ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ ಬಜೆಟ್ ಮುಖ್ಯಾಂಶಗಳು

|
Google Oneindia Kannada News

venkatesh murthy
ಬೆಂಗಳೂರು, ಜು.26 : ಹಲವಾರು ಗೊಂದಲಗಳ ನಡುವೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಬಿಬಿಎಂಪಿಯ 2013-14ನೇ ಸಾಲಿನ ಬಜೆಟ್ ಅನ್ನು ಶುಕ್ರವಾರ ಮಂಡಿಸಲಾಯಿತು. ಪಾಲಿಕೆ ಇತಿಹಾಸದಲ್ಲೇ ಎರಡು ಬಾರಿ ಬಜೆಟ್ ಮಂಡಿಸಿದ ಮೊದಲ ಮೇಯರ್ ಎಂಬ ಹೆಗ್ಗಳಿಕೆಗೆ ಮೇಯರ್ ಡಿ.ವೆಂಕಟೇಶಮೂರ್ತಿ ಪಾತ್ರರಾದರು.

ಕಾಂಗ್ರೆಸ್ ಸದಸ್ಯರು ಉಸ್ತುವಾರಿ ಮೇಯರದ ಬಜೆಟ್ ಮಂಡನೆಗೆ ಅಡ್ಡಿ ಪಡಿಸಿದರು. ಸದನದ ಬಾವಿಗಳಿದು ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಆರಂಭಿಸಿದರು. ಯಾವ ವಿರೋಧಕ್ಕೂ ಬಗ್ಗದ ಮೇಯರ್ 8520.56 ಕೋಟಿ ಗಾತ್ರದ ಬಜೆಟ್ ಅನ್ನು ಮಂಡಿಸಿದರು. 3200ಕೋಟಿ ತೆರಿಗೆ ಸಂಗ್ರಹಣೆ ಮಾಡುವ ಗುರಿಯನ್ನು ಬಜೆಟ್ ಹೊಂದಿದೆ.

ಒಟ್ಟು 8520.56 ಕೋಟಿ ಬಜೆಟ್ ಗಾತ್ರದ ಬಜೆಟ್ ನಲ್ಲಿ. 3307.5 ಕೋಟಿ ತೆರಿಗೆ ಆದಾಯ, 2290ಕೋಟಿ ತೆರಿಗೇತರ ಆದಾಯ, 1732 ಕೋಟಿ ಸರ್ಕಾದ ಅನುದಾನ ಮತ್ತು 1114 ಕೋಟಿ ಇತರ ಆದಾಯ ಸೇರಿದೆ. ಆಪ್ಟಿಕಲ್ ಫೈಬರ್ ಕೇಬಲ್ ನಿಂದ 550 ಕೋಟಿ ಆದಾಯ, ಜಾಹೀರಾತಿನಿಂದ 107 ಕೋಟಿ, ವ್ಯಾಪಾರ ಪರವಾಗಿಯಿಂದ 25 ಕೋಟಿ ಆದಾಯವನ್ನು ಸಂಗ್ರಹಿಸುವ ಗುರಿಯನ್ನು ಬಜೆಟ್ ನಲ್ಲಿ ಹೊಂದಲಾಗಿದೆ.

