ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈನ ವಿಗ್ರಹ ಕಳ್ಳ 'ದಮ್ಮಿದ್ರೆ ನನ್ನ ಹಿಡೀರಿ' ಎಂದಿದ್ದ

By Srinath
|
Google Oneindia Kannada News

ಮೂಡಬಿದಿರೆ, ಜುಲೈ31: ಇಲ್ಲಿನ ಜೈನ ಬಸದಿಯ 15 ರತ್ನಖಚಿತ ವಿಗ್ರಹಗಳನ್ನು ಜುಲೈ 6ರ ರಾತ್ರಿ ಎಷ್ಟು ಕರಾರುವಕ್ಕಾಗಿ ಕಳ್ಳತನ ಮಾಡಲಾಗಿತ್ತು ಅಂದರೆ ಪ್ರಮುಖ ಚೋರ ಸಂತೋಷ್ ದಾಸ್ ಹಿರಿಯ ಅಧಿಕಾರಿಗಳಿಗೆ ಫೋನ್ ಮಾಡಿ 'ನಿಮಗೆ ದಮ್ಮಿದ್ರೆ ನನ್ನ ಹಿಡೀರಿ' ಎಂದು ಸವಾಲು ಎಸೆದಿದ್ದ.

ಈ ವಿಗ್ರಹ ಚೋರ ಸಂತೋಷ್ ದಾಸ್ ಇದ್ದಾನಲ್ಲ ಇವನು ಕಡಿಮೆ ಆಸಾಮಿ ಏನೂ ಅಲ್ಲ. ಕಳೆದ ಒಂದು ತಿಂಗಳಲ್ಲಿ ತನ್ನ ಮೊಬೈಲಿನಲ್ಲಿ 60 ಸಿಮ್ ಕಾರ್ಡುಗಳನ್ನು ಬಳಸಿದ್ದ. ಮೊನ್ನೆ ಶನಿವಾರ ಆಂಧ್ರದ ಶ್ರೀಕಾಕುಳಂನಲ್ಲಿ ಬಸ್ಸಿನಲ್ಲಿದ್ದ ಚೋರ ಸಂತೋಷನನ್ನು ಬಂಧಿಸುವ ಮುನ್ನ ಮೂರು ಬಾರಿ ಪೊಲೀಸರ ಕಣ್ಣಳತೆಯಲ್ಲೇ ಪೊಲೀಸರನ್ನು ಯಾಮಾರಿಸಿದ್ದ.

ಘನಶ್ಯಾಮ ದಾಸನೂ ಆದ ಚೋರ ಸಂತೋಷ, ಒರಿಸ್ಸಾದ ನಯಾಗಢ ಜಿಲ್ಲೆಯವನು. ವೃತ್ತಿಯಿಂದ ಅವನೊಬ್ಬ ಸಾಮಾನ್ಯ ಡ್ರೈವರ್. ಹದಿಹರಯದಲ್ಲೇ ವಿಗ್ರಹಗಳನ್ನು ಕದಿಯಲಾರಂಭಿಸಿದ. 19ರ ವಯಸ್ಸಿನಲ್ಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಅಲ್ಲಿಂದೀಚೆಗೆ ಅವನ ವಿರುದ್ಧ ದೇಶಾದ್ಯಂತ ಕನಿಷ್ಠ 38 ದೇಗುಲ ಕಳವು ಪ್ರಕರಣಗಳು ದಾಖಲಾಗಿವೆ.

ಈತನ ಪತ್ನಿ ಕಾನೂನು ಪದವೀಧರೆ!

ಈತನ ಪತ್ನಿ ಕಾನೂನು ಪದವೀಧರೆ!

