ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಗಿಲ್ ಯೋಧರ ಸ್ಮರಣೆಗೆ 'ವಿಜಯ್ ದಿವಸ್'

By Mahesh
|
Google Oneindia Kannada News

ಬೆಂಗಳೂರು, ಜು.26: 1999ರಲ್ಲಿ ಕಾರ್ಗಿಲ್ ಯುದ್ಧ ವಿಜಯದ 14ನೇ ವರ್ಷಾಚರಣೆಯ ಅಂಗವಾಗಿ ಜಮ್ಮು ಮತ್ತು ಕಾಶ್ಮೀರ ಉಪ ವಲಯದ ಸೇನೆ ಎರಡು ದಿನಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಸುಮಾರು 527 ಯೋಧ ಬಲಿದಾನ ಹಾಗೂ 1300 ಯೋಧರನ್ನು ಗಾಯಗೊಳಿಸಿದ ಕಾರ್ಗಿಲ್ ಯುದ್ಧದ ವಿಜಯೋತ್ಸವ ದೇಶದ ಹಲವೆಡೆ ಶುಕ್ರವಾರ (ಜು.26) ಆಚರಿಸಲಾಗುತ್ತಿದೆ.

ಸಮುದ್ರ ಮಟ್ಟಕ್ಕಿಂತಲೂ 11,500 ಅಡಿ ಎತ್ತರದಲ್ಲಿರುವ ದ್ರಾಸ್ ಪಟ್ಟಣದ ಸಮೀಪದ ಉಂಪಲ ರಿಡ್ಜ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಯುದ್ಧ ಭೂಮಿಯಲ್ಲಿ ಎರಡು ದಿನಗಳ ವಿಜಯೋತ್ಸವ ಸಂಭ್ರಮಾಚರಣೆಗೆ ಚಾಲನೆ ದೊರೆತಿದೆ.

ಈ ಸಂಭ್ರಮಾಚರಣೆಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಸೇನಾಧಿಕಾರಿಗಳು ಮತ್ತು ಸೈನಿಕರು ಹಾಗೂ ಹುತಾತ್ಮ ಯೋಧರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದಾರೆ. ಬ್ಯಾಂಡ್ ವಾದನ, ಪಥ ಸಂಚಲನ, ಪೊಲೋ ಪಂದ್ಯ, ವೀರ ಯೋಧರ ನೆನಪಿನ ಕಾರ್ಯಕ್ರಮಗಳು ನಡೆಯಲಿದೆ.

ಇತ್ತ ಅಮರ ಜವಾನ್ ಜ್ಯೋತಿ ಬಳಿ ರಕ್ಷಣಾ ಸಚಿವ ಎಕೆ ಅಂಟೋನಿ ಜೊತೆಗೆ ವಾಯುಸೇನೆ, ಭೂ ಸೇನೆ, ಜಲಸೇನೆ ಮುಖ್ಯಸ್ಥರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ನಮನ ಸಲ್ಲಿಸಿದ್ದಾರೆ. ವಿಜಯ್ ದಿವಸ್ ಸಂಭ್ರಮಾಚರಣೆಯ ಚಿತ್ರಗಳು ಇಲ್ಲಿವೆ ನೋಡಿ

ಕಾಶ್ಮೀರದ ಡ್ರಾಸ್

ಕಾಶ್ಮೀರದ ಡ್ರಾಸ್

ಶ್ರೀನಗರದ ಪೂರ್ವ ಭಾಗದಲ್ಲಿರುವ ಡ್ರಾಸ್ ನಲ್ಲಿ ಕಾರ್ಗಿಲ್ ವಿಜಯ್ ದಿವಸಕ್ಕಾಗಿ ಯುದ್ಧ ಸ್ಮಾರಕವನ್ನು ಯೋಧರು ಅಣಿಗೊಳಿಸಿದ್ದಾರೆ

ವೀರಯೋಧರಿಗೆ ನಮನ

ವೀರಯೋಧರಿಗೆ ನಮನ

ಯೋಧರು ಹಾಗೂ ಅಧಿಕಾರಿಗಳು ಕಾರ್ಗಿಲ್ ಯುದ್ಧ ಸ್ಮಾರಕದ ಬಳಿ ಮೇಣದ ಬತ್ತಿ ಹಚ್ಚಿ ಅಗಲಿದ ವೀರಯೋಧರಿಗೆ ನಮನ ಸಲ್ಲಿಸಿದ್ದಾರೆ. PTI Photo By S Irfan

ಕಾಶ್ಮೀರದ ಯೋಧರಿಗೆ ನಮನ

ಕಾಶ್ಮೀರದ ಯೋಧರಿಗೆ ನಮನ

ಡ್ರಾಸ್ ನಲ್ಲಿ ಎರಡು ದಿನಗಳ ಸಂಭ್ರಮಾಚರಣೆ ಅಂಗವಾಗಿ ವೀರ ಗೀತೆಗಳ ಟ್ಯೂನ್ ಬಾರಿಸುತ್ತಿರುವ ಆರ್ಮಿ ಬ್ಯಾಂಡ್

