ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಪಟ್ಟ: ಬಂಗಾರಪ್ಪಗೆ ಕೈಕೊಟ್ಟಿದ್ದು ಕಾಂಗ್ರೆಸ್

By Srinath
|
Google Oneindia Kannada News

congress-played-spoilsport-with-bangarappa-madhu-bangarappa
ಬೆಂಗಳೂರು, ಜುಲೈ 31: ಸಿಎಂ ಸ್ಥಾನ ತಪ್ಪಿಸಿದ ವಿಚಾರ ಸಂಬಂಧ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳ ಮಧ್ಯೆ ಮಂಗಳವಾರ ಸದನದಲ್ಲಿ ನಡೆದ ಜಟಾಪಟಿ ಸಂದರ್ಭದಲ್ಲಿ ಅಂತಹುದೇ ವಿಶ್ವಾಸದ್ರೋಹಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ವಾರಸ್ಯಕರ ಚರ್ಚೆಯೂ ನಡೆದಿದೆ. ಮತ್ತೊಬ್ಬ ಮಾಜಿ ಮುಖ್ಯಮಂತ್ರಿಯ ಸುತ್ತ ಆ ಚರ್ಚೆ ಕೇಂದ್ರೀಕೃತವಾಗಿತ್ತು.

ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್ ಬಂಗಾರಪ್ಪನವರ ಕಿರಿಯ ಪುತ್ರ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಪಕ್ಷವು ತಮ್ಮ ತಂದೆಗೆ ವಿಶ್ವಾಸದ್ರೋಹವೆಸಗಿದ್ದನ್ನು ಸದನದಲ್ಲಿ ಪ್ರಸ್ತಾಪಿಸುತ್ತಾ, ಚರ್ಚೆಗೆ ಗ್ರಾಸ ಒದಗಿಸದರು.

ಬಂಗಾರಪ್ಪನವರ ಜನಪ್ರಿಯತೆ ಸಹಿಸದೆ ಕಾಂಗ್ರೆಸ್ ಪಕ್ಷವು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತುಹಾಕಿತು ಎಂಬ ಮಾತು ಸದನದಲ್ಲಿ ತೇಲಿಬಂತು. ಅದು ಕಿವಿಗೆ ಬೀಳುತ್ತಿದ್ದಂತೆ ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ತೀವ್ರ ಭಾವೋದ್ವೇಗಕ್ಕೆ ಒಳಗಾದರು.

ಇದೇ ಕಾಂಗ್ರೆಸ್ಸಿಗರು ಅಪ್ಪಾಜಿ ವಿರುದ್ಧ ಸಿಬಿಐ ಕೇಸ್ ಹಾಕಿಸಿ 18 ವರ್ಷ ಅಲೆಯುವಂತೆ ಮಾಡಿದರು. ಆದರೆ ನನ್ನ ಅಪ್ಪ ಚುನಾವಣೆಯಲ್ಲಿ ಗೆದ್ದುಬಂದಿದ್ದರು' ಎಂದು ಎದೆತಟ್ಟಿ ಕಾಂಗ್ರೆಸ್ ಸದಸ್ಯರತ್ತ ಕೆಂಡಕಾರುತ್ತಾ ಹೇಳಿದರು.

ತಕ್ಷಣ ಮಧ್ಯ ಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು 'ನನಗೆ ಎಲ್ಲವೂ ಗೊತ್ತು. ನಾನೀಗ ಬಾಯಿಬಿಡಂಗಿಲ್ಲ. ಈಗ ಅದಾವುದೂ ಬೇಡ ಸುಮ್ಮನಿರಿ' ಎಂದು ಸಮಾಧಾನಪಡಿಸಿದರು.

English summary
JDS MLA, Former Chief Miniter S Bangarappa's son lamented that congress was responsible for not making his father Bangarappa as Chief Minister Karnataka. He was debating in the assembly session yesterday July 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X