ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೇಬರ್ ಪಕ್ಷದ ನೀತಿ ನಿರೂಪಣಾ ಸಮಿತಿಗೆ ಡಾ. ನೀರಜ್

By Prasad
|
Google Oneindia Kannada News

Neeraj Patil elected to National Policy Forum
ಲಂಡನ್, ಜು. 26 : ಲಂಡನ್ನಿನ ಪ್ರತಿಷ್ಠಿತ ರಾಷ್ಟ್ರೀಯ ನೀತಿ ನಿರೂಪಣಾ ಸಮಿತಿ(ನ್ಯಾಷನಲ್ ಪಾಲಿಸಿ ಫೋರಂ)ಗೆ ಗುಲಬರ್ಗದ ಕನ್ನಡಿಗ ಮತ್ತು ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ ಅವರನ್ನು ದಿ ಬ್ರಿಟಿಷ್ ಲೇಬರ್ ಪಾರ್ಟಿ ಆಯ್ಕೆ ಮಾಡಿದೆ.

ಗೋವಾದಲ್ಲಿ ಹುಟ್ಟಿ ಯುಕೆಯಲ್ಲಿ ಬೆಳೆದ ನ್ಯಾಷನಲ್ ಪಾಲಿಸಿ ಫೋರಂನ ಸುದೀರ್ಘ ಕಾಲದ ಸದಸ್ಯ ಕೀತ್ ವಾಜ್ ಅವರು ಡಾ. ನೀರಜ್ ಪಾಟೀಲ ಅವರ ಆಯ್ಕೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ. ಒನ್ಇಂಡಿಯಾ ಜೊತೆ ಮಾತನಾಡಿದ ನೀರಜ್ ಪಾಟೀಲ ಅವರು ಕೂಡ ಈ ಆಯ್ಕೆಗೆ ಸಂತಸ ವ್ಯಕ್ತಪಡಸಿದ್ದಾರೆ.

"ಲೇಬರ್ ಪಾರ್ಟಿ ಯಾವತ್ತೂ ಸವರ್ಣೀಯ ಅಲ್ಪಸಂಖ್ಯಾತರ ದನಿಯಾಗಿದೆ. ಲೇಬರ್ ಪಕ್ಷದಲ್ಲಿ ಬ್ರಿಟನ್ನಿನ ಎಲ್ಲ ಪಕ್ಷಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬ್ಲಾಕ್ ಎಥ್ನಿಕ್ ಮೈನಾರಿಟೀಸ್ ವರ್ಗಕ್ಕೆ ಸೇರಿದ ಸಂಸತ್ ಸದಸ್ಯರು ಕೌನ್ಸಿಲರುಗಳು ಇದ್ದಾರೆ" ಎಂದು ಕೀತ್ ವಾಜ್ ಅವರು ನುಡಿದಿದ್ದಾರೆ. ಕೀತ್ ಅವರು 25 ಸುದೀರ್ಘ ವರ್ಷಗಳಿಂದ ಲೀಸ್ಟರ್‌ನ ಸಂಸತ್ ಸದಸ್ಯರಾಗಿದ್ದಾರೆ.

ರಾಷ್ಟ್ರೀಯ ನೀತಿ ನಿರೂಪಣಾ ಸಮಿತಿ ಲೇಬರ್ ಪಕ್ಷದ ಎಲ್ಲ ನೀತಿಗಳನ್ನು ರೂಪಿಸುತ್ತದೆ. ಸೆಪ್ಟೆಂಬರ್ ನಲ್ಲಿ ನಡೆಯುವ ಪಕ್ಷದ ವಾರ್ಷಿಕ ಸಭೆಯಲ್ಲಿ ನೀರಜ್ ಅವರಿಗೆ ಹೆಚ್ಚಿನ ಹೊಣೆಗಾರಿಕೆಯನ್ನು ವಹಿಸಿಕೊಡಲಾಗುವುದು. ಎರಡು ವರ್ಷಗಳ ಕಾಲ ಇವರು ರಾಷ್ಟ್ರೀಯ ನೀತಿ ನಿರೂಪಣಾ ಸಮಿತಿಯ ಸದಸ್ಯರಾಗಿರುತ್ತಾರೆ.

English summary
The British Labour Party has elected the Former Mayor of The London Borough of Lambeth, Cllr Dr Neeraj Patil to its prestigious National Policy Forum. The National Policy Forum is a centrally elected body that formulates Labour Party policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X