• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಧುನಿಕ ಕರ್ನಾಟಕದ ಹನ್ನೆರಡು ದೇಗುಲಗಳು

|
Google Oneindia Kannada News

ಕಾವೇರಿ ಮತ್ತು ಕೃಷ್ಣಾ ರಾಜ್ಯದ ಎರಡು ಜೀವನದಿಗಳು. ಇದಲ್ಲದೇ ರಾಜ್ಯದಲ್ಲಿ ಹರಿಯುವ ಹಲವಾರು ನದಿಗಳು ರೈತರ ಪಾಲಿಗೆ ಜೀವನಾಡಿಯಾಗಿದೆ. ಹರಿಯುವ ನದಿಯನ್ನು ತಡೆದು ನಿಲ್ಲಿಸಿ ಅದರ ರಭಸವನ್ನು ಕಡಿಮೆ ಮಾಡಿ ದಿಕ್ಕನ್ನು ಬದಲಾಯಿಸಲು ಜಲಾಶಯ ಅಥವಾ ಅಣೆಕಟ್ಟನ್ನು ನಿರ್ಮಿಸಲಾಗುತ್ತದೆ.

ತದನಂತರ ತೂಬಿನ ಅಥವಾ ಕ್ರೈಸ್ಟ್ ಗೇಟ್ ಮೂಲಕ ನೀರನ್ನು ನೀರಾವರಿಗೆ, ಕುಡಿಯುವ ನೀರಿನ ಶುದ್ದೀಕರಣಕ್ಕೆ ಮತ್ತು ಇತರ ರಾಜ್ಯಗಳಿಗೆ ಸಲ್ಲ ಬೇಕಾಗಿರುವ ಪ್ರಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ.

ಜಲಾಶಯಗಳು ಎಂದರೆ ಭವ್ಯ ಭಾರತದ ನಿರ್ಮಾಣ ದೇಗುಲಗಳಿದ್ದಂತೆ ಎಂದು ಹಿಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಹೇಳಿದ್ದರು. ಅದರಂತೆ ರಾಜ್ಯವೂ ಸೇರಿದಂತೆ ದೇಶದಲ್ಲಿ ಹಲವು ಅಣೆಕಟ್ಟುಗಳು ನಿರ್ಮಾಣವಾಗಿದೆ.

ಕರ್ನಾಟದಲ್ಲಿ ದೊಡ್ಡ ಅಣೆಕಟ್ಟುಗಳನ್ನು ಲೆಕ್ಕ ಮಾಡುವುದಾದರೆ ಸುಮಾರು 12 ಇವೆ. ಮಧ್ಯಮ ಗಾತ್ರದ ಮತ್ತು ಸಣ್ಣ ಅಣೆಕಟ್ಟುಗಳು ರಾಜ್ಯದಲ್ಲಿ ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದೆ. ತುಂಬಿದ ಅಣೆಕಟ್ಟುಗಳಿಗೆ ಬಾಗಿನ ಅರ್ಪಿಸುವುದು ನಾಡಿನ ಪದ್ದತಿ. ಅದರಂತೆ ರಾಜ್ಯದ ಬಹುತೇಕ ಅಣೆಕಟ್ಟುಗಳು ಮೈತುಂಬಿ ನಿಂತಿವೆ.

