ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಜು.26ರಂದು ಕಾರ್ಗಿಲ್ ವಿಜಯೋತ್ಸವ

By Prasad
|
Google Oneindia Kannada News

Kargil Vijay Diwas celebration in Bangalore
ಬೆಂಗಳೂರು, ಜು. 25 : ದೇಶದ ಗಡಿ ರಕ್ಷಣೆಗಾಗಿ ಪಾಕಿಸ್ತಾನದ ವಿರುದ್ಧ ಹೋರಾಡಿ, ಪ್ರಾಣತ್ಯಾಗ ಮಾಡಿ ದೇಶಕ್ಕೆ ಜಯ ತಂದಿತ್ತ ಕೆಚ್ಚೆದೆಯ ಕಾರ್ಗಿಲ್ ವೀರ ಯೋಧರನ್ನು ನೆನಪಿಸಿಕೊಳ್ಳುವ ಮತ್ತು ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುವ ಸುಯೋಗ ಬೆಂಗಳೂರಿನ ಜನತೆಗೆ ಕೂಡಿ ಬಂದಿದೆ.

ಈ ಪ್ರಯುಕ್ತ 14ನೇ ಕಾರ್ಗಿಲ್ ವಿಜಯೋತ್ಸವವನ್ನು ಜುಲೈ 26ರಂದು ಬೆಂಗಳೂರಿನಲ್ಲಿ 'ಯೂತ್ ಫಾರ್ ನೇಷನ್' ಸಂಸ್ಥೆ ಆಯೋಜಿಸಿದೆ. ಎಂಜಿ ರಸ್ತೆಯಲ್ಲಿರುವ ಕ್ವೀನ್ಸ್ ಪುತ್ಥಳಿಯಿಂದ ರಾಜಭವನ ರಸ್ತೆಯಲ್ಲಿರುವ ರಾಷ್ಟ್ರೀಯ ಸೈನಿಕ ಸ್ಮಾರಕದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ದೇಶದ ಬಗ್ಗೆ ಭಕ್ತಿಯಿರುವ ನಾಗರಿಕರು, ಸಂಘಸಂಸ್ಥೆಗಳು ಈ ಪಾದಯಾತ್ರೆಯಲ್ಲಿ ಭಾಗವಹಿಸಬಹುದು.

ಪಾದಯಾತ್ರೆ ಜು.26ರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಮಾಜಿ ಕ್ರಿಕೆಟ್ ಆಟಗಾರ ದೊಡ್ಡ ಗಣೇಶ್ ಅವರು ಚಾಲನೆ ನೀಡಲಿದ್ದಾರೆ. ಕ್ರೀಡಾಪಟು ಪರಿಮಳಾ ಅಯ್ಯಪ್ಪ ಅವರು ಅಧ್ಯಕ್ಷತೆ ವಹಿಸುತ್ತಿದ್ದಾರೆ. ಮೇಜರ್ ಜೆನರಲ್ ಸಿ ನಂಜಪ್ಪ, ಕರ್ನಲ್ ರಾಜನ್, ಏರ್ ವೈಸ್ ಮಾರ್ಷಲ್ ಬಿ.ಕೆ. ಮುರಳಿ ಅವರು ವಿಶೇಷ ಅತಿಥಿಗಳಾಗಿ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಕುಮಾರ್, ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್. ದೊರೆಸ್ವಾಮಿ, ಎಂ.ವಿ. ಕೃಷ್ಣಮಾಚಾರಿ, ಎನ್.ಆರ್. ಮುತ್ತದ್, ಎಲ್ಲಪ್ಪ ಮದುಲೂರು ಮುಂತಾದವರು ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಆಗಸ್ಟ್ ಮೊದಲವಾರದಲ್ಲಿ ತೆರೆಗೆ ಅಪ್ಪಳಿಸಲಿರುವ ಕೇಸ್ ನಂ. 18/9 ಕನ್ನಡ ಚಿತ್ರತಂಡ ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದೆ. ಕನ್ನಡದ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದ ನಟಿ ಶ್ವೇತಾ ಪಂಡಿತ್, ನಟಿ ಸಿಂಧು ಲೋಕನಾಥ್, ನಿರಂಜನ್ ಶೆಟ್ಟಿ ಮುಂತಾದವರು ತಾರೆಮೆರಗು ತರಲಿದ್ದಾರೆ. ಇಂಡಿಯನ್ ಏರ್ ಫೋರ್ಸ್ ಫ್ಯಾನ್ಸ್ ಈ ಪಾದಯಾತ್ರೆಯ ಸೋಷಿಯಲ್ ಮೀಡಿಯಾ ಪಾರ್ಟನರ್ ಆಗಿದೆ.

ಹೆಚ್ಚಿನ ವಿವರಗಳು ಬೇಕಿದ್ದರೆ ಸಂಪರ್ಕಿಸಿ...

ಯೂತ್ ಫಾರ್ ನೇಷನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್. ಸುನೀಲ್ ಕುಮಾರ್ - 9886136894
ವೆಬ್ ಸೈಟ್ : www.yfn.co.in

ಮಂಗಳೂರಿನಲ್ಲಿಯೂ ವಿಜಯೋತ್ಸವ : ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸೈನ್ಯಾಧಿಕಾರಿಗಳ ಸಂಘ ಕಾರ್ಗಿಲ್ ವಿಜಯ್ ದಿವಸ ಆಚರಿಸುತ್ತಿದೆ. ಕದ್ರಿ ಹಿಲ್ಸ್ ನಲ್ಲಿರುವ ವಾರ್ ಮೆಮೋರಿಯಲ್ ನಲ್ಲಿ ಮಡಿದ ವೀರ ಯೋಧರ ತ್ಯಾಗ ಬಲಿದಾನವನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮವನ್ನು ಶುಕ್ರವಾರ ಬೆಳಿಗ್ಗೆ 7.30ಕ್ಕೆ ಆಯೋಜಿಸಲಾಗಿದೆ. ಮೇಣದಬತ್ತಿಯನ್ನು ಅಂಟಿಸಿ ಸ್ಮಾರಕಕ್ಕೆ ಹೂಗುಚ್ಛವನ್ನು ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

English summary
Youth For Nation commemorates the 14th anniversary of Kargil Victory on 26th July, 2013. On Friday, 14th anniversary of Kargil Victory Day, Youth For Nation’s volunteers have come together to march from Queen’s Statue to Rashtriya Sainika Smaraka, Bangalore. The March will starts at morning 8 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X