ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ಹೆಚ್ಚು ಕಾಲ ಕೆಲಸ ಮಾಡುವ ರಾಷ್ಟ್ರಗಳು ಇವೇ

By Srinath
|
Google Oneindia Kannada News

ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಒಕ್ಕೂಟವು ತನ್ನ ಸದಸ್ಯ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಕಾಲ ಕೆಲಸ ಮಾಡುವ ರಾಷ್ಟ್ರಗಳು ಯಾವುವು ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಆಶ್ಚರ್ಯವೆಂದರೆ ಜಪಾನಿನಲ್ಲಿ ಜನ ಮೈಬಗ್ಗಿಸಿ ದುಡಿಯುತ್ತಾರೆ ಎಂಬ ಮಾತಿದೆ. ಆದರೆ ಈ ಪಟ್ಟಿಯಲ್ಲಿ ಜಪಾನ್ 15ನೇ ಸ್ಥಾನದಲ್ಲಿದೆ. ಆದರೆ ಅಗ್ರ ಸ್ಥಾನದಲ್ಲಿರುವುದು ದಕ್ಷಿಣ ಕೋರಿಯಾ. ಇಲ್ಲಿ ವ್ಯಕ್ತಿಯೊಬ್ಬ ವಾರ್ಷಿಕ ಸರಾಸರಿ ಕೆಲಸ ಮಾಡುವ ಅವಧಿ 2193 ಗಂಟೆ ಕಾಲ ದುಡಿಯುತ್ತಾನೆ. ಅಂದರೆ ವಾರಕ್ಕೆ ಸರಾಸರಿ 44 ಗಂಟೆ ಕಾಲ ದುಡಿಯುತ್ತಾರೆ. ಅದರಾಚೆಗೆ 14 ದಿನಗಳ ರಜೆ ಇರುತ್ತದೆ.

ಆದರೆ ಸುದೀರ್ಘವಾಗಿ ದುಡಿದರೆ ಉತ್ಪಾದಕತೆ ಹೆಚ್ಚಾಗುತ್ತದೋ ಅಥವಾ ಗುಣಮಟ್ಟದ ಕೆಲಸ ಮಾಡಿದಾಗ ಉತ್ಪಾದಕತೆ ವೃದ್ಧಿಸುತ್ತದೋ ಎಂಬುದು ಎಂದಿಗೂ ಚರ್ಚಾರ್ಹ ವಿಷಯವೇ ಎಂದು ಸಮೀಕ್ಷೆ ಕೈಗೊಂಡಿದ್ದ Organisation for Economic Co-operation and Development -OECD ಹೇಳಿದೆ.

ದೀರ್ಘಾವಧಿಗೆ ದುಡಿಯುವುದು ಕಾರ್ಪೊರೇಟ್ ಕಲ್ಚರ್:
ಕಾಯಕವೇ ಕೈಲಾಸ ಎನ್ನುವ ಕರ್ನಾಟಕ/ಭಾರತವನ್ನು ಈ ಸಮೀಕ್ಷೆಯಲ್ಲಿ ಪರಿಗಣಿಸಿಲ್ಲ. ಆದರೆ ಪೂನಾ, ಬಾಂಬೆ ಅಷ್ಟೇ ಏಕೆ ನಮ್ಮ ಬೆಂಗಳೂರನ್ನು ಪರಿಗಣಿಸಿದಾಗ ಬೆಳಗ್ಗೆ 5 ಗಂಟೆಗೇ ಎದ್ದು ಮನೆ ಬಿಡುವ ಉದ್ಯೋಗಸ್ಥ ಮಂದಿ ರಾತ್ರಿಯ ವೇಳೆಗೆ ಕೆಲಸದಿಂದ ವಾಪಸಾಗುವುದು.

ಅಂದಹಾಗೆ, ತೀರಾ ಮೊನ್ನೆಮೊನ್ನೆಯವರೆಗೂ ಅಂದರೆ ಐಟಿ/ಬಿಟಿ ಪ್ರವೇಶಕ್ಕೆ ಮುನ್ನ ಬೆಳಗ್ಗೆ ಸಾವಕಾಶವಾಗಿ 10-10.30ಕ್ಕೆ ಕಚೇರಿ ತಲುಪಿ ಸಂಜೆ 5 ಗಂಟೆಯೊಳಗೆ ಕಚೇರಿ ಕೆಲಸ ಮುಗಿಸಿ, ಸ್ನೇಹಿತರು/ಕಲೀಗುಗಳ ಜತೆ ಸಂಜೆ ವಾಕಿಂಗ್ ಹೋಗುತ್ತಿದ್ದ ಆರಾಮದಾಯಕ ದಿನಗಳು ಮರುಕಳಿಸುವ ಸಾಧ್ಯತೆಗಳು ಕ್ಷೀಣ ಅಂತಲೇ ಹೇಳಬಹುದು. ರಾಷ್ಟ್ರಪಿತ ಮಾಹಾತ್ನ ಗಾಂಧೀಜಿ ಅವರೇ ಹೇಳಿದ್ದರಲ್ಲವೇ ಆರಾಮ್ ಹರಾಮ್ ಹೈ ಎಂದು.

