ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ-ಕರ್ನಾಟಕ ಗಡಿಯಲ್ಲಿ 'ಮಹಾ' ಮಳೆ

By Mahesh
|
Google Oneindia Kannada News

ಮುಂಬೈ, ಜು.24: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಮುಂಬೈ ಹಾಗೂ ಮಹಾರಾಷ್ಟ್ರ ತತ್ತರಿಸಿದೆ. ಕರ್ನಾಟಕದ ಗಡಿಭಾಗದ ಜಿಲ್ಲೆಗಳಲ್ಲಿನ ಗ್ರಾಮಗಳು ಪ್ರವಾಹದಲ್ಲಿ ಮುಳುಗಿವೆ.

ಮುಂಬೈನಲ್ಲಿ ಸಾರ್ವಜನಿಕ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇನ್ನೂ ಭಾರಿ ಮಳೆ ಸುರಿಯುವ ಸಾಧ್ಯತೆಯಿದ್ದು, ಅನಗತ್ಯವಾಗಿ ಯಾರೂ ಮನೆಗಳಿಂದ ಹೊರ ಬರಬಾರದು, ಅಗತ್ಯವಿದ್ದವರು ಸೂಕ್ತ ಭದ್ರತೆಯೊಂದಿಗೆ ಮಾತ್ರ ತೆರಳಬೇಕು ಎಂದು ಮುಂಬೈ ಬೃಹನ್ ನಗರ ಪಾಲಿಕೆಯ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

ಅತ್ತ ಚಿಕ್ಕೋಡಿ ಜಿಲ್ಲೆಯಲ್ಲಿ ಸುಮಾರು 7 ಸೇತುವೆಗಳು ಮುರಿದುಬಿದ್ದಿದೆ. ಸದಲಗಾದಲ್ಲಿ ಹನುಮಂತ ಗುಡಿ ಮುಳುಗಿದೆ. ಸದಲಗಾ-ಬರೊಗಾಂವ್, ಕರಡಗ-ಭೋಜ್, ಭೋಜ್ ವಾಡಿ-ಕಣ್ಣೂರು, ಸಿದ್ನಾಳ್-ಅಕ್ಕೊಳ್, ಜತ್ರಾತ್-ಭಿವಂಧಿ, ಕಲ್ಲೊಲ್-ಯಡೂರ್, ಮಲ್ಲಿಕವಾಡ್-ದತ್ತಾವಾಡ್ ಸೇತುವೆಗಳು ನೀರಿನ ಆರ್ಭಟಕ್ಕೆ ಕುಸಿದಿವೆ. ಕೃಷ್ಣಾ ನದಿಗೆ ಅಡ್ಡಲಾಗಿರುವ ರಾಜಪುರ ಬ್ಯಾರೇಜ್ ನಿಂದ ಹೆಚ್ಚುವರಿ ನೀರು ಹರಿದಿರುವುದೇ ಇದಕ್ಕೆ ಕಾರಣ ಎಂದು ಡಿಸಿ ಎನ್ ಜಯರಾಮ್ ಹೇಳಿದ್ದಾರೆ.

ಧೂದ್ ಗಂಗಾ ಹಾಗೂ ವೇದಗಂಗಾ ನದಿಗಳಿಂದ ಸುಮಾರು 91 ಸಾವಿರ ಕ್ಯೂಸೆಕ್ಸ್ ನೀರು ಹಾಗೂ ಮಹಾರಾಷ್ಟ್ರದ ಸತಾರಾದ ಕೊಯ್ನಾ ಅಣೆಕಟ್ಟಿನಿಂದ ಸುಮಾರು 11 ಸಾವಿರ ಕ್ಯೂಸೆಕ್ಸ್ ನೀರು ಕರ್ನಾಟಕದ ಕಡೆಗೆ ಬಿಡುಗಡೆಯಾಗಿದೆ. ಬಿಜಾಪುರದ ಆಲಮಟ್ಟಿ ಅಣೆಕಟ್ಟಿನಿಂದ 91 ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ. ಇನ್ನೂ 2 ಲಕ್ಷ ಕ್ಯೂಸೆಕ್ಸ್ ನಷ್ಟು ನೀರು ಬಂದರೂ ಪ್ರವಾಹ ಪರಿಸ್ಥಿತಿ ಇನ್ನೂ ಕಂಡು ಬಂದಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ಜಯರಾಂ ಭರವಸೆ ನೀಡಿದ್ದಾರೆ.

ಮಹಾ ಮಳೆಗೆ ಜನತೆ ತತ್ತರ

ಮಹಾ ಮಳೆಗೆ ಜನತೆ ತತ್ತರ

ಇತ್ತ ಮುಂಬೈನಲ್ಲಿ ಕಳೆದ 20 ಗಂಟೆಗಳ ಅವಧಿಯಲ್ಲಿ 158.6 ಮಿ.ಮೀ.ಮಳೆಯಾಗಿದ್ದು, ಸಂಜೆಯ ವೇಳೆಗೆ ಭಾರಿ ಮಳೆ ಬೀಳಲಿದೆ ಎಂದು ಹೇಳಲಾಗಿದೆ. ಮುಂಬೈ ಹಾಗೂ ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ

ಮಹಾ ಮಳೆಗೆ ಜನತೆ ತತ್ತರ

ನಗರದ ಉಷ್ಣಾಂಶ ಕನಿಷ್ಠ 22ಕ್ಕೆ ಇಳಿದಿದೆ. ಮೀನುಗಾರರು ಕಡಲಿಗಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ರೈಲು ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ರಸ್ತೆ ಸಂಚಾರ ವಿರಳಗೊಂಡಿದ್ದು, ಪೂರ್ವ ಹಾಗೂ ಪಶ್ಚಿಮ ಭಾಗಗಳ ಕೆಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಮುಂಬೈನ ಅನೇಕ ಪ್ರದೇಶಗಳು ಜಲಾವೃತವಾಗಿವೆ. ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ.

ಮಹಾ ಮಳೆಗೆ ಜನತೆ ತತ್ತರ

ಮಹಾ ಮಳೆಗೆ ಜನತೆ ತತ್ತರ

ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ

ಮಹಾ ಮಳೆಗೆ ಜನತೆ ತತ್ತರ

ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ

ಮಹಾ ಮಳೆಗೆ ಜನತೆ ತತ್ತರ

ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ

ಮಹಾ ಮಳೆಗೆ ಜನತೆ ತತ್ತರ

ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ

ಮಹಾ ಮಳೆಗೆ ಜನತೆ ತತ್ತರ

ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ

ಮಹಾ ಮಳೆಗೆ ಜನತೆ ತತ್ತರ

ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ

ಮಹಾ ಮಳೆಗೆ ಜನತೆ ತತ್ತರ

ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ

ಮಹಾ ಮಳೆಗೆ ಜನತೆ ತತ್ತರ

ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ

ಮಹಾ ಮಳೆಗೆ ಜನತೆ ತತ್ತರ

ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

ಮಹಾ ಮಳೆಗೆ ಜನತೆ ತತ್ತರ

ಮಹಾ ಮಳೆಗೆ ಜನತೆ ತತ್ತರ

ಉತ್ತರ ಭಾರತದ ಮಳೆ ಚಿತ್ರಗಳನ್ನು ನೋಡಿ

English summary
Unabated rainfall and increased inflows into Krishna river from Maharashtra have submerged seven bridges in Chikkodi taluk, Belgaum. Low-lying villages in Chikkodi taluk are flooded. Meanwhile in Mumbai normal life affected due to heavyrain
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X