ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸದಿ ವಿಗ್ರಹ ಕಳವು ಪ್ರಮುಖ ಆರೋಪಿ ಬಲೆಗೆ

By Mahesh
|
Google Oneindia Kannada News

Moodabidri Basadi Idol recovered, Kingpin held in Hyderabad
ಬೆಂಗಳೂರು, ಜು.28: ಮೂಡಬಿದಿರೆ ಜೈನ ಬಸದಿಗಳಿಂದ ಕಳುವಾಗಿದ್ದ ಬಹುಮೌಲ್ಯದ ವಿಗ್ರಹ ಪತ್ತೆಯಾಗಿವೆ. ಈ ಭಾರಿ ಕಳ್ಳತನ ಹಿಂದಿನ ರುವಾರಿ ಪ್ರಮುಖ ಆರೋಪಿ ಘನಶ್ಯಾಮ್ ಅಲಿಯಾಸ್ ಸಂತೋಷ್ ದಾಸ್ ನನ್ನು ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದೆ.

ಪ್ರಮುಖ ಆರೋಪಿ ಘನಶ್ಯಾಮ್ ಬಂಧವಾಗಿದ್ದು ಸಂಜೆ ವೇಳೆಗೆ ಮಂಗಳೂರಿಗೆ ಕರೆತರಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ಘನಶ್ಯಾಮ್ ಬಳಿ ಇದ್ದ ವಿಗ್ರಹಗಳೆಷ್ಟು? ಎಲ್ಲಾ ವಿಗ್ರಹಗಳು ಸಿಕ್ಕವೇ? ವಿಗ್ರಹಗಳ ಮೌಲ್ಯ ಎಷ್ಟು? ಎಂಬ ಮಾಹಿತಿ ಇನ್ನೂ ಅಧಿಕೃತವಾಗಿ ಹೊರ ಹಾಕಲಾಗಿಲ್ಲ.

ಇತ್ತೀಚೆಗೆ ಕೋಲಾರದಲ್ಲಿ ಇಬ್ಬರನ್ನು ಬಂಧಿಸಿದ್ದ ಪೊಲೀಸರು ಕೆಲ ವಿಗ್ರಹಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಇನ್ನೂ ಮಿಕ್ಕ ವಿಗ್ರಹಗಳಿಗಾಗಿ ಶೋಧ ಕಾರ್ಯ ಮುಂದುವರೆದಿತ್ತು. ಜು.15 ರಂದು ಒಡಿಸ್ಸಾ ಭುವನೇಶ್ವರ್ ನಲ್ಲಿ ದಿಗಂಬರ್ ಮೊಹಾಂತಿ ಹಾಗೂ ಘನಶ್ಯಾಮ್ ಪತ್ನಿ ದೀಪ್ತಿಮಯಿಯನ್ನು ಬಂಧಿಸಲಾಗಿತ್ತು. ಇವರು ಕಳ್ಳತನದ ಮಾಲನ್ನು ಭದ್ರಪಡಿಸುವಲ್ಲಿ ಘನಶ್ಯಾಮ್ ಪರಮಾಪ್ತರು ಎಂದು ತಿಳಿದು ಬಂದಿದೆ. ಎಸ್ಪಿ ರವಿಕುಮಾರ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 15 ವಿಗ್ರಹಗಳು ವಶವಾಗಿದೆ ಎನ್ನಲಾಗಿದೆ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಎಣಿಕೆ ಪ್ರಕಾರ ಇನ್ನೂ 7 ವಜ್ರಖಚಿತ ಮೂರ್ತಿಗಳು ಸಿಗಬೇಕಿದೆ.

ಆತ ಜನಪ್ರಿಯ ವೈದ್ಯರ ಮನೆಯಲ್ಲಿ ಕಳ್ಳತನ ಮಾಡಿದ್ದ. ಮಂಗಳೂರು ಜೈಲಿನಿಂದ ಪರಾರಿಯಾಗಿದ್ದ. ಆಂಧ್ರ, ಒರಿಸ್ಸಾ ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ನೆಲೆ ಮಾಡಿ ಕಳ್ಳತನ ಆಗುತ್ತದೆ ಮರೆತು ಬಿಡುತ್ತೇವೆ. ದೇವಸ್ಥಾನವನ್ನು ಕಾಯುವ ಕೆಲಸ ಆಗಬೇಕು. ಇನ್ಮುಂದೆ ಈ ರೀತಿ ಕೃತ್ಯ ಜರುಗದಂತೆ ನೋಡಿಕೊಳ್ಳಬೇಕು. ಧರ್ಮಸ್ಥಳ ಧಮಾರ್ಧಿಕಾರಿ ವೀರೇಂದ್ರ ಹೆಗ್ಗಡೆ ಸೇರಿದಂತೆ ಜೈನ ಸಮುದಾಯದವರ ಪ್ರಾರ್ಥನೆ, ಪೊಲೀಸ್ ಪಡೆಯ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ನಾವು ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿಗಳು ಟಿವಿ 9 ಸುದ್ದಿ ವಾಹಿನಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಪೊಲೀಸ್ ಆಯುಕ್ತ ಮನೀಶ್ ಕರ್ಬೀಕರ್ ಮಾರ್ಗದರ್ಶನದಲ್ಲಿ ಎಸಿಪಿ ರವಿ ಕುಮಾರ್ ನೇತೃತ್ವದ ತನಿಖಾ ತಂಡ ಚುರುಕಾಗಿ ಕಾರ್ಯ ನಿರ್ವಹಿಸಿದೆ. ಉಡುಪಿ ಹಾಗೂ ಕಾರ್ಕಳದಲ್ಲಿ ನಡೆದ ಸರಣಿ ಜ್ಯುವೆಲ್ಲರಿ ಕಳ್ಳತನ ಪ್ರಕರಣಗಳಲ್ಲಿ ಗ್ಯಾಸ್ ಕಟ್ಟರ್ ಬಳಕೆಯಾಗಿತ್ತು. ಈ ಪ್ರಕರಣದಲ್ಲೂ ಗ್ಯಾಸ್ ಕಟ್ಟರ್ ಬಳಸಲಾಗಿದೆ. ಬಸದಿಯ ಹಿಂಬದಿಯಿಂದ ನುಗ್ಗಿ ವಿಗ್ರಹಗಳನ್ನು ಕಳ್ಳತನ ಮಾಡಲಾಗಿದೆ

ಕಳ್ಳತನ ನಡೆದ ಸಂದರ್ಭದಲ್ಲಿ ಅಮೆರಿಕದಲ್ಲಿದ್ದ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಗಳು ತಮ್ಮ ಪ್ರವಾಸ ಮೊಟಕುಗೊಳಿಸಿ ವಾಪಸ್ಸಾಗಿದ್ದರು. ಜೈನ ಬಸದಿಯ 15 ರತ್ನಖಚಿತ ವಿಗ್ರಹಗಳು ಕೊಹಿನೂರ್ ವಜ್ರಕ್ಕಿಂತ ಅಮೂಲ್ಯವಾದವು ಮತ್ತು ಅಷ್ಟೇ ಪವಿತ್ರವಾದವು ಎಂದು ಹೇಳಿದ್ದರು.

English summary
In connection with the recent theft of idols from Moodabidri Basadis, Karnataka police arrested kingpin Ghanshyam alias Santosh das in Andhra pradesh. He is likely to brought to Mangalore by today evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X