ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರೀಕ್ಷೆಗೂ ಮೀರಿದ ಲಾಭ, ಇನ್ಫಿ ಹಿಂದಿಕ್ಕಿದ ಎಚ್ ಸಿಎಲ್

By Mahesh
|
Google Oneindia Kannada News

HCL Tech Q4 2013 PAT at Rs 1210 crores; meets expectations
ಬೆಂಗಳೂರು, ಜು.31: ನೋಯ್ಡಾ ಮೂಲದ ಎಚ್ ಸಿಎಲ್ ಟೆಕ್ನಾಲಜೀಸ್ ಸಂಸ್ಥೆ ಸತತವಾಗಿ ಬದ್ಧವೈರಿ ಇನ್ಫೋಸಿಸ್ ಹಿಂದಿಕ್ಕಿದೆ. ಬುಧವಾರ (ಜು.31) ಪ್ರಕಟಿಸಲಾದ ನಾಲ್ಕನೇ ತ್ರೈಮಾಸಿಕ ವರದಿಯಂತೆ ನಿವ್ವಳ ಆದಾಯ ಶೇ 41.6 ರಷ್ಟು ಏರಿಕೆ ಕಂಡು 1,210 ಕೋಟಿ ರು ಗಳಿಸಿದೆ.

ದೇಶದ ನಾಲ್ಕನೇ ಅತಿದೊಡ್ಡ ಸಾಫ್ಟ್ ವೇರ್ ಕಂಪನಿ ಎಚ್ ಸಿಎಲ್ ಟೆಕ್ನಾಲಜೀಸ್ ಸಂಸ್ಥೆಯ ನಾಲ್ಕನೇ ತ್ರೈಮಾಸಿಕದಲ್ಲಿ ಆದಾಯ ವರ್ಷದಿಂದ ವರ್ಷಕ್ಕೆ ಶೇ 17.3ರಷ್ಟು ಏರಿಕೆ ಕಂಡು 6,944 ಕೋಟಿ ರು ಗಳಿಕೆ ಕಂಡಿದೆ.

ಬುಧವಾರ ಮಧ್ನಾಹ್ನ 13.05ರ ವೇಳೆಗೆ ಬಿಎಸ್ ಇ ನಲ್ಲಿ ಎಚ್ ಸಿಎಲ್ ಟೆಕ್ನಾಲಜೀಸ್ ಷೇರುಗಳು ಉತ್ತಮ ಸ್ಥಿತಿಯಲ್ಲಿತ್ತು. 920.45 ರು ನಂತೆ ಶೇ 1.61 ಏರಿಕೆ ಕಂಡಿತ್ತು. ಇದೇ ವೇಳೆ ಎನ್ ಎಸ್ ಇನಲ್ಲಿ ಶೇ1.80 ಏರಿಕೆಯಂತೆ 921.95 ರು ನಷ್ಟಿತ್ತು.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಹಾಗೂ ಇನ್ಫೋಸಿಸ್ ಕಂಪನಿಗಳ ಫಲಿತಾಂಶ ಮೀರಿ ಮಾರುಕಟ್ಟೆ ನಿರೀಕ್ಷೆಯನ್ನು ಬದಿಗೊತ್ತಿ ಎಚ್ ಸಿಎಲ್ ಉತ್ತಮ ಪ್ರಗತಿ ಕಂಡಿದೆ. ಯುರೋಪ್ ಮಾರುಕಟ್ಟೆಯಲ್ಲಿ ಶೇ 9.6ರಷ್ಟು ಆದಾಯದಲ್ಲಿ ಪ್ರಗತಿ ಹಾಗೂ ಯುನೈಟೆಡ್ ಸ್ಟೇಟ್ಸ್ ನಲ್ಲಿ ಶೇ 2.8 ರಷ್ಟು ಬೆಳವಣಿಗೆಯಾಗಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಶೇ 7.3 ರಷ್ಟು, ಉತ್ಪಾದನಾ ಕ್ಷೇತ್ರದಲ್ಲಿ ಶೇ 4.7ರಷ್ಟು ಹಾಗೂ ಟೆಲಿಕಾಂ ಕ್ಷೇತ್ರದಲ್ಲಿ ಶೇ 5.9ರಷ್ಟು ಪ್ರಗತಿ ಕಾಣಲಾಗಿದೆ.

