ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದನಿಯ ಬಿಡುಗಡೆ ಮಾಡದಿದ್ರೆ ಹಿಂದೂ ನಾಯಕರ ಹತ್ಯೆ

By Srinath
|
Google Oneindia Kannada News

Abdul Nassar Madani
ಬೆಂಗಳೂರು, ಜುಲೈ30: ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಪ್ರಧಾನ ಆರೋಪಿ ನಾಸೀರ್ ಮದನಿಯ ಬೆಂಬಲಿಗರು ಮತ್ತೆ ವರಾತ ತೆಗೆದಿದ್ದಾರೆ. ತತ್ ಕ್ಷಣಕ್ಕೆ ಮದನಿಯನ್ನು ಬಿಡುಗಡೆ ಮಾಡದಿದ್ದರೆ ಸಂಘ ಪರಿವಾರದ 12 ಮಂದಿಯನ್ನು ಉಡಾಯಿಸುವ ಬೆದರಿಕೆಯೊಡ್ಡಿದ್ದಾರೆ.

ಈ ಸಂಬಂಧ ಕೊಯಮತ್ತೂರಿನಲ್ಲಿರುವ ಬಿಜೆಪಿ ಕಚೇರಿಗೆ ಪತ್ರ ಬರೆದಿರುವ ಮದನಿ ಅಭಿಮಾನಿಗಳು 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ, ಕೇರಳ ಮೂಲದ ಪಿಡಿಪಿ ಪಕ್ಷದ ಅಧಿನಾಯಕ ಮದನಿಯನ್ನು ತಕ್ಷಣ ಜೈಲಿನಿಂದ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಆರೆಸ್ಸೆಸ್ ನಾಯಕರ ಹತ್ಯೆ ಮಾಡುವುದು ಖಚಿತ ಎಂದು ಬೆದರಿಕೆ ಹಾಕಿರುವುದಾಗಿ ಕೇರಳ ಪೊಲೀಸರು ತಿಳಿಸಿದ್ದಾರೆ.

ಪತ್ರದಲ್ಲೇನಿದೆ?:
ಟೈಪ್ ಮಾಡಲಾದ ಪತ್ರವನ್ನು ಪಾಕ್ಕಾಡ್ ನಲ್ಲಿ ಪೋಸ್ಟ್ ಮಾಡಲಾಗಿದೆ. ತ5ಕ್ಷಣ ನಮ್ಮ ನಾಯಕ ಮದನಿಯನ್ನು ಬಿಡುಗಡೆ ಮಾಡಿ. ಆತನ ವಿರುದ್ಧವಿರುವ ಎಲ್ಲ ಪ್ರಕರಣಗಳನ್ನು ಹಿಂತೆಗೆದುಕೊಳ್ಳಿ. ಇಲ್ಲಾಂದ್ರೆ ನಿಮ್ಮ ನಾಯಕರ ಅಂತ್ಯಕ್ರಿಯೆಯನ್ನು ನೀವು ಕಾಣಬೇಕಾಗುತ್ತದೆ. ಕಮಲ ಟಿವಿ ಚಾನೆಲ್ ಅನ್ನು ತಕ್ಷಣ ಸ್ಥಗತಿಗೊಳಿಸಿ. ಸಾರ್ವಜನಿಕವಾಗಿ ಇಸ್ಲಾಂ ಸಮುದಾಯಕ್ಕೆ ಕ್ಷಮಾಪಣೆ ಕೋರಿಕೊಳ್ಳಿ' ಎಂದು ಪತ್ರದಲ್ಲಿ ಗೀಚಲಾಗಿದೆ.

ಅಡ್ವಾಣಿ ಭೇಟಿ: 'ಜುಲೈ 19ರಂದು ತಮಿಳುನಾಡು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ ರಮೇಶ್ ಅವರನ್ನು ಹತ್ಯೆ ಮಾಡಲಾಗಿದೆ. ಹತ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಲು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ನಾಳಿದ್ದು ಗುರುವಾರ ಆಗಸ್ಟ್ 1ರಂದು ಕೊಯಮತ್ತೂರಿಗೆ ಭೇಟಿ ನೀಡುವ ಕಾರ್ಯಕ್ರಮವಿದೆ.

ಬೆಂಗಳೂರಿನಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮದನಿ ಜಾಮೀನು ಕೋರಿ ಅನೇಕ ಬಾರಿ ಅಲವತ್ತುಕೊಂಡಿದ್ದಾರೆ. ಆದರೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಈ ಮಧ್ಯೆ ಕೇಂದ್ರ ಮಟ್ಟದಿಂದ ರಾಜ್ಯ ರಾಜಕೀಯ ನಾಯಕರೂ ಮದನಿ ಬಿಡುಗಡೆಗೆ ಅಧಿಕೃತವಾಗಿ ಯತ್ನಿಸಿದ್ದಾರಾದರೂ ಕೋರ್ಟ್ ಅಸ್ತು ಅಂದಿಲ್ಲ.

ಇದರಿಂದ ನಿರಾಶೆಗೊಂಡಿರುವ ಮದನಿ ಬೆಂಬಲಿಗರು ಈಗ ಹಿಂದೂ ನಾಯಕರ ಹತ್ಯೆ ಮಾತನ್ನಾಡುತ್ತಿದ್ದಾರೆ. ಬಿಜೆಪಿ, ಹಿಂದೂ ಮುನ್ನಣಿ ಮತ್ತು ವಿಹಿಂಪ ನಾಯಕರನ್ನು ಗುರಿಯಾಗಿಸಿಕೊಂಡು ಈ ಪತ್ರ ಬರೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪತ್ರದ ಹಿನ್ನೆಲೆಯಲ್ಲಿ ತಮಿಳುನಾಡು ಬಿಜೆಪಿ ಕಾರ್ಯದರ್ಶಿ ಜಿಕೆಎಸ್ ಸೆಲ್ವಕುಮಾರ್ ಅವರು ಪೊಲೀಸ್ ಆಯುಕ್ತ ಎಕೆ ವಿಶ್ವನಾಥನ್ ಅವರನ್ನು ಭೇಟಿ ಮಾಡಿ, ವರಿಷ್ಠ ನಾಯಕರಿಗೆ ಭದ್ರತೆ ಒದಗಿಸುವಂತೆ ಕೋರಿದ್ದಾರೆ.

English summary
Release Abdul Nassar Madani else Hindu outfits leaders be Murdered. The BJP office in Coimbatore has received a letter threatening to kill 12 persons belonging to various Sangh Parivar organisations if their demand for immediate release of Abdul Nassar Madani, the Kerala-based PDP leader who is an accused in the 2008 Bangalore serial bomb blasts, was not met immedaitely, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X