ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಳಯವಾದ್ರೆ ಅಮೆರಿಕ ಅಧ್ಯಕ್ಷ ಬಚಾವ್ ಹೇಗೆ ಗೊತ್ತಾ!?

By Srinath
|
Google Oneindia Kannada News

ವಾಷಿಂಗ್ಟನ್, ಜುಲೈ29: ಒಂದು ವೇಳೆ ಪ್ರಳಯ ಅಂತೇನಾದ್ರೂ ಆದರೆ ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಬಚಾಗುವುದು ಹೇಗೆ ಗೊತ್ತಾ!?

ಅದಕ್ಕೂ ಮುನ್ನ, ಕಳೆದ ವರ್ಷವಷ್ಟೇ ಪ್ರಳಯ ಸಂಭವಿಸುತ್ತದೆ ಎಂಬ ಗುಲ್ಲೆದ್ದು ಜನ ಹೈರಾಣಗೊಂಡು, ಸದ್ಯ ಅಂಥದ್ದೇನೂ ಆಗಿಲಿಲ್ವಲ್ಲಾ ಎಂದು ಸಮಾಧಾನಗೊಂಡು ಎಂದಿನಂತೆ ಜೀವನ ನಡೆಸುತ್ತಿರುವಾಗ ಮತ್ತೆ ಏನಿದು ಪ್ರಳಯ/ DoomsDay ವಿಷಯ ಎಂದು ಸಿಟ್ಟಾಗಬೇಡಿ.

ಏಕೆಂದರೆ ಅಕಸ್ಮಾತ್ ಆಗಬರಾದ್ದೇನಾದರೂ ಆದರೆ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಬಚಾಗುವುದಕ್ಕೆ ಕಂಡುಕೊಂಡಿರುವ ಮಾರ್ಗೋಪಾಯಗಳು ಏನು ಎಂಬುದರ ಬಗ್ಗೆ ಒಂದು ಕುತೂಹಲಕಾರಿ ವರದಿ ಇಲ್ಲಿದೆ.

ಪ್ರಾಜೆಕ್ಟಿನ ಹೆಸರು Nightwatch

ಪ್ರಾಜೆಕ್ಟಿನ ಹೆಸರು Nightwatch

ಏನಿಲ್ಲ ಪ್ರಳಯ/ DoomsDay ಘಟಿಸಿದರೆ ದೊಡ್ಡಣ್ಣ ಅಮೆರಿಕ ಅಧ್ಯಕ್ಷ (ಅಂದು ಯಾರೇ ಆಗಿರಲಿ) ನೋಹಾ ಆರ್ಕ್ ಮಾದರಿಯ Noah's ark ವಿಶೇಷಾತಿವಿಶೇಷ ವಿಮಾನದಲ್ಲಿ ಶೇಷವಾಗುತ್ತಾರೆ. ಈ ವಿಮಾನದ ಹೆಸರು Boeing E-4 Advanced Airborne Command Post. ಪ್ರಾಜೆಕ್ಟಿನ ಹೆಸರು Nightwatch.

ಧೂಮಕೇತು ಡಿಕ್ಕಿ ಹೊಡೆಯುವ ಭಯವೂ ಅನಗತ್ಯ

ಧೂಮಕೇತು ಡಿಕ್ಕಿ ಹೊಡೆಯುವ ಭಯವೂ ಅನಗತ್ಯ

ಅಂತಹ ದುರ್ಭರ ಪರಿಸ್ಥಿತಿಯಲ್ಲಿ ಅಧ್ಯಕ್ಷ ಮಹೋದಯ್ ಜತೆಗೆ ಮತ್ತೊಂದಿಷ್ಟು ಮಂದಿಯನ್ನು ಉಳಿಸಿಕೊಳ್ಳಲೆಂದೇ ಈ ಶಕ್ತಿಶಾಲಿ Noah's ark ವಿಮಾನವನ್ನು ತಯಾರಿಸಿ, ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಧೂಮಕೇತುಗಳು ಈ ವಿಮಾನಕ್ಕೆ ಡಿಕ್ಕಿ ಹೊಡೆಯುತ್ತದಪ್ಪಾ ಎಂಬ ಭಯವೂ ಅನಗತ್ಯ.