ರಾಜ್ಯದ ಕೆಲವು ಪ್ರಮುಖ ಅಣೆಕಟ್ಟುಗಳ ಕಿರುಪರಿಚಯ

ಆಲಮಟ್ಟಿ

ಆಲಮಟ್ಟಿ

ಉತ್ತರ ಕರ್ನಾಟಕದ ಭಾಗದ ಜನತೆಗೆ ಜೀವನದಿಯಾಗಿರುವ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ದೇಶದ ಬೃಹತ್ ಅಣೆಕಟ್ಟುಗಳಲ್ಲೊಂದು. 520 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಜಾಪುರದ ಬಸವನ ಬಾಗೇವಾಡಿಯಲ್ಲಿ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದರ ಇನ್ನೊಂದು ಹೆಸರು ಅಪ್ಪರ್ ಕೃಷ್ಣಾ ಪ್ರಾಜೆಕ್ಟ್. ಈ ಅಣೆಕಟ್ಟನ್ನು ಜುಲೈ 2005ರಲ್ಲಿ ನಿರ್ಮಿಸಲಾಗಿತ್ತು, ಆರಂಭದಲ್ಲಿ ಅಣೆಕಟ್ಟಿನ ಎತ್ತರ 509 ಮೀಟರ್ ತದನಂತರ ಸುಪ್ರೀಂ ಕೋರ್ಟಿನ ಆದೇಶದನ್ವಯ ಎತ್ತರವನ್ನು 520 ಮೀಟರಿಗೆ ಏರಿಸಲಾಯಿತು. ಅಣೆಕಟ್ಟಿನ ಗರಿಷ್ಠ ಮಟ್ಟ 519.60 ಮೀಟರ್. ಆಲಮಟ್ಟಿ ಅಣೆಕಟ್ಟಿನ ಬಲ ಭಾಗದಲ್ಲ್ಲಿ 290 ಮೆಗಾವ್ಯಾಟ್ ಉತ್ಪಾದಿಸುವ ವಿದ್ಯುತ್ ಪ್ರಾಜೆಕ್ಟ್ ಇದೆ.

ಲಿಂಗನಮಕ್ಕಿ

ಲಿಂಗನಮಕ್ಕಿ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಾಗರದ ಬಳಿ ಲಿಂಗನಮಕ್ಕಿ ಎನ್ನುವಲ್ಲಿ ಶರಾವತಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಅಣೆಕಟ್ಟು. 1964ರಲ್ಲಿ ನಿರ್ಮಾಣವಾದ ಈ ಅಣೆಕಟ್ಟು ರಾಜ್ಯಕ್ಕೆ ಬೇಕಾಗಿರುವ ಸುಮಾರು ಅರ್ಥದಷ್ಟು ವಿದ್ಯುತ್ತನ್ನು ಈ ಅಣೆಕಟ್ಟಿನ ಮೂಲಕ ಉತ್ಪಾದಿಸಲಾಗುತ್ತದೆ.

ತುಂಗಭದ್ರಾ

ತುಂಗಭದ್ರಾ

ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಕೂಪ್ಪಳ, ಹಾವೇರಿ ಮತ್ತು ಆಂಧ್ರಪ್ರದೇಶದ ಕೆಲವು ನಗರಗಳಿಗೆ ಜೀವನಾಡಿಯಾಗಿರುವ ಈ ಅಣೆಕಟ್ಟು 2441 ಮೀಟರ್ ಉದ್ದ ಮತ್ತು 1633 ಅಡಿ ಎತ್ತರವನ್ನು ಹೊಂದಿದೆ, ರಾಜ್ಯದ ಮತ್ತೊಂದು ಬೃಹತ್ ಅಣೆಕಟ್ಟುಗಳಲ್ಲಿ ಒಂದಾಗಿರುವ ತುಂಗಭದ್ರಾ ಅಣೆಕಟ್ಟು ಹೊಸಪೇಟೆಯಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿದೆ.

ಸೂಪಾ ಅಣೆಕಟ್ಟು

ಸೂಪಾ ಅಣೆಕಟ್ಟು

1997ರಲ್ಲಿ ಉದ್ಘಾಟನೆಗೊಂಡ ಸೂಪಾ ಅಟೆಕಟ್ಟು ಕಾಳಿನದಿಗೆ ಅಡ್ದವಾಗಿ ಯಲ್ಲಾಪುರ ಬಳಿಯ ಕೊಡಸಹಳ್ಳಿ ಎನ್ನುವಲ್ಲಿ ನಿರ್ಮಾಣವಾಗಿದೆ. ಈ ಅಣೆಕಟ್ಟಿನ ಪ್ರಮುಖ ಉದ್ದೇಶ ವಿದ್ಯುತ್ ಉತ್ಪಾದನೆ.

