ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲಿನಲ್ಲಿ ಸೊನ್ನೆ ವೆಚ್ಚದಲ್ಲಿ ವಿಕಿಪೀಡಿಯ

By Mahesh
|
Google Oneindia Kannada News

Aircel partnership brings Wikipedia Zero to India
ಬೆಂಗಳೂರು, ಜು.26: ಪ್ರಮುಖ ಟೆಲಿಕಾಂ ಸಂಸ್ಥೆ ಏರ್ ಸೆಲ್ ಜೊತೆ ಆನ್ ಲೈನ್ ಸ್ವತಂತ್ರ ವಿಶ್ವಕೋಶ ವಿಕಿಪೀಡಿಯ 'ಶೂನ್ಯ' ಒಪ್ಪಂದ ಮಾಡಿಕೊಂಡು ಜ್ಞಾನ ಹಂಚಿಕೆ ವಿಸ್ತಾರವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. 120 ಕೋಟಿಗೂ ಅಧಿಕ ಜನಸಂಖ್ಯೆವುಳ್ಳ ಭಾರತದಲ್ಲಿನ ಸುಮಾರು 60 ಮಿಲಿಯನ್ ಮೊಬೈಲ್ ಚಂದಾದರರಿಗೆ ವಿಕಿಪೀಡಿಯ ಉಚಿತವಾಗಿ ತಲುಪಲಿದೆ.

ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಶೇ 70ರಷ್ಟು (867 ಮಿಲಿಯನ್ ಚಂದಾದಾರರು) ಇಂಟರ್ನೆಟ್ ಬಳಕೆದಾರರ ಸಂಖ್ಯೆ 77 ಮಿಲಿಯನ್ ನಷ್ಟಿದೆ(ಕಾಮ್ ಸ್ಕೋರ್ ಜೂನ್ ವರದಿ) ಜಪಾನ್ (73 ಮಿಲಿಯನ್ ಕಾಮ್ ಸ್ಕೋರ್ 2013) ಅಂಕಿ ಅಂಶ ಗಮನಿಸಿದರೆ ಭಾರತ ಈಗಾಗಳೇ ಸ್ಮಾಟ್ ಫೋನ್ ಬಳಕೆಯಲ್ಲಿ ಹೆಚ್ಚಾಗಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ವಿಕಿಪೀಡಿಯ ಜೀರೋ ಯೋಜನೆ ಸಂಪೂರ್ಣ ಪ್ರಯೋಜನ ಹೆಚ್ಚೆಚ್ಚು ಜನರಿಗೆ ತಲುಪಲಿದೆ.

ಭಾರತದಲ್ಲಿ ರಾಷ್ಟ್ರೀಯ ಭಾಷೆ ಎಂಬುದಿಲ್ಲ. 22 ಅಧಿಕೃತ ಭಾಷೆಗಳಿದ್ದು, ಆಯಾ ಭಾಷೆಗಳಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ವಿಷಯಗಳನ್ನು ಮೊಬೈಲ್ ನಲ್ಲಿ ಬಳಸುವುದು ಹೆಚ್ಚಾಗುತ್ತಿದೆ. ಉದಾಹರಣೆಗೆ ಹಿಂದಿ ವಿಕಿಪೀಡಿಯ ಸದ್ಯಕ್ಕೆ ಜಾಗತಿಕವಾಗಿ ಶೇ 22.1ರಷ್ಟು ಪೇಜ್ ವ್ಯೂಸ್ ಮೊಬೈಲ್ ನಿಂದ ಬರುತ್ತಿದೆ. ಇತರೆ ಭಾಷೆಗಳ ಪೇಜ್ ವ್ಯೂಸ್ ಶೇ 17.3ರಷ್ಟಿದೆ.

ಏರ್ ಸೆಲ್ ಜೊತೆ ಒಪ್ಪಂದದ ನಂತರ ಇಂಗ್ಲೀಷ್, ಹಿಂದಿ, ತಮಿಳು, ಕನ್ನಡ ಸೇರಿದಂತೆ 17ಕ್ಕೂ ಅಧಿಕ ಇಂಡಿಕ್ ಮಾದರಿ ಭಾಷೆಗಳಲ್ಲಿ ವಿಕಿಪೀಡಿಯ ಉಚಿತವಾಗಿ ಲಭ್ಯವಾಗಲಿದೆ. ಹೆಚ್ಚಿನ ವಿವರಗಳನ್ನು ವಿಕಿಪೀಡಿಯ ಬ್ಲಾಗ್ ನಲ್ಲಿ ಓದಬಹುದು.

English summary
Wikipedia partnership with Aircel will give 60 million mobile subscribers in India the potential to access Wikipedia at no data cost, bringing the program’s global partnership footprint to 470 million subscribers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X