ವಿಮಾನದ ಪೈಲಟುಗಳು 24/7/365 ಹಾರಾಟಕ್ಕೆ ಸಿದ್ಧ

ವಿಮಾನದ ಪೈಲಟುಗಳು 24/7/365 ಹಾರಾಟಕ್ಕೆ ಸಿದ್ಧ

ಅಣುಯುದ್ಧ ಸೇರಿದಂತೆ ಯಾವುದೇ ವಿಕೋಪ ಎದುರಿಸಲು ವಿಕಿರಣ ತಡೆಗೋಡೆಗಳಿಂದ ವಿಮಾನವನ್ನು ಸಿದ್ಧಪಡಿಸಲಾಗಿದೆ. ಕೆಲವೇ ಕ್ಷಣಗಳಲ್ಲಿ ಈ ವಿಮಾನ ಗಗನಕ್ಕೆ ಚಿಮ್ಮುತ್ತದೆ. ನಿರ್ದಿಷ್ಟ ವಿಮಾನ ನಿಲ್ದಾಣದಲ್ಲಿ ಇದನ್ನು ಸದಾ ಸನ್ನದ್ಧವಾಗಿಟ್ಟಿರಲಾಗುತ್ತದೆ. ವಿಮಾನದ ಪೈಲಟುಗಳು ಸಹಾ 24/7/365 ಹಾರಾಟಕ್ಕೆ ಸಿದ್ಧವಾಗಿರುತ್ತಾರೆ. ಆಜ್ಞೆ ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ವಿಮಾನ ಆಗಸಕ್ಕೆ ನೆಗೆಯುತ್ತದೆ.

1846ರಲ್ಲಿಯೇ ಚಿತ್ರದಲ್ಲಿ ಬಿಡಿಸಲಾಗಿದೆ

1846ರಲ್ಲಿಯೇ ಚಿತ್ರದಲ್ಲಿ ಬಿಡಿಸಲಾಗಿದೆ

Noah's ark ನೌಕೆಯ ಪರಿಕಲ್ಪನೆ ಅಮೆರಿಕನ್ನರಿಗೆ ಹೊಸತೇನೂ ಅಲ್ಲ. 1846ರಲ್ಲಿಯೇ ಇದನ್ನು ಚಿತ್ರದಲ್ಲಿ ಬಿಡಿಸಲಾಗಿದೆ.

ಸುದೀರ್ಘಾವಧಿಗೆ ಅಲ್ಲಿಯೇ ಇರುತ್ತದೆ

ಸುದೀರ್ಘಾವಧಿಗೆ ಅಲ್ಲಿಯೇ ಇರುತ್ತದೆ

ಇನ್ನು ವಿಮಾನ ಆಗಸಕ್ಕೆ ಚಿಮ್ಮಿದ ಮೇಲೆ ಸುದೀರ್ಘಾವಧಿಗೆ ಅಲ್ಲಿಯೇ ಗಾಳಿಯಲ್ಲಿರುವಂತಾಗಲು ಇಂಧನ ಸಹಿತ ಸಕಲವನ್ನೂ ವಿಮಾನದಲ್ಲಿ ತುಂಬಿಟ್ಟಿರಲಾಗುತ್ತದೆ. ವಿಮಾನದೊಳಗೆ ಪರಿಚಾರಕ ಸಿಬ್ಬಂದಿ ಸದಾ ಸನ್ನದ್ಧ ಸ್ಥಿತಿಯಲ್ಲಿಯೇ ಇರುತ್ತಾರೆ. ಅದೊಮ್ಮೆ ಪೈಲಟುಗಳು ಒಳಬಂದು ಕುಳಿತುಕೊಳ್ಳುತ್ತಿದ್ದಂತೆ ರೊಯ್ಯನೆ ಹಾರಿಬಿಡುತ್ತದೆ.

ಸರಳಾತಿಸರಳ ಸಂಪರ್ಕ ತಂತ್ರಜ್ಞಾನ

ಸರಳಾತಿಸರಳ ಸಂಪರ್ಕ ತಂತ್ರಜ್ಞಾನ

ಅಣುಯುದ್ಧವೋ ಅಥವಾ ಪ್ರಳಯ/ DoomsDay ಘಟಿಸಿದರೆ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಗಾಳಿಯಲ್ಲೇ ಇದ್ದುಕೊಂಡು ಭೂಮಿಯ ಮೇಲಿನ ನಿಯಂತ್ರಣ ಕೇಂದ್ರಗಳಿಗೆ ಸಂದೇಶಗಳನ್ನು ರವಾನಿಸುವ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ. ಆದರೆ ಇದು ಸರಳಾತಿಸರಳ ಸಂಪರ್ಕ ತಂತ್ರಜ್ಞಾನದ್ದಾಗಿರುತ್ತದೆ. ಅಮೆರಿಕದ ವಾಯುಪಡೆ ನೇತೃತ್ವದಲ್ಲಿ ಈ ವಿಮಾನದ ಸೌಖ್ಯವನ್ನು ತನ್ಮೂಲಕ ದೇಶದ ಅಧ್ಯಕ್ಷರನ್ನು ಕಾಪಾಡಲಾಗುತ್ತಿದೆ.
(source: haryanaabtak.com)

English summary
When the world would end on the DoomsDay, US President and few others will survive in a airborne Noah’s arc. The steroid power low-on-tech Boeing is being prepared as doomsday plane, for a purpose of saving few lives in case of emergency or difficult situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X