ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಪ ಸಾಬೀತು‌: ಕುಮಾರಸ್ವಾಮಿಗೆ ಕೋರ್ಟ್ ಬುಲಾವ್

By Srinath
|
Google Oneindia Kannada News

Bangalore BDA- Denotification lokayukta court summons HD Kumaraswamy
ಬೆಂಗಳೂರು, ಜುಲೈ 23: ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ಲೋಕಾಯುಕ್ತ ಕೋರ್ಟ್ ಬುಲಾವ್ ನೀಡಿದೆ. ಡಿನೋಟಿಫಿಕೇಷನ್‌ ಪ್ರಕರಣ ಸಂಬಂಧ ಕುಮಾರಸ್ವಾಮಿ, ಮಾಜಿ ಸಚಿವ ಸಿ ಚೆನ್ನಿಗಪ್ಪ ಸೇರಿದಂತೆ ಎಲ್ಲ ಆರೋಪಿಗಳಿಗೆ ಖುದ್ದು ಹಾಜರಾಗುವಂತೆ ನ್ಯಾಯಾಲಯ ಸೋಮವಾರ ಸಮನ್ಸ್‌ ಜಾರಿ ಮಾಡಿದೆ.

ಇದರೊಂದಿಗೆ ರಾಜಕಾರಣಿಗಳಿಗೆ ಮತ್ತೆ ಲೋಕಾ ಕೋರ್ಟ್ ಭೀತಿ ಶುರುವಾಗಿದೆ. ಬಿಜೆಪಿ ಆಡಳಿತ ಇದ್ದಾಗ ವಿಪರೀತ ಎನಿಸುವಷ್ಟು ಈ ನಾಯಕರುಗಳಿಗೆ ಕೋರ್ಟ್ ಬುಲಾವ್ ಗಳು ಬರುತ್ತಿದ್ದವು. ಮೊನ್ನೆ ಶನಿವಾರವಷ್ಟೇ ಮಾಜಿ ಸಿಎಂ ಯಡಿಯೂರಪ್ಪ ಲೋಕಾ ಕೋರ್ಟಿನಲ್ಲಿ ವಿಚಾರಣೆಗೆ ಖುದ್ದು ಹಾಜರಾಗಿ, ಎದ್ದು ಬಂದಿದ್ದರು. ಇದೀಗ ಕುಮಾರಸ್ವಾಮಿ ಅಂಡ್ ಟೀಂಗೂ ಕೋರ್ಟ್ ಕಾಟ ಶುರುವಾಗಿದೆ.

ಆರೋಪ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬುಲಾವ್:
ಏನಪ್ಪಾ ಅಂದರೆ ಥಣಿಸಂದ್ರದ ಅರ್ಕಾವತಿ ಲೇಔಟಿನಲ್ಲಿ ಡಿನೋಟಿಫಿಕೇಷನ್‌ ಪ್ರಕರಣ ಸಂಬಂಧ ಅಧಿಕಾರ ದುರ್ಬಳಕೆ ಮಾಡಿಕೊಂಡು ಡಿನೋಟಿಫಿಕೇಷನ್‌ ಮಾಡಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸರಿಯಾಗಿ ಒಂದು ತಿಂಗಳಿಗೆ ಆ 22ರಂದು ಗುರುವಾರ ಖುದ್ದಾಗಿ ಹಾಜರಾಗಿ ವಿವರಣೆ ನೀಡುವಂತೆ ಎಲ್ಲಾ ಆರೋಪಿಗಗಳಿಗೆ ಲೋಕಾಯುಕ್ತ ನ್ಯಾಯಾಧೀಶರಾದ ನ್ಯಾಯಾಧೀಶ ಎನ್ ಕೆ ಸುಧೀಂದ್ರರಾವ್‌ ಅವರು ಆದೇಶಿಸಿದ್ದಾರೆ.

ಪ್ರಕರಣವೇನು?: 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅರ್ಕಾವತಿ ನಿರ್ಮಾಣಕ್ಕಾಗಿ ಬಿಡಿಎ ಸ್ವಾಧೀನಪಡಿಸಿಕೊಂಡ ಒಟ್ಟು ಜಾಗದಲ್ಲಿ 3 ಎಕರೆ 8 ಗುಂಟೆ ಜಾಗವನ್ನು ಶ್ರೀರಾಮ್‌ ಮತ್ತು ರವಿಪ್ರಕಾಶ್‌ ಎಂಬುವವರ ಹೆಸರಿಗೆ ಡಿನೋಟಿಫಿಕೇಷನ್‌ ಮಾಡಿದ್ದಾರೆ ಎಂದು ಆರೋಪಿಸಿ ಎಂ ಎಸ್ ಮಹದೇವಸ್ವಾಮಿ ಲೋಕಾಯುಕ್ತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಮಹದೇವಸ್ವಾಮಿ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯವು 2012ರ ಜನವರಿ 2ರಂದು ತನಿಖೆಗೆ ಆದೇಶ ನೀಡಿತ್ತು. ನ್ಯಾಯಾಲಯದ ಸೂಚನೆ ಮೇರೆಗೆ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು 2012ರ ಏಪ್ರಿಲ್‌ 17ರಂದು 52 ಪುಟಗಳ ಆರೋಪಪಟ್ಟಿ ಸಲ್ಲಿಸಿದರು. ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಚಾರಣೆಗೆ ತಡೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್‌ ಪ್ರಕರಣವನ್ನು ಮರುಪರಿಶೀಲನೆ ನಡೆಸುವಂತೆ ಲೋಕಾಯುಕ್ತ ನ್ಯಾಯಾಲಯಕ್ಕೆ ಸೂಚನೆ ನೀಡಿತ್ತು. ಹೈಕೋರ್ಟಿನ ಆದೇಶದ ಮೇರೆಗೆ ಸುದೀರ್ಘ‌ ವಿಚಾರಣೆ ನಡೆಸಿದ ನ್ಯಾಯಾಲಯ ಕಾನೂನು ಬಾಹಿರವಾಗಿ ಡಿನೊಟೀಫಿಕೇಷನ್‌ ಮಾಡಿರುವುದು ಮೇಲು ನೋಟಕ್ಕೆ ಖಚಿತವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

English summary
The Bangalore Lokayukta court on Monday issued summons to former chief minister HD Kumaraswamy in Thanisandra denotification case. Special judge NK Sudhindhra Rao directed Kumaraswamy to be present in court on August 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X