ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜೆಡಿಎಸ್‌ ಮುಗಿಸಲು ಹೆಗ್ಗಡೆ ಪಿತೂರಿ ಮಾಡಿದ್ದರು'

By ರಾಜೇಶ್ ಕೊಂಡಾಪುರ
|
Google Oneindia Kannada News

ಕನಕಪುರ, ಆಗಸ್ಟ್ 1: ಮೊನ್ನೆ ಎಚ್ ಡಿ ಕುಮಾರಸ್ವಾಮಿ ಅವರು 'ಸಿದ್ರಾಮಯ್ಯನವರೇ ನಿಮಗೆ ಸಿಎಂ ಪಟ್ಟ ತಪ್ಪಿಸಿದ್ದು ನಾನೇ' ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ತುಂಬಿದ ವಿಧಾನಸಭೆಯಲ್ಲಿ ಮಂಗಳವಾರ ಒಪ್ಪಿಕೊಂಡ ಬೆನ್ನಿಗೇ ಇಂದು ಪ್ರಧಾನಿ ಎಚ್ ಡಿ ದೇವೇಗೌಡರು ಜೆಡಿಎಸ್‌ ಪಕ್ಷವನ್ನು ಇತಿಹಾಸದ ಪುಟಗಳಿಗೆ ದಾಖಲಿಸಲು ಸಂಚುರೂಪಿಸಿದ ಮಾಜಿ ಮುಖ್ಯಮಂತ್ರಿಯೊಬ್ಬರ ಬಗ್ಗೆ ಲೇವಡಿ ಮಾಡಿದ್ದಾರೆ.

'ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಜೆಡಿಎಸ್‌ ಪಕ್ಷವನ್ನು ಮುಗಿಸಬೇಕು ಎಂದು ಪಿತೂರಿ ನನಡೆಸಿದ್ದರು. ಆಗ ನಾನು ಏಕಾಂಗಿಯಾಗಿ ಹೋರಾಟ ಮಾಡಿ, ಜೆಡಿಎಸ್ ಬೆಳೆಸಿ/ ಉಳಿಸಿದ್ದೇನೆ. ಈಗ ಅದನ್ನು ಬೆಳೆಸುವ ಕೆಲಸವನ್ನು ನೀವೆಲ್ಲರೂ (ಕಾರ್ಯಕರ್ತರು) ಮಾಡಬೇಕು' ಎಂದು ದೇವೇಗೌಡರು ಹೇಳಿದರು.

'ರೈತನ ಮಗ ದೇಶವನ್ನು ಆಡಳಿತ ಮಾಡಿ ತೋರಿಸಿದ್ದೇನೆ. ನನ್ನ ಆಳ್ವಿಕೆಯಲ್ಲಿ ಯಾವುದಾದರೂ ಹಗರಣಗಳು ಇದ್ದರೆ ಅದನ್ನು ವಿರೋಧ ಪಕ್ಷದವರು ಸಾಬೀತು ಮಾಡಲಿ' ಎಂದೂ ಅವರು ಇದೇ ಸಂದರ್ಭದಲ್ಲಿ ಸವಾಲು ಹಾಕಿದರು.

ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಯಾರನ್ನು ಅಭ್ಯರ್ಥಿಯನ್ನಾಗಿ ಚುನಾವಣೆ ಕಣಕ್ಕೆ ಇಳಿಸಬೇಕು ಎಂಬುದರ ಬಗ್ಗೆ ಇಲ್ಲಿನ ಕೃಷ್ಣ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಮುಖಂಡರೊಂದಿಗೆ ಪರಾಮರ್ಶೆ ನಡೆಸಿ ಮಾತನಾಡಿದ ದೇವೇಗೌಡರು, ನಾನೊಬ್ಬ ಸಾಮಾನ್ಯ ರೈತನ ಮಗ. ಆದರೆ ನಿಮ್ಮಗಳ ಆರ್ಶೀವಾದದಿಂದ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಸ್ಥಾನ ಅಲಂಕರಿಸಿದ್ದೇನೆ ಎಂದು ಹೇಳಿದರು.

ಕನಕಪುರವನ್ನು ಮಣ್ಣಿಗೆ ಹೋಗುವವರೆಗೂ ಮರೆಯುವುದಿಲ್ಲ

ಕನಕಪುರವನ್ನು ಮಣ್ಣಿಗೆ ಹೋಗುವವರೆಗೂ ಮರೆಯುವುದಿಲ್ಲ

ಕನಕಪುರ ಕ್ಷೇತ್ರ ನನಗೆ ರಾಜಕೀಯವಾಗಿ ಪುನರ್ ಜನ್ಮ ನೀಡಿದ ಕ್ಷೇತ್ರ. ಈ ಕ್ಷೇತ್ರವನ್ನು ನಾನು ಮಣ್ಣಿಗೆ ಹೋಗುವವರೆಗೂ ಮರೆಯುವುದಿಲ್ಲ ಎಂದು 'ಮಣ್ಣಿನ ಮಗ' ಖ್ಯಾತಿಯ ಎಚ್ ಡಿ ದೇವೇಗೌಡರು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಮೇಲೆ ವಾಗ್ದಾಳಿ