ಬೆಂಗಳೂರಿನಲ್ಲಿ ಕಾರ್ಯಕ್ರಮ

ಬೆಂಗಳೂರಿನಲ್ಲಿ ಕಾರ್ಯಕ್ರಮ

ಬೆಂಗಳೂರಿನಲ್ಲಿ 'ಯೂತ್ ಫಾರ್ ನೇಷನ್' ಸಂಸ್ಥೆ ಎಂಜಿ ರಸ್ತೆಯಲ್ಲಿರುವ ಕ್ವೀನ್ಸ್ ಪುತ್ಥಳಿಯಿಂದ ರಾಜಭವನ ರಸ್ತೆಯಲ್ಲಿರುವ ರಾಷ್ಟ್ರೀಯ ಸೈನಿಕ ಸ್ಮಾರಕದವರೆಗೆ ಪಾದಯಾತ್ರೆಹಮ್ಮಿ ಕೊಂಡಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಕುಮಾರ್, ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್. ದೊರೆಸ್ವಾಮಿ, ಎಂ.ವಿ. ಕೃಷ್ಣಮಾಚಾರಿ, ಎನ್.ಆರ್. ಮುತ್ತದ್, ಎಲ್ಲಪ್ಪ ಮದುಲೂರು ಮುಂತಾದವರು ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಹೆಚ್ಚಿನ ವಿವರ ಇಲ್ಲಿದೆ ಓದಿ

ಯಶಸ್ವಿ ಕಾರ್ಯಾಚರಣೆ

ಯಶಸ್ವಿ ಕಾರ್ಯಾಚರಣೆ

ಹಿಮಾಲಯದ ತಪ್ಪಲಿನಲ್ಲಿ ಸುಮಾರು -15 ಡಿಗ್ರಿ ಸೆಲಿಷಿಯಸ್ ತಾಪಮಾನದಲ್ಲಿ ಸುಮಾರು 60 ದಿನಗಳ ನಡೆದ ಕಾರ್ಗಿಲ್ ಯುದ್ಧ ಜುಲೈ 26, 1999ರಂದು ಕೊನೆಗೊಂಡಿತ್ತು. ಆಪರೇಷನ್ ವಿಜಯ್ ಹೆಸರಿನ ಭಾರತೀಯ ಸೇನೆಯ ಕಾರ್ಯಾಚರಣೆ ಯಶಸ್ವಿಯಾಗಿತ್ತು.

ಇದೋ ನಮ್ಮ ನಮನ

ಇದೋ ನಮ್ಮ ನಮನ

ಬೆಳಗಾವಿಯ ಫ್ಲೈಟ್ ಲೆಫ್ಟಿನೆಂಟ್ ಎಸ್ ಮುಹಿಲಾನ್, ಲೆ. ಸೌರಭ್ ಕಾಲಿಯಾ, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಯೋಗೆಂದ್ರ ಸಿಂಗ್, ಸಂಜಯ್ ಕುಮಾರ್, ಮೇಜರ್ ಪದ್ಮಪಾಣಿ ಆಚಾರ್ಯ, ಲೆಫ್ಟಿನೆಂಟ್ ಬಲ್ವಾನ್ ಸಿಂಗ್, ಮೇಜರ್ ಸರವಣನ್, ಲೆಫ್ಟಿನೆಂಟ್ ಕಣಾದ್ ಭಟ್ಟಚಾರ್ಯ(22ವರ್ಷ), ಕ್ಯಾಪ್ಟನ್ ಸಜು ಚೇರಿಯನ್, ಲೆ. ಕೈಸಿಂಗ್ ಕ್ಲಿಫರ್ಡ್ ನಂಗ್ರಮ್,ಕ್ಯಾ. ಜೆರ್ರಿ ಪ್ರೇಮ್ ರಾಜ್,ಮೇಜರ್ ಸೋನಮ್ ವಾಂಗ್ ಚುಕ್, ಕ್ಯಾ ವಿಜಯ್ ಥಾಪರ್, ರಾಜಶ್ರೀ ಗುಪ್ತ ಸೇರಿದಂತೆ ಇತರೆ ಯೋಧರಿಗೆ ಇದೋ ನಮ್ಮ ನಮನ

ಇದೋ ನಮ್ಮ ನಮನ

ಇದೋ ನಮ್ಮ ನಮನ

ಕಾಶ್ಮೀರದ ಯೋಧರಿಗೆ ನಮನ

ಇದೋ ನಮ್ಮ ನಮನ

ಇದೋ ನಮ್ಮ ನಮನ

ಕಾಶ್ಮೀರದ ಯೋಧರಿಗೆ ನಮನ

ಇದೋ ನಮ್ಮ ನಮನ

ಇದೋ ನಮ್ಮ ನಮನ

ಇದೋ ನಮ್ಮ ನಮನ

English summary
It is 14th anniversary of the Kargil war on Friday(Jul.26), Defence Minister A K Antony and the chiefs of the Army, Navy and Air Force paid tributes to the martyrs at Amar Jawan Jyoti
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X