ಜುಲೈ-ಜೂನ್ ಆರ್ಥಿಕ ವರ್ಷ ಮಾದರಿ ಅನುಸರಿಸುವ ಎಚ್ ಸಿಎಲ್ ಸಂಸ್ಥೆ ಆರ್ಥಿಕ ವರ್ಷ ಜೂನ್ 30ಕ್ಕೆ ಕೊನೆಗೊಳ್ಳುತ್ತದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಚ್ ಸಿಎಲ್ ಆದಾಯ 25 ಸಾವಿರ ಕೋಟಿ ರು ಗಡಿ ದಾಟಿದೆ. ಒಟ್ಟು 25,734 ಕೋಟಿ ರು ಆದಾಯ ಸಂಗ್ರಹಿಸಿದೆ.

ಉತ್ತಮ ತ್ರೈಮಾಸಿಕ ಫಲಿತಾಂಶದೊಂದಿಗೆ ಆರ್ಥಿಕ ವರ್ಷ ಪೂರೈಸಿದ್ದೇವೆ. ನಮ್ಮ ನಿವ್ವಳ ಆದಾಯ ಮಾರ್ಜಿನ್ 400 bps ನಷ್ಟು ವಿಸ್ತರಿಸಿದೆ. ಕಳೆದ ಐದು ವರ್ಷಗಳಲ್ಲೇ ಅಧಿಕ ಎನ್ನುವಷ್ಟು ಶೇ 16ರಷ್ಟು ಏರಿಕೆಯಾಗಿದೆ. ಈಕ್ವಿಟಿ ರಿಟರ್ನ್ಸ್ ಶೇ 34ರಷ್ಟಿದ್ದು ಇದು ಇಡೀ ಉದ್ಯಮದಲ್ಲೇ ಅತ್ಯುತ್ತಮ ಮಟ್ಟದ್ದಾಗಿದೆ. EBITDA ವರ್ಷದಿಂದ ವರ್ಷಕ್ಕೆ ಶೇ 68ರಷ್ಟು ಪ್ರಗತಿ ಕಂಡಿದೆ ಎಂದು ಎಚ್ ಸಿಎಲ್ ಟೆಕ್ನಾಲಜೀಸ್ ನ ಚೇರ್ಮನ್ ಹಾಗೂ ಮುಖ್ಯ ಕಾರ್ಯ ತಂತ್ರಜ್ಞ ಶಿವ ನಾಡರ್ ಹೇಳಿದ್ದಾರೆ.

ಇದೇ ಖುಷಿಯಲ್ಲಿ ಸಂಸ್ಥೆ ತನ್ನ ಷೇರುದಾರರಿಗೆ ಪ್ರತಿ ಷೇರಿಗೆ 2 ರು ನಂತೆ ಡಿವಿಡೆಂಡ್ ಘೋಷಿಸಿದೆ. ಅಂತಿಮ ಡಿವಿಡೆಂಡ್ 6 ರು ಪ್ರತಿ ಷೇರಿನಂತೆ ಸಿಗಲಿದೆ. ಸತತ 42 ತ್ರೈಮಾಸಿಕ ಡಿವಿಡೆಂಡ್ ನೀಡಿಕೆ ಮೂಲಕ ಅದ್ಭುತ ದಾಖಲೆ ನಿರ್ಮಿಸಿದೆ ಎಂದು ಎಚ್ ಸಿಎಲ್ ಟೆಕ್ನಾಲಜೀಸ್ ಸಿಎಫ್ ಒ ಅನಿಲ್ ಚನ್ನಣ್ಣ ಹೇಳಿದ್ದಾರೆ.

English summary
HCL Tech has reported numbers largely in line with expectations with profit after tax at Rs 1210 crores for the Q4 2013. The PAT was higher then what analysts had forecast propelled by other income.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X