ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಡ್ಡೋಡಿ ಸ್ಥಾವರ ವಿರುದ್ಧ ಉಪವಾಸ ಸತ್ಯಾಗ್ರಹ

By Mahesh
|
Google Oneindia Kannada News

ಉಡುಪಿ, ಜು.29: ನಿಡ್ಡೋಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರ ಮುಂತಾದ ಬೃಹತ್ ಯೋಜನೆಗಳು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕಾಲಿಡದಂತೆ ಮಾಡಬೇಕು. ಸರ್ಕಾರ ಇಂಥ ಸಂಸ್ಥೆಗಳಿಗೆ ಪರವಾನಿಗೆ ನೀಡಬಾರದು ಎಂದು ಸಾಂದೀಪನಿ ಸಾಧಾನಾಶ್ರಮದ ಈಶ ವಿಠ್ಠಲದಾಸ ಹೇಳಿದ್ದಾರೆ.

ನಿಡ್ಡೋಡಿಯಲ್ಲಿ ಪ್ರಸ್ತಾವಿತ ಗೊಂಡಿರುವ 4,000 ಮೆಗಾವ್ಯಾಟ್ ನ ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧ ನಿಡ್ಡೋಡಿ ಮಾತೃಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ವತಿಯಿಂದ ಭಾನುವಾರ ಬೃಹತ್ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ನಿಡ್ಡೋಡಿ ಪರಿಸರ ಮತ್ತು ಪುತ್ತಿಗೆಯಲ್ಲಿ ಅಂಗಡಿ ಮುಂಗ್ಗಟ್ಟುಗಳು ಬಂದ್ ಆಗಿದ್ದವು. ಹಲವು ಸಂಘ-ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ನೀಡಿದ್ದವು. ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಬಸ್ ಸಹಿತ ವಾಹನಗಳ ಓಡಾಟ ವಿರಳವಾಗಿದ್ದವು.

ಪುರುಷರು- ಮಹಿಳೆಯರು, ಹಿರಿಯರು, ಮತ್ತು ಕಿರಿಯರು ಸೇರಿ ಸುಮಾರು ಎರಡು ಸಾವಿರಕ್ಕಿಂತಲೂ ಹೆಚ್ಚು ಜನರು ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಸ್ಥಾವರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Hunger strike- protest against UMPP, Niddodi

ದೇಶದ ಮುಂದುವರಿದ ರಾಜ್ಯಗಳಲ್ಲಿ ಪರಿಸರ ವಿರೋಧಿ ಕಂಪೆನಿಗಳು ಬಂದಾಗ ಅಲ್ಲಿನ ಜನರು ಅದನ್ನು ವಿರೋಧಿಸಿ ಓಡಿಸಿದ್ದಾರೆ. ಅಂತಹ ಕಂಪೆನಿಗಳನ್ನೆಲ್ಲಾ ಬಳಿಕ ಕರಾವಳಿ ಜಿಲ್ಲೆಗಳಲ್ಲಿ ಸ್ಥಾಪಿಸಲಾಗುತ್ತಿದೆ. ಈ ಮೊದಲ ಜಿಲ್ಲೆಯಲ್ಲಿ ಎಸ್ ಇಝೆಡ್, ನಾಗಾರ್ಜುನದಂಥ ಕಂಪೆನಿಗಳು ಕಾಲಿಟ್ಟಾಗಲೂ ಗ್ರಾಪಂ ವ್ಯಾಪ್ತಿಗಳಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆದಿದ್ದರು ಆದರೆ ಪ್ರಯೋಜನಕಾರಿಯಾಗಲಿಲ್ಲ ಎಂದರು.

ಜನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುವ ಹಾನಿಕಾರಕ ಕಂಪೆನಿಗಳ ಬಗ್ಗೆ ಜನತೆ ತೀವ್ರ ಹೋರಾಟಕ್ಕೆ ಮುಂದಾಗ ಬೇಕು. ನಿಡ್ಡೋಡಿ ಪವರ್ ಪ್ರಾಜೆಕ್ಟ್ ವಿರುದ್ಧ ತೀವ್ರವಾದ ಹೋರಾಟದ ಜತೆಗೆ ಗ್ರಾಪಂ ಕೂಡಾ ಅಧಿಸೂಚನೆ ಹಾಕಿ ನಿರ್ಣಯ ಮಾಡಿದರೆ ಕಂಪೆನಿ ಇಲ್ಲಿ ಕಾಲೂರಲು ಸಾಧ್ಯವಾಗದು ಎಂದು ಈಶ ವಿಠ್ಠಲದಾಸ ಸ್ವಾಮೀಜಿ ನುಡಿದರು.

ಸಚಿವರ ಅಭಯ: ರಾಜ್ಯ ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಪ್ರತಿಭಟನೆ ಆರಂಭಗೊಳ್ಳುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿ ಈ ಯೋಜನೆ ಇಲ್ಲಿಗೆ ಬರಲು ತಾನು ಬಿಡಲಾರೆ. ಮೊದಲಿನಿಂದಲೂ ಜನಪರ ಹೋರಾಟಕ್ಕೆ ಬೆಂಬಲಿಸುತ್ತಾ ಬಂದಿದ್ದೇನೆ. ಈಗಲೂ ಜನಪರವಾದ ಮಂಡಿಸುತ್ತೇನೆ ಎಂದು ಭರವಸೆ ನೀಡಿದರು. [ಅಭಯಚಂದ್ರ ಜೈನ್ ನೀಡಿದ್ದ ಭರವಸೆ ಏನು?]

ಕಟೀಲು ಕಾಲೇಜಿನ ಪ್ರಾಧ್ಯಾಪಕ ಸೋಂದಾ ಭಾಸ್ಕರ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ನಾಯಕರಾದ ವಿಲಾಸ್ ನಾಯಕ್, ಸುಬೇಧರ್ ನಾಯಕ್ ಧರಣೇಂದ್ರ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದರು.

ಬಿಜೆಪಿ ಮುಖಂಡರಾದ ಜಗದೀಶ ಅಧಿಕಾರಿ, ಉಮಾನಾಥ ಕೋಟ್ಯಾನ್, ರೈತ ಮುಖಂಡ ರೋಹಿತಾಕ್ಷ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಳಿಕ ಮಾತೃಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಲ್ಫೋನ್ಸ್ ಡಿಕೋಸ್ಟಾನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧ ಮೂಡುಬಿದಿರೆ ತಹಶೀಲ್ದಾರ್ ಶಿವಕುಮಾರ್ ರಿಗೆ ಮನವಿ ಸಲ್ಲಿಸಿದರು.

English summary
Unaffected by the heavy rain, more than 3,000 people participated in the day long hunger strike- protest organised by Matru Bhoomi Horata Samithi against setting up of an Ultra Mega Power Project (UMPP) at Niddodi on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X