ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾಜ ಸೇವಕರಿಗಾಗಿ ವಿಶಿಷ್ಟ ದಿನಾಚರಣೆ

By Mahesh
|
Google Oneindia Kannada News

ಬೆಂಗಳೂರು, ಜು.29: ಬಸವನಗುಡಿಯ ಸಮಾಜ ಸೇವಕರ ಸಮಿತಿಯು ತನ್ನ 11ನೇ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 1 ರಂದು ನಗರದ ಕೆ.ಹೆಚ್.ಕಲಾಸೌಧದಲ್ಲಿ ಸಮಾಜ ಸೇವಕರ ದಿನಾಚರಣೆಯನ್ನು ಹಮ್ಮಿಕೊಂಡಿದೆ.

2002 ಆಗಸ್ಟ್ 1 ರಂದು ಆರಂಭವಾದ ಸಮಿತಿಯು 2013 ಆಗಸ್ಟ್ 1 ರಂದು ಸಮಾಜ ಸೇವಕರ ದಿನಾಚರಣೆಯ ದಿನಾಚರಣೆಯ 11ನೇ ವಾರ್ಷಿಕೋತ್ಸವವನ್ನು ಬೆಂಗಳೂರಿನ ಕೆ.ಹೆಚ್.ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತನಗರದಲ್ಲಿ ಆಚರಿಸಿಕೊಳ್ಳುತ್ತಿದೆ. ಅಂದು ಇಬ್ಬರು ಮಹನೀಯರನ್ನು ಸಮಿತಿ ಗುರುತಿಸಿ ಅವರನ್ನು ವಾಡಿಕೆಯಂತೆ ಗೌರವಿಸುತ್ತದೆ.

ಇದುವರೆಗೂ ಸುಮಾರು 23 ವ್ಯಕ್ತಿಗಳನ್ನು ವಿವಿಧ ಕ್ಷೇತ್ರಗಳಿಂದ ಗುರುತಿಸಿ ಗೌರವಿಸಲಾಗಿದೆ. ಈ ಬಾರಿ ಮೈಸೂರಿನ ಅನಂತಕುಮಾರ್. ಎಮ್ .ಆರ್. ಕಲಿಯುವ ಮನೆ, ಮತ್ತು ಶ್ರೀ ನೀಲಕಂಠಮೂರ್ತಿ ಓದೇಕಾರ ಫಾರ್ಮ, ನಂದಿಹಳ್ಳಿ, ತುಮಕೂರು ಅವರ ಸಾಮಾಜಿಕ ಕಾಳಜಿಗಾಗಿ ಮುಡಿಪಾಗಿಟ್ಟಿರುವ ಜೀವನೋದ್ದೇಶವನ್ನು ಗೌರವಿಸುತ್ತದೆ. ಈ ಇಬ್ಬರು ಮಹನೀಯರ ಸಾಧನೆಗಳ ಕುರಿತಾದ ಮಾಹಿತಿ ಇಲ್ಲಿದೆ.

ಕಾರ್ಯಕ್ರಮದ ವಿವರ:

* ಆಗಸ್ಟ್ 1, ಗುರುವಾರ ಸಂಜೆ 6 ಕ್ಕೆ ಆರಂಭ. ಇಬ್ಬರು ಸಮಾಜ ಸೇವಕರಿಗೆ ಗೌರವ ಸಮರ್ಪಣೆರೆ.
* ಡಾ.ಆರ್.ಬಾಲಸುಬ್ರಮಣ್ಯಮ್ ಅಧ್ಯಕ್ಷೀಯ ಭಾಷಣ.

* ರವಿ ಮುರೂರು ಹಾಗೂ ತ್ರೀಲೊಚನ್ ಕಂಪ್ಲಿ ಅವರಿಂದ ಭಾವಗೀತೆ ಜಾನಪದ ಗೀತೆಗಳು ಮತ್ತು ಸುಗಮ ಸಂಗೀತ ಕಾರ್ಯಕ್ರಮ

ಸ್ಥಳ: ಕೆ.ಎಚ್. ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತನಗರ, ಬೆಂಗಳೂರು-50

ಈ ಇಬ್ಬರು ಮಹನೀಯರ ಸಾಧನೆಗಳ ಕುರಿತಾದ ಮಾಹಿತಿ ಇಲ್ಲಿದೆ.

