ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಮಿನಲ್ ಹಿನ್ನೆಲೆ ಎಂಪಿಗಳು:ಯಾವ ಪಕ್ಷಕ್ಕೆ ಅಗ್ರತಾಂಬೂಲ

|
Google Oneindia Kannada News

ನವದೆಹಲಿ, ಜು 30: ಉತ್ತಮ ಹಿನ್ನೆಲೆಯುಳ್ಳ, ಜನಾನುರಾಗಿಯಾಗಿರುವ ರಾಜಕೀಯ ಮುಖಂಡರಿಗೆ ಇತ್ತೀಚಿನ ದಿನಗಳಲ್ಲಿ ಚುನಾವಣೆಯಲ್ಲಿ ಹಿನ್ನಡೆಯಾಗುತ್ತಿರುವುದು ನಮ್ಮ ದೇಶದ ದುರಂತ.

ಗ್ರಾಮ ಪಂಚಾಯತಿ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೆ ಹಣ, ಹೆಂಡ ತನ್ನ ಅಭೇದ್ಯ ಪ್ರಾಬಲ್ಯ ಮೆರೆಯುತ್ತಿರುವುದು ನಮ್ಮ ಸಮಾಜ ಮತ್ತು ಚುನಾವಣೆ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ನಮ್ಮ ಈ ವ್ಯವಸ್ಥೆಗೆ ಕನ್ನಡಿ ಹಿಡಿಯುವ ಮತ್ತೊಂದು ಸಮೀಕ್ಷೆ ಹೊರಬಿದ್ದಿದೆ.

ಸಮೀಕ್ಷೆ ಪ್ರಕಾರ ಉತ್ತಮ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗಿಂತ ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳು ಚುನಾವಣೆಯಲ್ಲಿ ವಿಜಯದ ನಗೆ ಬೀರುತ್ತಿರುವ ಶೇಕಡಾವಾರು ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.

ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್ ಆಧರಿಸಿ ಎಡಿಆರ್ (Association of Democratic Reforms) ಎನ್ಇಡಬ್ಲ್ಯು (National Election Watch) ಜಂಟಿಯಾಗಿ ತಯಾರಿಸಿದ ಸಮೀಕ್ಷೆಯಲ್ಲಿ ಲೋಕಸಭೆಯ ಶೇ.30 ಮತ್ತು ರಾಜ್ಯಸಭೆಯ ಶೇ.17 ಸಂಸದರು ಕ್ರಿಮಿನಲ್ ಹಿನ್ನೆಲೆಯುಳ್ಳವರು ಅಥವಾ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿರುವುದು ಅಥವಾ ಕೇಸ್ ದಾಖಲಾಗಿ ವಿಲೇವಾರಿ ಆಗದೇ ಇರುವುದು ವ್ಯಕ್ತವಾಗಿದೆ.

ಅಂದಹಾಗೆ, ಯಾವ ಪಕ್ಷದಲ್ಲಿ ಅತಿ ಹೆಚ್ಚು ಕ್ರಿಮಿನಲ್ ಹಿನ್ನೆಲೆಯುಳ್ಳ ಸಂಸದರಿದ್ದಾರೆ? ಸ್ಲೈಡಿನಲ್ಲಿ ನೋಡಿ

ಅತಿ ಹೆಚ್ಚು ಕ್ರಿಮಿನಲ್ ಸಂಸದರು

ಅತಿ ಹೆಚ್ಚು ಕ್ರಿಮಿನಲ್ ಸಂಸದರು

ಕ್ಲೀನ್ ಇಮೇಜ್ ಹೊಂದಿರುವ ಅಭ್ಯರ್ಥಿಗಳ ಗೆಲುವಿನ ಪ್ರಮಾಣ ಶೇ.12 ಮತ್ತು ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಗೆಲುವಿನ ಪ್ರಮಾಣ ಶೇ.23. ಈ ಸಮೀಕ್ಷೆಯನ್ನು 8790 ಅಭ್ಯರ್ಥಿಗಳ ಅಫಿಡವಿಟ್ ಆದರಿಸಿ ತಯಾರಿಸಲಾಗಿದೆ.

