ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬಂಕಿನಲ್ಲಿಯೂ ಅಡುಗೆ ಅನಿಲ ಸಿಲಿಂಡರ್ ಲಭ್ಯ!

By Srinath
|
Google Oneindia Kannada News

ನವದೆಹಲಿ, ಜುಲೈ25: ಅಡುಗೆ ಅನಿಲ ಸಿಲಿಂಡರ್ ಪೆಟ್ರೋಲ್ ಬಂಕ್‌ಗಳಲ್ಲಿಯೂ ಲಭ್ಯವಾಗುವಂತಿದ್ದರೆ ಎಷ್ಟು ಚೆನ್ನ ಎನ್ನುವವರಿಗೆ ಇದು ಶುಭ ಸುದ್ದಿ. ಎಲ್‌ಪಿಜಿ ಸಿಲಿಂಡರ್ ಅನ್ನು ಮಾರುಕಟ್ಟೆಯ ದರದಲ್ಲೇ ಅಂದರೆ ಸರಕಾರದ ಸಬ್ಸಿಡಿ ಇಲ್ಲದೆ ವಾಣಿಜ್ಯ ಬಳಕೆ ದರದಲ್ಲಿ ಸದ್ಯದಲ್ಲೇ 5 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರುಗಳು ಮಾರುಕಟ್ಟೆಗೆ ಬರಲಿವೆ.

ತುರ್ತು ಕಾಲದಲ್ಲಿ ಕೈಹಿಡಿಯಲಿರುವ ಈ ಸಿಲಿಂಡರುಗಳನ್ನು ಮೆಟ್ರೋ ನಗರಗಳಲ್ಲಿ ಮಾತ್ರ ಪೆಟ್ರೋಲ್ ಬಂಕ್‌ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್‌ಪಿಜಿಯನ್ನು ಗ್ರಾಹಕರು ಮುಕ್ತವಾಗಿ ಖರೀದಿಸುವಂತಾಗಲು ಮತ್ತು ತಾತ್ಕಾಲಿಕ ಸಂಪರ್ಕ ಪಡೆಯುವವರಿಗೆ ಅನುಕೂಲವಾಗಲು ಈ ವ್ಯವಸ್ಥೆ Free Trade LPG (FTL) Scheme ಜಾರಿಗೆ ತರಲಾಗುತ್ತಿದೆ.

Free Trade LPG Scheme 5-kg cylinders sale at petrol pumps in metros

5 ಕೆಜಿ ತೂಕದ ಈ ಎಲ್‌ಪಿಜಿ ಸಿಲಿಂಡರ್ ಬೆಲೆ 360 ರಿಂದ 380 ರೂ ಗಳಷ್ಟಿರಬಹುದು. ಇದೇ ಸರಕಾರಿ ಸಬ್ಸಿಡಿಯ ಸಿಲಿಂಡರ್ ಬೆಲೆ 160-180 ರೂ. ನಷ್ಟಾಗುತ್ತದೆ. ಗಮನಾರ್ಹವೆಂದರೆ ಖಾಸಗಿ ಅಂಗಡಿಗಳಲ್ಲಿಯೂ ಚಿಕ್ಕ ಚಿಕ್ಕ ಸಿಲಿಂಡರುಗಳು ಬಹು ದಿನಗಳಿಂದ ಲಭ್ಯವಾಗುತ್ತಿವೆ. ಆದರೆ ಇದು ಸರಕಾರದ್ದಲ್ಲ. ಹಾಗಾಗಿ ಇವುಗಳ ಬೆಲೆಯೂ ದುಬಾರಿ.

ಆರಂಭದಲ್ಲಿ, ಮೆಟ್ರೋ ನಗರಗಳಾದ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸರಕಾರಿ ತೈಲ ಮಾರುಕಟ್ಟೆ ಕಂಪನಿಗಳ ಮಾರಾಟ ಕೇಂದ್ರಗಳಲ್ಲಿ (ಪೆಟ್ರೋಲ್ ಬಂಕ್) ಐದು ಕೆಜಿ ಸಿಲಿಂಡರ್‌ ವಿತರಿಸಲಾಗುವುದು. ಯೋಜನೆ ಯಶಸ್ವಿಯಾದರೆ ಇತರೆ ಭಾಗಗಳಲ್ಲೂ ಮಾರಾಟ ಮಾಡುವ ಮುಕ್ತ ಮನಸ್ಸು ಇದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿ ಬುಧವಾರ ತಿಳಿಸಿದ್ದಾರೆ.

ಸಿಲಿಂಡರ್ ಖರೀದಿಸುವವರು ಆರಂಭದಲ್ಲಿ ಬರೀ ಸಿಲಿಂಡರ್ ಖರೀದಿಸಬಹುದು. ಮುಂದೆ ಗೃಹೋಪಯೋಗಿ ಪ್ರೆಷರ್ ರೆಗ್ಯುಲೆಟರ್ ಖರೀದಿಸಬಹುದು. ಮೊದಲ ಬಾರಿ ಈ 5 ಕೆಜಿ ಸಿಲಿಂಡರ್ ಖರೀದಿಸಲು ಗ್ರಾಹಕರು ಗುರುತಿನ ಚೀಟಿ ತೋರಿಸುವುದು ಕಡ್ಡಾಯ. ಮತದಾರರ ಚೀಟಿ, ಡಿಎಲ್, ಪಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ ಬುಕ್, ಎಂಪ್ಲಾಯಿ ಐಡಿ, ಪಾಸ್‌ ಪೋರ್ಟ್ ಸೇರಿದಂತೆ ಯಾವುದಾದರೂ ನಿಗದಿತ ಗುರುತಿನ ಚೀಟಿಯನ್ನು ಒದಗಿಸಬೇಕು.

English summary
Free Trade LPG Scheme 5-kg cylinders sale at petrol pumps in metros. The Petroleum and Natural Gas Ministry on Wednesday announced the launch of free trade LPG scheme (FTL) under which state-run oil marketing companies (OMCs) would begin sale of LPG cylinders of 5 kg each across the counters at select petrol pumps owned by the OMCs in five metros including Bangalore for Rs. 362 per cylinder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X