Samaja Sevakara Samiti Basavanagudi, Social Workers Day on Aug 1

1) ಅನಂತಕುಮಾರ್. ಎಮ್ .ಆರ್. ಕಲಿಯುವ ಮನೆ, ಮೈಸೂರು. [ದಿವ್ಯದೀಪ ಚಾರಿಟಬಲ್ ಟ್ರಸ್ಟ್ ಬಗ್ಗೆ ಓದಿ]
ಮೈಸೂರಲ್ಲಿ ಒಂದು ಅದ್ಭುತ ಕಲಿಯುವ ಮನೆ: ದಿವ್ಯದೀಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಸ್ಥಾಪನೆಗೊಂಡಿರುವ ಕಲಿಯುವ ಮನೆ ಮೈಸೂರು-ಮಾನಂದವಾಡಿ ರಸ್ತೆಯ ಕೆಂಚಲಗೂಡು ಗ್ರಾಮದಲ್ಲಿದೆ. ಈ ಶಾಲೆ ಇತರೆ ಶಾಲೆಗಳಿಗೆ ಹೋಲಿಸಿದರೆ ವಿಶಿಷ್ಟವಾಗಿಯೂ, ವಿಭಿನ್ನವಾಗಿಯೂ ಗಮನ ಸೆಳೆಯುತ್ತದೆ.

ಅಂಗವಿಕಲರು, ಅನಾಥರು, ಶಾಲೆಬಿಟ್ಟವರು, ಬಡತನದಿಂದಾಗಿ ಕಲಿಕೆಯಿಂದ ವಂಚಿತರಾದ ವಿದ್ಯಾರ್ಥಿಗಳು, ಬಾಲಕಾರ್ಮಿಕರು, ಬೀದಿ ಮಕ್ಕಳು ಹೀಗೆ ಎಂದಿನ ಬದುಕಿನಿಂದ ವಂಚಿತರಾದ ಮಕ್ಕಳು ಇಲ್ಲಿ ಆಶ್ರಯ ಪಡೆದಿದ್ದಾರೆ. ಇವರಿಗೆ ಕಲಿಕೆಯೊಂದಿಗೆ ಹಸಿದ ಹೊಟ್ಟೆಗೆ ಅನ್ನ, ಮೈಮುಚ್ಚಲು ಬಟ್ಟೆ ಜೊತೆಗೆ ನಾವು ಅನಾಥರೆಂಬ ಭಾವನೆ ಬಾರದಂತೆ ಹೆತ್ತವರಂತೆಯೇ ಪ್ರೀತ್ಯಾದರ ತೋರಿ ಬೆಳೆಸಲಾಗುತ್ತಿದೆ.

ಇಂಥ ಒಂದು ಕನಸು ಸಾಕಾರಗೊಳ್ಳಲು ಕಾರಣಕರ್ತರಾದವರು ಇಂಜಿನಿಯರ್ ಎಂ.ಆರ್.ಅನಂತಕುಮಾರ್. ಅವರು ಚಿಕ್ಕಂದಿನಲ್ಲಿಯೇ ಎಲ್ಲರನ್ನೂ ಕಳೆದುಕೊಂಡು ಅನಾಥಪ್ರಜ್ಞೆಯಿಂದ ಬೆಳೆದವರು. ಹಾಗಾಗಿ ಮಕ್ಕಳಿಗೆ ಆಸರೆ ನೀಡಬೇಕೆಂಬುದು ಅವರ ಬಯಕೆಯಾಗಿತ್ತು. ಇದೇ ಕಲಿಯುವ ಮನೆ ಹುಟ್ಟಿಗೆ ಪ್ರೇರಣೆಯಾಯಿತು.