ಆಂಧ್ರ ಮತ್ತು ಒರಿಸ್ಸಾದಲ್ಲಿ ತಲಾ 14 ಪ್ರಕರಣಗಳು, ಕರ್ನಾಟಕದ ಕರಾವಳಿ ಭಾಗದಲ್ಲಿ 9 ಪ್ರಕರಣಗಳು ಘನಶ್ಯಾಂ @ ಸಂತೋಷನ ವಿರುದ್ಧ ದಾಖಲಾಗಿವೆ. ಬಹುತೇಕ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದನಾದರೂ ಜಾಮೀನಿನ ಮೇಲೆ ಸ್ವತಂತ್ರಹಕ್ಕಿಯಾಗುತ್ತಿದ್ದ. ಮತ್ತೆ ಅದೇ ಚಾಳಿ ಮುಂದುವರಿಸುತ್ತಿದ್ದ. ಅಂದಹಾಗೆ ಈತನ ಪತ್ನಿ ಕಾನೂನು ಪದವೀಧರೆ!

ಜೈನ ದೇಗುಲ ಕಳವು ಕುತೂಹಲಕಾರಿ ಮಾಹಿತಿಗಳು:

ಜೈನ ದೇಗುಲ ಕಳವು ಕುತೂಹಲಕಾರಿ ಮಾಹಿತಿಗಳು:

ರಾಜ್ಯದಲ್ಲಿ ಭಾರಿ ಸಂಚಲವನ್ನುಂಟುಮಾಡಿದ್ದ ಮೂಡಬಿದಿರೆಯ ಜೈನ ದೇಗುಲ ಕಳವು ಬಗ್ಗೆ ಒಂದಷ್ಟು ಕುತೂಹಲಕಾರಿ ಮಾಹಿತಿಗಳು:
* ಮೂಡಬಿದಿರೆಯ ದೊಡ್ಡ ಲಾಡ್ಜೊಂದರಲ್ಲಿ ಜಿಎಂ ದಾಸ್ ಹೆಸರಿನಲ್ಲಿ ಒಂದು ವಾರ ಕಾಲ ಉಳಿದುಕೊಂಡಿದ್ದ.
* ಕಳ್ಳತನದಲ್ಲಿ ಗ್ಯಾಸ್ ಕಟರ್ ಬಳಸಿರುವುದು ಪೊಲೀಸರಿಗೆ ಮಹತ್ವದ ಸುಳಿವನ್ನು ನೀಡಿತ್ತು.

ಕುಮಟಾ ಪೊಲೀಸರಿಗೆ ಸಂತೋಷನ ಬ್ಯಾಗ್ ಸಿಕ್ಕಿತ್ತು

ಕುಮಟಾ ಪೊಲೀಸರಿಗೆ ಸಂತೋಷನ ಬ್ಯಾಗ್ ಸಿಕ್ಕಿತ್ತು

* ಬೇರೊಂದು ಪ್ರಕರಣದಲ್ಲಿ ಕುಮಟಾ ಪೊಲೀಸರಿಗೆ ಬ್ಯಾಗೊಂದು ಸಿಕ್ಕಿತ್ತು. ಅದರಲ್ಲಿ ಸಿಎಸ್ ದಾಸ್ ಹೆಸರಿನಲ್ಲಿದ್ದ ಗುರುತಿನ ಚೀಟಿ ಮತ್ತು ಛತ್ತೀಸ್ ಗಢದ ದುರ್ಗಾ ಜಿಲ್ಲೆಯ ಭಿಲಾಯ್ ಮನೆ ವಿಳಾಸ ಲಭ್ಯವಾಗಿತ್ತು.
* ಸಿಸಿಬಿ ಪೊಲೀಸರು ಐಡಿ ಫೋಟೋವನ್ನು ಸ್ಥಳೀಯ ಆಟೋ ಚಾಲಕರ ಎದುರು ಹಿಡಿದಾಗ ಸದರಿ ವ್ಯಕ್ತಿಯನ್ನು ಮೂಡಬಿದಿರೆಯಿಂದ ಬೆಳ್ತಂಗಡಿ ಮತ್ತು ಬೆಳ್ತಂಗಡಿಯಿಂದ ಧರ್ಮಸ್ಥಳಕ್ಕೆ ಕರೆದೊಯ್ದಿರುವ ಬಗ್ಗೆ ಅಮೂಲ್ಯ ಮಾಹಿತಿ ನೀಡಿದರು.