ಯಾವ ಪಕ್ಷದಲ್ಲಿ ಅತಿ ಹೆಚ್ಚು ಆ ಹಿನ್ನೆಲೆಯುಳ್ಳ ಸಂಸದರು

ಯಾವ ಪಕ್ಷದಲ್ಲಿ ಅತಿ ಹೆಚ್ಚು ಆ ಹಿನ್ನೆಲೆಯುಳ್ಳ ಸಂಸದರು

ಸಮೀಕ್ಷೆಯ ಪ್ರಕಾರ NDA ಮೈತ್ರಿಕೂಟದ ಪ್ರಮುಖ ಪಕ್ಷಗಳಲ್ಲೊಂದಾದ ಶಿವಸೇನೆ ಟೆಕೆಟಿನಿಂದ ಆಯ್ಕೆಯಾದ ಸಂಸದರು ಈ ಪಟ್ಟಿಯಲ್ಲಿ ಅಗ್ರಗಣ್ಯರು. ಪಕ್ಷದ ಸಂಸದರು ಮತ್ತು ಮಹಾರಾಷ್ಟ್ರ ಶಾಸಕರಾಗಿ ಆಯ್ಕೆಯಾದ ಶೇ. 75ರಷ್ಟು ಮಂದಿ ಕ್ರಿಮಿನಲ್ ಹಿನ್ನೆಲೆಯುಳ್ಳವರು.

ಎರಡನೇ ಸ್ಥಾನದಲ್ಲಿ ಯಾರು?

ಎರಡನೇ ಸ್ಥಾನದಲ್ಲಿ ಯಾರು?

ಶಿವಸೇನೆಯ ನಂತರ ಕೋಟಿ ಕೋಟಿ ಲೂಠಿಯಾದ ಮೇವು ಹಗರಣ ಕುಖ್ಯಾತಿಯ ಲಾಲೂ ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳಕ್ಕೆ. ಈ ಪಕ್ಷದಿಂದ ಆಯ್ಕೆಯಾದ ಕ್ರಿಮಿನಲ್ ಹಿನ್ನೆಲೆಯುಳ್ಳ ಸಂಸದರು ಶೇಕಡಾವಾರು ಪ್ರಮಾಣ 46.

ಬಿಜೆಪಿ, ಕಾಂಗ್ರೆಸ್ ಕೂಡಾ ಹಿಂದೆ ಬಿದ್ದಿಲ್ಲ

ಬಿಜೆಪಿ, ಕಾಂಗ್ರೆಸ್ ಕೂಡಾ ಹಿಂದೆ ಬಿದ್ದಿಲ್ಲ

ಶಿವಸೇನೆ, ಆರ್ಜೆಡಿ ನಂತರದ ಸ್ಥಾನ ಕ್ರಮವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಬಿಜೆಪಿಯ ಶೇ. 31 ಮತ್ತು ಕಾಂಗ್ರೆಸ್ಸಿನ ಶೇ. 22 ಸಂಸದರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ.

ಇನ್ನು ಪಕ್ಷೇತರರನ್ನು ಬಿಟ್ಟರೆ ಹೇಗೆ?

ಇನ್ನು ಪಕ್ಷೇತರರನ್ನು ಬಿಟ್ಟರೆ ಹೇಗೆ?

ಲೋಕಸಭೆ ಮತ್ತು ವಿವಿಧ ರಾಜ್ಯದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಒಟ್ಟು ಅಭ್ಯರ್ಥಿಗಳಲ್ಲಿ 62847 ಅಭ್ಯರ್ಥಿಗಳ ಹಿನ್ನೆಲೆ ಹುಡುಕಿದಾಗ ಅದರಲ್ಲಿ 4181 ಅಭ್ಯಥಿಗಳು ಮತ್ತೆ ಮತ್ತೆ ಕಣಕ್ಕೆ ಸ್ಪರ್ಧಿಸಿದವರು. ಅದರಲ್ಲಿ 1072 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರು.

ಶಿರೋಮಣಿ ಅಕಾಲಿದಳ, ತೆಲುಗುದೇಶಂ

ಶಿರೋಮಣಿ ಅಕಾಲಿದಳ, ತೆಲುಗುದೇಶಂ

ಇನ್ನು ಅಭ್ಯರ್ಥಿಗಳು ಸಲ್ಲಿಸುವ ಆಸ್ತಿ ಘೋಷಣೆಯ ಪ್ರಕಾರ ಶಿರೋಮಣಿ ಅಕಾಲಿದಳದ ಅಭ್ಯರ್ಥಿಗಳಲ್ಲಿರುವ ಎವರೇಜ್ ಆಸ್ತಿ ಕೇವಲ ಆರು ಕೋಟಿ ಎರಡು ಲಕ್ಷ, ನಂತರದ ಸ್ಥಾನ ಚಂದ್ರಬಾಬು ನಾಯ್ಡುಗಾರು ಅವರ ತೆಲುಗುದೇಶಂ ಪಕ್ಷಕ್ಕೆ (ಐದು ಕೋಟಿ ಅರವತ್ತೆರಡು ಲಕ್ಷ)

English summary
About 30 percent of Lok Sabha & 17 percent of Rajya Sabha members have criminal cases pending against them. Shiv Sena members top in the list, joint report by ADR and NEW.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X