ಅನಂತಕುಮಾರ್ 1992 ರಲ್ಲಿ ಮೈಸೂರಿನ ಶ್ರೀರಾಂಪುರದ ಬೀದಿ ಮಕ್ಕಳಿಗೆ, ಪರೀಕ್ಷೆಯಲ್ಲಿ ಫೇಲಾದ ಮಕ್ಕಳಿಗೆ ಪಾಠ ಹೇಳಿಕೊಡುತ್ತಾ ದಿವ್ಯ ಟ್ರಸ್ಟ್‌ಗೆ ಬುನಾದಿ ಹಾಕಿದರು. ಬಳಿಕ ಅಧಿಕೃತವಾಗಿ ಸಂಸ್ಥೆಯೊಂದನ್ನು ಸ್ಥಾಪಿಸಿ ಸ್ಕ್ರೀನ್ ಪ್ರಿಂಟಿಂಗ್ ತೆರೆದು ತರಬೇತಿ ನೀಡುವ ಮೂಲಕ ಉದ್ಯೋಗದ ಮಾರ್ಗ ತೋರಿಸಿದರು. ಇವರ ಗರಡಿಯಲ್ಲಿ ಬೆಳೆದ ಮಕ್ಕಳು ತಯಾರಿಸಿದ ಗ್ರೀಟಿಂಗ್ಸ್ ಕಾರ್ಡ್, ಮತ್ತಿತರ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ದೊರೆತು ಒಂದಷ್ಟು ಆದಾಯವನ್ನು ತಂದು ಕೊಟ್ಟಿತು.

2005ರಲ್ಲಿ ಕಲಿಯುವ ಮನೆಯನ್ನು ಮಾನಂದವಾಡಿ ರಸ್ತೆಯಲ್ಲಿರುವ ಕೆಂಚಲಗೂಡು ಗ್ರಾಮದಲ್ಲಿ ದಾನಿಗಳ ಸಹಕಾರದೊಂದಿಗೆ 2 ಎಕರೆ 38 ಗುಂಟೆ ವಿಸ್ತೀರ್ಣದ ಪ್ರದೇಶದಲ್ಲಿ ಆರಂಭಿಸಲಾಯಿತು. ಮೊದಲಿಗೆ ಸುಮಾರು 14 ಮಕ್ಕಳು ಈ ಶಾಲೆಯಲ್ಲಿ ಆಶ್ರಯ ಪಡೆದಿದ್ದರೆ, ಈಗ 58 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಅವರಲ್ಲಿ 25ಮಕ್ಕಳು ಇಲ್ಲಿಯೇ ಆಶ್ರಯ ಪಡೆದಿದ್ದರೆ, ಉಳಿದ ಮಕ್ಕಳು ಸುತ್ತಮುತ್ತಲಿನ ಗ್ರಾಮದಿಂದ ಬಂದು ಕಲಿಯುತ್ತಿದ್ದಾರೆ. ಅನಂತ್‌ಕುಮಾರ್ ಅವರ ಈ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಅವರ ಪತ್ನಿ ಪದ್ಮ ಅನಂತ್‌ಕುಮಾರ್.

2) ಶ್ರೀ ನೀಲಕಂಠಮೂರ್ತಿ ಓದೇಕಾರ ಫಾರ್ಮ, ನಂದಿಹಳ್ಳಿ, ತುಮಕೂರು. ರೈತ ಕೃಷಿ ಸಂಶೋಧಕ,

15 ವರ್ಷಗಳ ಹಿಂದೆ ಇವರು ಬ್ಯಾಂಕ್ ನಲ್ಲಿ ಉದ್ಯೋಗದಲ್ಲಿದ್ದು ಆ ಕೆಲಸಕ್ಕೆ ಗುಡ್ ಬಾಯ್ ಹೇಳಿ ಅದರಲ್ಲಿ ಬಂದ ಹಣದಿಂದ ತುಮಕೂರು ಬಳಿ ನಂದಿಹಳ್ಳಿ ಯ ಹತ್ತಿರ ನಿಸ್ಸಾರ ಭೂಮಿಯನ್ನು ಖರಿದಿಸಿದರು.ಇವರ ಈ ಹುಚ್ಚು ಸಾಹಸಕ್ಕೆ ಮನೆಯವರ ವಿರೋಧವಿತ್ತು. ತಮಗಿದ್ದ ಎಲ್ಲ ಅಡೆತಡೆಗಳನ್ನು ಮೀರಿ ಪ್ರಾರಂಭದ ದಿನಗಳಲ್ಲಿ ಬಹಳ ಕಷ್ಟ ಪಟ್ಟು ಒಂದು ವ್ರತದಂತೆಯೆ ದುಡಿದು ಬಂಜರು ನೆಲವನ್ನು ಕೃಷಿಯೋಗ್ಯನೆಲವನ್ನಾಗಿ ಮಾರ್ಪಡಿಸಿ ಜನರ ಮೆಚ್ಚುಗೆಗೆ ಪಾತ್ರರಾದರು .