ಕೃಷ್ಣರಾಜಸಾಗರ

ಕೃಷ್ಣರಾಜಸಾಗರ

ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಕನಸಿನ ಕೂಸು. ಕಾವೇರಿ ನದಿಗೆ ಅಡ್ಡವಾಗಿ ಶ್ರೀರಂಗಪಟ್ಟಣದ ಬಳಿ ಕಟ್ಟಲಾಗಿರುವ ಈ ಅಣೆಕಟ್ಟಿನ ಎತ್ತರ 130 ಅಡಿ ಎತ್ತರ. ಇದರ ಒಟ್ಟು ನೀರು ಶೇಖರಣೆಯಾಗುವ ಸಾಮರ್ಥ್ಯ 124.80 ಅಡಿ.
ಕೆ ಆರ್ ಎಸ್ ಎಂದೇ ಜನಪ್ರಿಯವಾಗಿರುವ ಈ ಅಣೆಕಟ್ಟು ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ನಿರ್ಮಾಣವಾದ ಯಶಸ್ವಿ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿರುವ ಅಣೆಕಟ್ಟು.

ಘಟಪ್ರಭಾ

ಘಟಪ್ರಭಾ

ಬೆಳಗಾವಿ ಹುಕ್ಕೇರಿ ಬಳಿ ಘಟಪ್ರಭಾ ಎನ್ನುವಲ್ಲಿ ಕೃಷ್ಣಾ ಉಪನದಿ ಘಟಪ್ರಭಾ ನದಿಗೆ ಅಡ್ದಲಾಗಿ ಕಟ್ಟಿರುವ ಅಣೆಕಟ್ಟು. ಅಣೆಕಟ್ಟಿನ ಎತ್ತರ 53.34 ಮೀಟರ್. ನೀರು ಶೇಖರಿಸಿಡ ಬಹುದಾದ ಸಾಮರ್ಥ್ಯ 2175 ಅಡಿ.

ಮಲಪ್ರಭಾ

ಮಲಪ್ರಭಾ

ಕೃಷ್ಣಾ ನದಿಯ ಉಪನದಿಗಳಲ್ಲಿ ಒಂದಾಗಿರುವ ಮಲಪ್ರಭಾ ನದಿ ಪಶ್ಚಿಮ ಘಟ್ಟಗಳಲ್ಲಿ ಹರಿದು ಕೂಡಲಸಂಗಮದ ಬಳಿ ಕೃಷ್ಣಾ ನದಿಯಲ್ಲಿ ವಿಲೀನವಾಗುತ್ತದೆ. ಹುಬ್ಬಳ್ಳಿ ಮತ್ತು ಧಾರವಾಡ ಜನತೆಗೆ ಕುಡಿಯುವ ನೀರಿಗೆ ಈ ಅಣೆಕಟ್ಟೇ ಆಸರೆ. ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿ ನವಿಲತೀರ್ಥ ಎನ್ನುವಲ್ಲಿ ನದಿಗೆ ಅಣೆಕಟ್ಟು ಕಟ್ಟಲಾಗಿದೆ. ಈ ಅಣೆಕಟ್ಟಿನ ಎತ್ತರ 2079 ಅಡಿ.

ಹೇಮಾವತಿ

ಹೇಮಾವತಿ

ಕಾವೇರಿ ನದಿ ಉಪನದಿಯಾಗಿರುವ ಹೇಮಾವತಿ ಪಶ್ಚಿಮ ಘಟ್ಟದಲ್ಲಿ ಉಗಮವಾಗುತ್ತದೆ. ಹಾಸನ ಮತ್ತು ಮಂಡ್ಯದ ಮೂಲಕ ಹರಿದು ಕಾವೇರಿ ನದಿಯನ್ನು ಸೇರುತ್ತದೆ. ಹಾಸನ ಜಿಲ್ಲೆ ಗೊರೂರಿನಲ್ಲಿ ಹೇಮಾವತಿ ನದಿಗೆ ಅಣೆಕಟ್ಟು ಕಟ್ಟಲಾಗಿದೆ.
ಅಣೆಕಟ್ಟಿನ ಉದ್ದ 15394 ಅಡಿ.
(ಫೋಟೋ ಕೃಪೆ: ಅರಕಲಗೂಡು ಜಯಕುಮಾರ್)