ನಂಬರ್ 1. ದಕ್ಷಿಣ ಕೋರಿಯಾ

ನಂಬರ್ 1. ದಕ್ಷಿಣ ಕೋರಿಯಾ

ವ್ಯಕ್ತಿಯೊಬ್ಬ ವಾರ್ಷಿಕ ಸರಾಸರಿ ಕೆಲಸ ಮಾಡುವ ಅವಧಿ
2193 ಗಂಟೆ ಕಾಲ

2 ಗ್ರೀಸ್

2 ಗ್ರೀಸ್

ವ್ಯಕ್ತಿಯೊಬ್ಬ ವಾರ್ಷಿಕ ಸರಾಸರಿ ಕೆಲಸ ಮಾಡುವ ಅವಧಿ
2109 ಗಂಟೆ ಕಾಲ

3 ಚಿಲಿ

3 ಚಿಲಿ

ವ್ಯಕ್ತಿಯೊಬ್ಬ ವಾರ್ಷಿಕ ಸರಾಸರಿ ಕೆಲಸ ಮಾಡುವ ಅವಧಿ
2068 ಗಂಟೆ ಕಾಲ

4. ರಷ್ಯಾ

4. ರಷ್ಯಾ

ವ್ಯಕ್ತಿಯೊಬ್ಬ ವಾರ್ಷಿಕ ಸರಾಸರಿ ಕೆಲಸ ಮಾಡುವ ಅವಧಿ
1976 ಗಂಟೆ ಕಾಲ

5 ಹಂಗೇರಿ

5 ಹಂಗೇರಿ

ವ್ಯಕ್ತಿಯೊಬ್ಬ ವಾರ್ಷಿಕ ಸರಾಸರಿ ಕೆಲಸ ಮಾಡುವ ಅವಧಿ
1961 ಗಂಟೆ ಕಾಲ

6 ಪೋಲಾಂಡ್

6 ಪೋಲಾಂಡ್

ವ್ಯಕ್ತಿಯೊಬ್ಬ ವಾರ್ಷಿಕ ಸರಾಸರಿ ಕೆಲಸ ಮಾಡುವ ಅವಧಿ
1939 ಗಂಟೆ ಕಾಲ

7 ಇಸ್ರೇಲ್

7 ಇಸ್ರೇಲ್

ವ್ಯಕ್ತಿಯೊಬ್ಬ ವಾರ್ಷಿಕ ಸರಾಸರಿ ಕೆಲಸ ಮಾಡುವ ಅವಧಿ
1889 ಗಂಟೆ ಕಾಲ

8 ಎಸ್ಟೋನಿಯಾ

8 ಎಸ್ಟೋನಿಯಾ

ವ್ಯಕ್ತಿಯೊಬ್ಬ ವಾರ್ಷಿಕ ಸರಾಸರಿ ಕೆಲಸ ಮಾಡುವ ಅವಧಿ
1879 ಗಂಟೆ ಕಾಲ

9 ಟರ್ಕಿ

9 ಟರ್ಕಿ

ವ್ಯಕ್ತಿಯೊಬ್ಬ ವಾರ್ಷಿಕ ಸರಾಸರಿ ಕೆಲಸ ಮಾಡುವ ಅವಧಿ
1877 ಗಂಟೆ ಕಾಲ

10 ಮೆಕ್ಸಿಕೋ

10 ಮೆಕ್ಸಿಕೋ

ವ್ಯಕ್ತಿಯೊಬ್ಬ ವಾರ್ಷಿಕ ಸರಾಸರಿ ಕೆಲಸ ಮಾಡುವ ಅವಧಿ
1866 ಗಂಟೆ ಕಾಲ

11 ಸ್ಲೊವಾಕ್ ಗಣರಾಜ್ಯ

11 ಸ್ಲೊವಾಕ್ ಗಣರಾಜ್ಯ

ವ್ಯಕ್ತಿಯೊಬ್ಬ ವಾರ್ಷಿಕ ಸರಾಸರಿ ಕೆಲಸ ಮಾಡುವ ಅವಧಿ
1786 ಗಂಟೆ ಕಾಲ

12 ಅಮೆರಿಕ

12 ಅಮೆರಿಕ

ವ್ಯಕ್ತಿಯೊಬ್ಬ ವಾರ್ಷಿಕ ಸರಾಸರಿ ಕೆಲಸ ಮಾಡುವ ಅವಧಿ
1778 ಗಂಟೆ ಕಾಲ

13 ಇಟಲಿ

13 ಇಟಲಿ

ವ್ಯಕ್ತಿಯೊಬ್ಬ ವಾರ್ಷಿಕ ಸರಾಸರಿ ಕೆಲಸ ಮಾಡುವ ಅವಧಿ
1778 ಗಂಟೆ ಕಾಲ

14 ನ್ಯೂಜಿಲ್ಯಾಂಡ್

14 ನ್ಯೂಜಿಲ್ಯಾಂಡ್

ವ್ಯಕ್ತಿಯೊಬ್ಬ ವಾರ್ಷಿಕ ಸರಾಸರಿ ಕೆಲಸ ಮಾಡುವ ಅವಧಿ
1758 ಗಂಟೆ ಕಾಲ

15 ಜಪಾನ್

15 ಜಪಾನ್

ವ್ಯಕ್ತಿಯೊಬ್ಬ ವಾರ್ಷಿಕ ಸರಾಸರಿ ಕೆಲಸ ಮಾಡುವ ಅವಧಿ
1733 ಗಂಟೆ ಕಾಲ

English summary
15 Countries where people work the longest hours OECD. Take a look at a list of 15 nations with the longest working hours according to a list released by OECD. Average Annual Hours Worked per person - Top 1 country - South Korea 2193. Top 15th country - Japan with 1733.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X