬಹುದು.

English summary
The Bangalore Metro Rail Corporation (BMRCL) has introduced free Wi-Fi services on Train Set No. 9 operating between Byappanahalli and Mahatma Gandhi Road. BMRCL said, its is test and trial basis, Once the tests are successful, we will planning to introduce the same on all trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X