ಕಬಿನಿ

ಕಬಿನಿ

ಕಬಿನಿ ಅಥವ ಕಪಿಲಾ ಎಂದು ಕರೆಯಲ್ಪಡುವ ಈ ನದಿ ಕೇರಳದ ವಾಯಿನಾಡ್ ಜಿಲ್ಲೆಯಲ್ಲಿ ಉಗಮವಾಗಿ ರಾಜ್ಯದ ತಿ ನರಸೀಪುರದಲ್ಲಿ ಕಾವೇರಿ ನದಿಯಲ್ಲಿ ಸಂಗಮಗೊಳ್ಳುತ್ತದೆ. ಬಾನಾಸುರ ಸಾಗರ ಅಣೆಕಟ್ಟನ್ನು ಕಬಿನಿ ನದಿಗೆ ಅಡ್ದಲಾಗಿ ನಿರ್ಮಿಸಲಾಗಿದೆ.

ಭದ್ರಾ

ಭದ್ರಾ

ತುಂಗಭದ್ರಾ ನದಿಯ ಉಪನದಿಯಾಗಿರುವ ಭದ್ರಾ ನದಿಗೆ ಚಿಕ್ಕಮಗಳೂರು ತಾಲೂಕು ತರೀಕೆರೆಯಲ್ಲಿ ಕಟ್ಟಲಾಗಿರುವ ಅಣೆಕಟ್ಟು. ವಿದ್ಯುತ್ ಮತ್ತು ನೀರಾವರಿಗಾಗಿ ಅಣೆಕಟ್ಟನ್ನು ಬಳಸಿಕೊಳ್ಳಲಾಗುತ್ತದೆ. ಅಣೆಕಟ್ಟಿನ ಉದ್ದ 59.13 ಮೀಟರ್ ಮತ್ತು ಇದನ್ನು ರಾಷ್ಟೀಯ ನೀರಾವರೆ ಮೇಲ್ವಿಚಾರಣೆ ಪ್ರಾಜೆಕ್ಟಿನಡಿ ನಿರ್ಮಿಸಲಾಗಿದೆ.

ಹಾರಂಗಿ

ಹಾರಂಗಿ

ಕಾವೇರಿ ನದಿಯ ಮತ್ತೊಂದು ಉಪನದಿ ಹಾರಂಗಿಗೆ ಕೊಡಗಿನ ಸೋಮವಾರ ಪೇಟೆ ತಾಲೂಕಿನಲ್ಲಿದೆ. ಕುಶಾಲನಗರದಿಂದ ಒಂಬತ್ತು ಕಿಲೋಮೀಟರ್ ದೂರದಲ್ಲಿರುವ ಈ ಅಣೆಕಟ್ಟಿನ ಎತ್ತರ 49.99 ಮೀಟರ್. 845.82 ಮೀಟರ್ ಅಗಲವಾಗಿದೆ. ಹಾರಂಗಿ ನದಿ ಪಶ್ಚಿಮ ಘಟ್ಟದ ಪುಷ್ಪಗಿರಿ ಬೆಟ್ಟದಲ್ಲಿ ಉಗಮವಾಗುತ್ತದೆ.

ನಾರಾಯಣಪುರ

ನಾರಾಯಣಪುರ

ಯಾದಗಿರಿ ಬಳಿಯ ನಾರಾಯಣಪುರದಲ್ಲಿ ಕೃಷ್ಣಾ ನದಿಗೆ ಕಟ್ಟಲಾಗಿರುವ ಈ ಅಣೆಕಟ್ಟನ್ನು ನಾರಾಯಣಪುರ ಅಥವ ಬಸವಸಾಗರ ಅಣೆಕಟ್ಟು ಎಂದೂ ಕರೆಯುತ್ತಾರೆ. 1982ರಲ್ಲಿ ಅಣೆಕಟ್ಟಿನ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿತ್ತು. ಈ ಅಣೆಕಟ್ಟು ಜೇವರ್ಗಿ, ಶಹಾಪುರ, ಸುರಪುರ, ಸಿಂಧಗಿ, ಇಂಡಿ, ಲಿಂಗಸಗೂರು ಮತ್ತು ದೇವದುರ್ಗ ತಾಲೂಕಿಗೆ ನೀರಿನ ಆಸರೆಯಾಗಿದೆ.

English summary
Temples of modern Karnataka : List of major dams and reservoirs built across various rivers in the State. Thanks to good Monsoon ( 2013) all dams and water beds are full.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X