ಚಲಿಸುತ್ತಿದ್ದ ಟ್ರೈನಿನಿಂದ ಜಿಗಿದುತಪ್ಪಿಸಿಕೊಂಡಿದ್ದ

ಚಲಿಸುತ್ತಿದ್ದ ಟ್ರೈನಿನಿಂದ ಜಿಗಿದುತಪ್ಪಿಸಿಕೊಂಡಿದ್ದ

* ಅದಕ್ಕೂ ಮುನ್ನ ಮೂಡಬಿದಿರೆಯ ಲಾಡ್ಜಿನಲ್ಲಿ ಉಳಿದುಕೊಂಡಿದ್ದಾಗ ಲಾಡ್ಜಿನ ಲ್ಯಾಂಡ್ ಲೈನ್ ಮೂಲಕವೇ ಅನೇಕ ಕರೆಗಳನ್ನು ಮಾಡಿದ್ದ. ಅದನ್ನೆಲ್ಲ ಪೊಲೀಸರು ತಡಕಾಡಿದಾಗ ಬೆಂಗಳೂರಿನ ಕೋರಮಂಗಲದಲ್ಲಿ ಗ್ಯಾಸ್ ಕಟರ್ ಖರೀದಿಸಿರುವುದು ಮತ್ತು ಗಾಂಧಿನಗರದಲ್ಲಿ ಲಾಡ್ಜಿಗೆ ಕರೆ ಮಾಡಿರುವುದು ಬೆಳಕಿಗೆ ಬಂದಿದೆ.
* ಛತ್ತೀಸ್ ಗಢದಲ್ಲಿ ಪೊಲೀಸರು ಇನ್ನೇನು ಇವನನ್ನು ಹಿಡಿಯಬೇಕು ಆದರೆ ಅಷ್ಟರಲ್ಲಿ ಚಲಿಸುತ್ತಿದ್ದ ಟ್ರೈನಿನಿಂದ ಜಿಗಿದವನೇ ತಪ್ಪಿಸಿಕೊಂಡುಬಿಟ್ಟಿದ್ದ. ಮತ್ತೊಮ್ಮೆ ಪೊಲೀಸರು ತನ್ನ ಹಿಂದೆ ಬಿದ್ದಿದ್ದಾರೆ ಎಂಬ ಅನುಮಾನ ಬಂದು ತಲೆ ಬೋಡಿಸಿಕೊಂಡಿದ್ದ.

ಮೂಡಬಿದಿರೆಯಲ್ಲಿ ದಾಸನಿಗೆ ಸ್ಥಳೀಯರ ನೆರವು

ಮೂಡಬಿದಿರೆಯಲ್ಲಿ ದಾಸನಿಗೆ ಸ್ಥಳೀಯರ ನೆರವು

* ಮೂಡಬಿದಿರೆಯಲ್ಲಿ ಕದ್ದ ವಿಗ್ರಹಗಳ ಪೈಕಿ ಐದನ್ನು ಕರಗಿಸಿದ್ದೇನೆ. ಏಳನ್ನು ದುರ್ಗಾದಲ್ಲಿ ಮಾರಿಬಿಟ್ಟಿದ್ದೇನೆ ಎಂದು ಬಾಯ್ಬಿಟ್ಟಿರುವ ದಾಸನಿಂದ ಪೊಲೀಸರು ಇದುವರೆಗೂ 3 ವಿಗ್ರಹಳನ್ನಷ್ಟೇ ವಶಪಡಿಸಿಕೊಂಡಿರುವುದು. ಮೂಡಬಿದಿರೆಯಲ್ಲಿ ಕೆಲವರು ತನಗೆ ನೆರವಾಗಿರುವುದಾಗಿಯೂ ದಾಸ ಪುಂಗಿಬಿಟ್ಟಿದ್ದಾನೆ. ಆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English summary
Moodabidri police cracked Jain mutt idols theft case and nabbed main thief Santosh Das from Bhuvaneshwar in Orissa who had meticulously engineered the biggest archaeological heist ever in the state in the wee hours of Saturday July 6. The main accused Santosh used 60 SIM cards to evade arrest. Sources in the Mangalore police claimed that Santosh even called a senior officer and told him: “I will give you a Rs 1 lakh reward if you can nab me.”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X