ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರಾಜ್ ಅರಸು ಮನೆ ಮೇಲೆ ರೌಡಿಗಳ ದಾಳಿ

|
Google Oneindia Kannada News

Devaraj Urs
ಬೆಂಗಳೂರು, ಜು.31 : ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ನಿವಾಸದ ಮೇಲೆ ರೌಡಿಗಳು ದಾಳಿ ನಡೆಸಿದ್ದಾರೆ. ಬುಧವಾರ ಮುಂಜಾನೆ ಸುಮಾರು 60 ರೌಡಿಗಳ ಗುಂಪು ಸದಾಶಿವನಗರದ ಮನೆಯ ಮೇಲೆ ದಾಳಿ ನಡೆಸಿ, ಮನೆಯನ್ನು ಧ್ವಂಸಗೊಳಿಸಿದ್ದಾರೆ.

ಭೂಗಳ್ಳರು ದೇವರಾಜ್ ಅರಸು ಅವರ ಮನೆಯ ಜಾಗವನ್ನು ಕಬಳಿಸಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ಇದೇ ತಂಡದ ಸದಸ್ಯರು ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಬುಧವಾರ ನಡೆದ ದಾಳಿಯಿಂದ ಶ್ರೀ ಶಕ್ತಿ ಮನೆ ಧ್ವಂಸಗೊಂಡಿವೆ. ಸದ್ಯ ಮನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಸುಮಾರು 1 ಎಕರೆಗೂ ಹೆಚ್ಚಿನ ಜಾಗದಲ್ಲಿ ಈ ನಿವಾಸವಿದೆ. ಇದರ ಮೌಲ್ಯ ಸುಮಾರು 30 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ. ಹಿಂದೆಯೂ ನಕಲಿ ದಾಖಲೆ ಸೃಷ್ಟಿಸಿ ಈ ಮನೆಯನ್ನು ಪಡೆಯಲು ಭೂ ಗಳ್ಳರು ಪ್ರಯತ್ನಿಸಿದ್ದರು ಎಂದು ತಿಳಿದು ಬಂದಿದೆ.

ಬಿಡಿಎ ಆದೇಶವಿತ್ತು : ಈ ನಿವೇಶನವನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ಬಿಡಿಎ ಎರಡು ವರ್ಷಗಳ ಹಿಂದೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಅದು ಕಾರ್ಯಗತಗೊಂಡಿರಲಿಲ್ಲ. ಈ ಮನೆಯ ಮೇಲೆ ಭೂಗಳ್ಳರು ಹಲವಾರು ವರ್ಷಗಳಿಂದ ಕಣ್ಣಿಟ್ಟಿದ್ದಾರೆ.

ಶಾಮನೂರು ಖರೀದಿಸಿದ್ದಾರೆ : ಆರ್ ಟಿಐ ಕಾರ್ಯಕರ್ತರೊಬ್ಬರು ಸಚಿವ ಶಾಮನೂರು ಶಿವಶಂಕರಪ್ಪನವರು ಈ ಮನೆಯನ್ನು 18 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

English summary
A notorious rowdys gang attacked on former CM Devaraj Urs house in Sadashivnagar Bangalore. On Wednesday, early morning 60 rowdys gang attacked on house. police reached the place and investigating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X