ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾತ್ರಿ ಕಾರ್ಮಿಕರ ಕೈಗೆ ಉಚಿತ ಮೊಬೈಲ್!

|
Google Oneindia Kannada News

mobile
ನವದೆಹಲಿ, ಜು.31 : ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕೇಂದ್ರ ಯುಪಿಎ ಸರ್ಕಾರ, ಉದ್ಯೋಗ ಖಾತ್ರಿ ಯೋಜನೆ ಫ‌ಲಾನುಭವಿಗಳಿಗೆ ಉಚಿತ ಮೊಬೈಲ್‌ ನೀಡುವ ಮೂಲಕ, ಗ್ರಾಮೀಣ ಭಾರತದ ಜನರನ್ನು ಸೆಳೆಯಲು ತಂತ್ರ ರೂಪಿಸಿದೆ.

ಈಗಾಗಲೇ ಈ ಕುರಿತು ಪ್ರಸ್ತಾವನೆ ರಚಿಸಲಾಗಿದೆ. ಕೇಂದ್ರ ಸರ್ಕಾರ ಅಂದುಕೊಂಡಂತೆ ಎಲ್ಲವೂ ನಡೆದರೆ, ಕೆಲವು ದಿನಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಫಲಾನುಭವಿಗಳು ಮೊಬೈಲ್ ಹಿಡಿದು ಹಲೋ ಎನ್ನಲಿದ್ದಾರೆ.

'ಭಾರತ್‌ ಮೊಬೈಲ್‌ ಯೋಜನೆ' ಎಂದು ಈ ಯೋಜನೆಗೆ ಹೆಸರಿಡಲಾಗಿದ್ದು, ಯೋಜನೆ ಅನ್ವಯ ಕುಟುಂಬವೊಂದರಲ್ಲಿ 100 ದಿನ ಉದ್ಯೋಗ ಪೂರೈಸಿದ ಒಬ್ಬ ವ್ಯಕ್ತಿಗೆ ಕೇಂದ್ರ ಸರ್ಕಾರ ಉಚಿತವಾಗಿ ಮೊಬೈಲ್‌ ವಿತರಿಸಲಿದೆ.

ಅದರಲ್ಲೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿ ಮೊಬೈಲ್ ಹಂಚಲು ಕೇಂದ್ರ ನಿರ್ಧರಿಸಿದೆ. ಈ ಮೊಬೈಲ್‌ಗಳು ಮೂರು ವರ್ಷಗಳ ವಾರಂಟಿ ಹೊಂದಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರ್ಗಾಯಿಸುವಂತಿಲ್ಲ : ಈ ಮೊಬೈಲ್‌ ಅನ್ನು ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆ ಮಾಡುವಂತಿಲ್ಲ. ಮೊಬೈಲ್ ನಂಬರ್ ಅನ್ನು ಕೇಂದ್ರ ಸರ್ಕಾರದ ನೇರ ಸಬ್ಸಿಡಿ ಯೋಜನೆಗೆ ಅಳವಡಿಸಿರುತ್ತದೆ.

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಮೊಬೈಲ್‌ಗೆ ರವಾನಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಪ್ರಸ್ತಾವನೆಗೆ ಕೇಂದ್ರದ ಒಪ್ಪಿಗೆ ದೊರೆತರೆ, ಕೆಲವು ದಿನಗಳಲ್ಲಿ ಉದ್ಯೋಗ ಖಾತ್ರಿ ಜನರ ಕೈಯಲ್ಲಿ ಮೊಬೈಲ್ ಇರುವುದು ಖಾತ್ರಿಯಾಗಿದೆ.

ಈ ಯೋಜನೆ ಮಾತು ಕತೆಯ ಹಂತದಲ್ಲಿದ್ದು, ಯೋಜನೆಯ ರೂಪುರೇಷೆ ಇನ್ನಷ್ಟೇ ಅಂತಿಗೊಳ್ಳಬೇಕುಎಂದು ಅಧಿಕಾರಿಗಳು ಹೇಳಿದ್ದಾರೆ. ಜಿಲ್ಲಾಡಳಿತದ ಸಹಾಯದಿಂದ ಟೆಲಿಕಾಂ ಕಂಪನಿಗಳು ಮೊಬೈಲ್‌ಗ‌ಳನ್ನು ವಿತರಿಸಲಿವೆ ಎಂಬುದು ಸದ್ಯದ ಮಾಹಿತಿ.

ಹಗರಣಗಳ ಕರಿನೆರಳನ್ನು ಮೀರಿ ಕಾಂಗ್ರೆಸ್ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಿ ಪಡೆಯಬೇಕೆಂದು ರಣತಂತ್ರ ರೂಪಿಸಿದೆ. ಆದ್ದರಿಂದ ಗ್ರಾಮೀಣ ಭಾಗದ ಜನರಿಗೆ ಮೊಬೈಲ್ ಮೂಲಕ ಮೋಡಿ ಮಾಡುವ ಯೋಜನೆ ಆರಂಭಿಸಲು ಚಿಂತನೆ ನಡೆಸಿದೆ.

English summary
The Central Government has revived its plans to provide free mobile phones to rural households. In the name of "Bharat Mobile Scheme", one mobile handset to all rural households of which at least one member has completed 100 days of work under the MNREGA in 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X