ಬಜೆಟ್ ಮುಖ್ಯಾಂಶಗಳು
* ಕನಕ ಕಲ್ಯಾಣ ಕಾರ್ಯಕ್ರಮದಡಿ ವಿದೇಶಕ್ಕೆ ತೆರಳುವ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ 5 ಕೋಟಿ
* ಪಂಡಿತ್ ದೀನದಯಾಳ್ ಗೃಹ ಯೋಜನೆ ಮುಂದುವರಿಕೆ
* ಜೈ ಭೀಮಾ ಗೃಹ ನಿರ್ಮಾಣ ಯೋಜನೆಗಾಗಿ 383 ಕೋಟಿ ಮೀಸಲು
* ಮಹಿಳಾ ಕಲ್ಯಾಣಕ್ಕಾಗಿ 670 ಕೋಟಿ ಮೀಸಲು
* ಆರೋಗ್ಯ ಭಾಗ್ಯ ಕಾರ್ಯಕ್ರಮಕ್ಕೆ 12 ಕೋಟಿ
* ಹೊಸಹಳ್ಳಿ ರೆಫರೆಲ್ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು 3 ಕೋಟಿ
* ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಮುಂದುವರಿಕೆ
* ವಾಜಪೇಯಿ ಆರೋಗ್ಯ ಶ್ರೀ ಯೋಜನೆಗೆ 30 ಕೋಟಿ ಮೀಸಲು
* ಎಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಪ್ರಯೋಗಾಲಯ
* ಮಹಿಳೆಯರಿಗೆ ಟೈಲರಿಂಗ್, ಕಾರು, ಚಾಲನೆ, ಕಂಪ್ಯೂಟರ್ ತರಬೇತಿ
* ಪೇಪರ್ ಹಂಚುವ ಮಕ್ಕಳಿಗೆ ಉಚಿತ ಸೈಕಲ್
* ಬೆಂಗಳೂರು ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಪುನರುಜ್ಜೀವನಗೊಳಿಸಲು ಕಾರ್ಯಕ್ರಮ
* ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂನಲ್ಲಿ ಕಂಚಿನ ಪ್ರತಿಮೆ ಸ್ಥಾಪನೆ
* 3 ಕೋಟಿ ವೆಚ್ಚದಲ್ಲಿ ನವೀಕರಣಕ್ಕೆ 3 ಕೋಟಿ
* ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂ ಅಂತರಾಷ್ಟ್ರೀಯ ದರ್ಜೆಗೆ ಏರಿಸಲು 9 ಕೋಟಿ
* ಎನ್.ಲಕ್ಷಣರಾವ್ ಉದ್ಯಾನವನ ಕಾರ್ಯಕ್ರಮಕ್ಕೆ 73 ಕೋಟಿ
* ಕಾಡು, ಬೆಳೆಸಿ ನಾಡು ಉಳಿಸಿ ಅರಣ್ಯೀಕರಣ ಕಾರ್ಯಕಮಕ್ಕೆ 31 ಕೋಟಿ
* ನಗರಗಳ ಕೆರೆಗಳ ಅಭಿವೃದ್ಧಿಗೆ 57.30ಕೋಟಿ
* ಪಾಲಿಕೆಯ ಹಳೇ ವಾರ್ಡ್ ಗಳ ಅಭಿವೃದ್ಧಿಗೆ 25 ಲಕ್ಷ
* ಹೊಸ ವಾರ್ಡ್ ಗಳಿಗೆ 50 ಲಕ್ಷ
* ಪಾದಚಾರಿ ಮಾರ್ಗ ನಿರ್ಮಾಣ ಮತ್ತು ನಿರ್ವಹಣೆಗೆ 54 ಕೋಟಿ
* ಶಿವಾನಂದ ವೃತ್ತದಲ್ಲಿ ಉಕ್ಕಿನ ಸೇತುವೆ ನಿರ್ಮಾಣಕ್ಕೆ 28.50 ಕೋಟಿ
* ಘನ ತಾಜ್ಯ ನಿರ್ವಹಣೆಗೆ 150 ಕೋಟಿ
* ರಾಜ್ ಕುಮಾರ್ ರಸ್ತೆಯಿಂದ-ಯಶವಂತಪುರ-ಓಕಳಿಪುರಂ ಜಂಕ್ಷನ್ ವರೆಗೆ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣಕ್ಕೆ 12.50ಕೋಟಿ
* ಮಾಗಡಿ ರಸ್ತೆ- ಬಸವೇಶ್ವರ ನಗರ ಜಂಕ್ಷನ್ ನಡುವೆ ಅಂಡರ್ ಪಾಸ್ ನಿರ್ಮಾಣಕ್ಕೆ 15 ಕೋಟಿ
* ರಾಜಾಜಿನಗರ 10 ನೇ ಕ್ರಾಸ್ ನಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣಕ್ಕೆ 15 ಕೋಟಿ
* ರಾಜಾಜಿನಗರಲ್ಲಿ ವಿವಿಧ ರಸ್ತೆಗಳ ಗ್ರೇಡ್ ಸಪರೇಟರ್ ಗೆ 29 ಕೋಟಿ
* ನಗರದ ಪ್ರಮುಖ ಆಯ್ದ ರಸ್ತೆಗಳ ಅಭಿವೃದ್ಧಿಗೆ 140 ಕೋಟಿ
* ಹೊಸೂರು-ಲಸ್ಕರ್-ವಲ್ಲಾರ್ ಜಂಕ್ಷನ್-ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ ಸಿಗ್ನಲ್ ರಹಿತ ಕಾರಿಡಾರ್ ನಿರ್ಮಾಣಕ್ಕೆ 48 ಕೋಟಿ
* ಮೈಸೂರು ರಸ್ತೆಯಿಂದ-ಹೊಸೂರು ರಸ್ತೆ-ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಸಿಗ್ನಲ್ ಫ್ರೀ ಕಾರಿಡಾರ್ 58 ಕೋಟಿ
* 500 ಕೋಟಿ ವೆಚ್ಚದಲ್ಲಿ ರಾಜಾ ಕಾಲುವೆಗಳ ಕಾಮಗಾರಿ
* ಘನ ತಾಜ್ಯ ನಿರ್ವಹಣೆಗೆ 150 ಕೋಟಿ
* ಬೀದಿ ನಾಯಿಗಳನ್ನು ಹಿಡಿಯಲು 6 ಕೋಟಿ

English summary
Bangalore Mayor D. Venkatesh Murthy ( BJP) tabled the Bruhat Bengaluru Mahanagara Palike (BBMP) budget for the fiscal 2013-14. The salient features of the budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X