ಕುಸಿದಿದ್ದ ಅಂತರ್ಜಲದ ಮಟ್ಟ ವನ್ನು ಕ್ರಮೇಣ ಹತ್ತು ವರ್ಷಗಳಲ್ಲಿ ಉತ್ತಮಪಡಿಸಿದರು. ಅವರ ತೋಟದಲ್ಲಿ ಸಾವಯವ ಕೃಷಿಮತ್ತು ಅದರ ಲಾಭದ ಬಗ್ಗೆ ಸಾವಿರಾರು ರೈತರಿಗೆ ಉಚಿತ ಮಾಹಿತಿಯನ್ನು ನೀಡಿ ಜಾಗೃತಿ ಮೂಡಿಸುತ್ತ ಬಂದಿದ್ದಾರೆ. ರೈತರಿಗಾಗಿ ವಿಶೇಷ ತರಬೇತಿ ಶಿಬಿರ ಗಳನ್ನು ನಿರಂತರವಾಗಿ ಏರ್ಪಡಿಸುತ್ತಿರುತ್ತಾರೆ.

ಸಹಜ ಹಾಗೂ ಸಾವಯವ ಪದ್ದತಿಯನ್ನೇ ಅನುಸರಿಸಿ ಒಳ್ಳೆಯ ಇಳುವರಿ ಪಡೆದು ಮಾದರಿ ರೈತ ಎನಿಸಿದ್ದಾರೆ ಹಾಗೂ ತೋಟದಲ್ಲಿ ಬೆಳೆದ ಗಿಡಮೂಲಿಕೆಗಳಿಂದ ಸಾಬೂನು, ಕೇಶತೈಲ,ಫೇಸ್ ಪ್ಯಾಕ್ ಹೀಗೆ ಹತ್ತು ಹಲವು ಉತ್ಪನ್ನಗಳನ್ನು ತಯಾರು ಮಾಡಿ ಜನಮನ್ನಣೆ ಗಳಿಸಿದ್ದಾರೆ. ಆಸಕ್ತರಿಗೆ ಇವುಗಳನ್ನು ತಯಾರಿಸುವ ವಿಧಾನವನ್ನು ಹೇಳಿಕೊಡುತ್ತಾರೆ. ಇವರ ತೋಟದಲ್ಲಿ ಎರೆಹುಳು ಸಾಕಣೆ ಮಾಡುತ್ತಾರೆ. ಬಯೋ ಗ್ಯಾಸ್, ಸೋಲಾರ್ ಬಳಕೆಯು ಇದೆ. ಅವರ ತೋಟದಲ್ಲಿ ಸುಮಾರು 500ರಕ್ಕೂ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದ ಸಸ್ಯಪ್ರಬೇಧಗಳನ್ನು ಪೋಷಣೆ ಮಾಡುತ್ತಿದ್ದಾರೆ. ತೋಟದ ಸ್ವಲ್ಪ ಭಾಗವನ್ನು ನೈಸರ್ಗಿಕ ಕಾನನವನ್ನಾಗಿ ಅಭಿವೃದ್ಧಿಪಡಿಸುವುದರ ಮೂಲಕ ಹಲವು ಪಕ್ಷಿ ಪ್ರಾಣಿ ಪ್ರಭೇಧಗಳಿಗೆ ಸಹಜ ಸಮೃದ್ಧ ತಾಣವನ್ನು ಒದಗಿಸಿದ್ದಾರೆ.

English summary
Basavanagudi's Samaja Sevakara Samiti organised Social Workers Day at KH Kala Soudha, Hanumanthanagar, Bangalore on Aug.1. Educationist M.R Ananthakumar and Agriculturist Neelakanta Murthy will be honoured in this function, followed by Ravi murur and Trilochan Kampli's musical program
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X