ಸಿಎಂ ಸಿದ್ದರಾಮಯ್ಯ ಮೇಲೆ ವಾಗ್ದಾಳಿ

'ನನ್ನ ಪಕ್ಷದಲ್ಲಿ ಇದ್ದು, ರಾಜಕೀಯವಾಗಿ ಬೆಳೆದವರು ಈ ಮರು ಚುನಾವಣೆಯಲ್ಲಿ ಬೆಂಗಳೂರು ಗ್ರಾಮಂತರ ಮತ್ತು ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ನಿಮಗೆ ಮಂತ್ರಿ ಸ್ಥಾನ ಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅವರು ಉಂಡ ಮನೆಗೆ ಕನ್ನ ಹಾಕುವ ಜಾಯಮಾನದವರು ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ ನಡೆಸಿದರು.

ಡಿಕೆಶಿ ರಾಜಕೀಯ ದ್ವೇಷ- ಪಿಜಿಆರ್ ಸಿಂಧ್ಯಾ

ಡಿಕೆಶಿ ರಾಜಕೀಯ ದ್ವೇಷ- ಪಿಜಿಆರ್ ಸಿಂಧ್ಯಾ

ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಅವರು ಮಾತನಾಡಿ ನಮ್ಮ ಕ್ಷೇತ್ರದ ಶಾಸಕರು ರಾಜಕೀಯ ದ್ವೇಷವನ್ನು ಬೆಳೆಸುತ್ತಾರೆ. ಚುನಾವಣೆ ಮುಗಿದ ಮೇಲೆ ದ್ವೇಷ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಮಾಡಬೇಕು ಆದರೆ ಜೆಡಿಎಸ್‌ನ ಕಾರ್ಯಕರ್ತರು ಮತ್ತು ಮುಖಂಡರ ಮೇಲೆ ಸುಳ್ಳು ಕೇಸುಗಳನ್ನು ಹಾಕಿಸಿ ತಮ್ಮ ರಾಜಕೀಯ ದ್ವೇಷವನ್ನು ತೀರಿಸಿಕೊಳ್ಳುತ್ತಿದ್ದಾರೆಂದು ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ

ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ

'ರಾಜಕೀಯದಲ್ಲಿ ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ. ನಾನು ಹಿಂದುಳಿದ ಜಾತಿಗೆ ಸೇರಿದವನಾಗಿದ್ದರೂ 6 ಬಾರಿ ಈ ಕ್ಷೇತ್ರದಿಂದ ಗೆಲ್ಲಿಸಿ ಕಳುಹಿಸಿದ್ದೀರಿ. ಈ ಋಣವನ್ನು ಇನ್ನೊಂದು ಜನ್ಮ ಎತ್ತಿದರೂ ತೀರಿಸಲು ಸಾಧ್ಯವಿಲ್ಲ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಕಂಡಿರಬಹುದು. ಆದರೆ ನಾನು ಕೈಕಟ್ಟಿ ಮನೆಯಲ್ಲಿ ಕುಳಿತುಕೊಳ್ಳದೆ ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇನೆ. ಈಗ ನಾನು ಚುನಾವಣೆ ರಾಜಕೀಯದಿಂದ ಹಿಂದೆ ಸರಿದಿದ್ದು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುತ್ತೇನೆ' ಎಂದು ಹೇಳಿದರು.

ಜೆಡಿಎಸ್ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ:

ಜೆಡಿಎಸ್ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ:

ಈ ಉಪಚುನಾವಣೆಯಲ್ಲಿ ಮಂಡ್ಯ ಮತ್ತು ಕನಕಪುರದಿಂದ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಟ್ಟರೆ ಜೆಡಿಎಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ಕಾರ್ಯಕರ್ತರು ಮತ್ತು ಮುಖಂಡರು ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು ಅಭ್ಯರ್ಥಿಗಳನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿ ಕೊಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ' ಎಂದು ಕಾರ್ಯಕರ್ತರನ್ನು ಅವರು ಹುರಿದುಂಬಿಸಿದರು. ಮಾಜಿ ಶಾಸಕರಾದ ಶಿವಲಿಂಗೇಗೌಡ, ಕೆ.ರಾಜು. ಜೆಡಿಎಸ್ ಮುಖಂಡರಾದ ಡಿ.ಎಂ. ವಿಶ್ವನಾಥ್, ನಾರಾಯಣಗೌಡ ಸಭೆಯಲ್ಲಿ ಹಾಜರಿದ್ದರು.

English summary
JDS leader, Former Prime Miniter HD Devegowda criticised Ex Chief Minister late Ramakrishna Hegde and said he (Hegde) conspired to finish JDS. He was speaking at party workers meeting in Kanakapura organised in the wake of by election to Bangalore Rural Lok Sabha constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X