ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಂ ಟಾಂ! ಕನ್ನಂಬಾಡಿ ಅಣೆಕಟ್ಟೆ ತುಂಬಿತು

By Srinath
|
Google Oneindia Kannada News

ಶ್ರೀರಂಗಪಟ್ಟಣ, ಜುಲೈ22: ಜೀವನದಿಯಾದ ಕಾವೇರಿ ನೀರಿಗೆ ಕಟ್ಟಲಾಗಿರುವ ಕನ್ನಂಬಾಡಿ ಅಣೆಕಟ್ಟೆ ತುಂಬಿತುಳುಕುತ್ತಿದೆ! ಸೋಮವಾರ ಬೆಳಗ್ಗೆ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿದ್ದು, ಕಾವೇರಿ ತುಳುಕುವ ಮುನ್ನ ಹೆಚ್ಚುವರಿ ನೀರನ್ನು ಕ್ರಸ್ಟ್ ಗೇಟು ತೆರೆದು ಹೊರಬಿಡಲಾಗಿದೆ.

ಸರ್ ಎಂ ವಿಶ್ವೇಶ್ವರಯ್ಯ ಸಾರಥ್ಯದಲ್ಲಿ ನಿರ್ಣಾಣವಾದ ಕೃಷ್ಣ ರಾಜ ಸಾಗರ ಡ್ಯಾಂ ಗರಿಷ್ಠ ನೀರಿನ ಮಟ್ಟ 124.80 ಅಡಿಯಾಗಿದ್ದು. ಅಣೆಕಟ್ಟು ತುಂಬಿದೆ ಎಂದು KRS Dam ಮುಖ್ಯ ಇಂಜಿನಿಯರ್ ತಿಳಿಸಿದ್ದಾರೆ. (ಇದನ್ನು ಓದಿ)

mandya-krs-dam-over-flows-124-point-80-feet-july-22-2013

ಕಳೆದೆರಡು ವರ್ಷಗಳಿಂದ ಸರಿಯಾಗಿ ಮಳೆಯಾಗದೆ ಅಣೆಕಟ್ಟೆ ಭರ್ತಿಯಾಗಿರಲೇ ಇಲ್ಲ. ಈ ಬಾರಿ ಕಾವೇರಿ ತಟದಲ್ಲಿ ಮುಂಗಾರು ಭರ್ಜರಿಯಾಗಿದ್ದು, ಇದೀಗ ಅಣೆಕಟ್ಟೆ ತುಂಬಿರುವುದು ಮಂಡ್ಯ, ಮೈಸೂರು, ಬೆಂಗಳೂರು ಭಾಗದ ಜನತೆ ಮತ್ತು ರೈತಾಪಿ ವರ್ಗ ಅತೀವ ಸಂತಸ ಮಿಂದೆದ್ದಿದ್ದಾರೆ.

ಜತೆಗೆ, ಸಿಎಂ ಸಿದ್ದರಾಮಯ್ಯನವರ ಪುಣ್ಯವಾ ಎಂಬಂತೆ ಕಾವೇರಿ ನೀರಿಗಾಗಿ ಜಯಲಲಿತಾ ಕ್ಯಾತೆ ತೆಗೆಯುವುದೂ ತಪ್ಪಿದೆ. ಇದೇ ವೇಳೆ ಅಣೆಕಟ್ಟೆ ಭಾಗದ ಜನ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆಯೂ ಅಧಿಕಾರಿಗಳು ಎಚ್ಚರಿಸಿದ್ದಾರೆ.

KRS ದಾಖಲೆ: ಪಾತಾಳ ಕಚ್ಚಿದ ಕಾವೇರಿ ನೀರು
ಜೂನ್ 13- 2013 ವರದಿ: ಈ ದಾಖಲೆ ಖಂಡಿತ ನಮಗೆ ಬೇಡ; ನಮ್ಮ ಕಾವೇರಿ ಮಾತೆಗೂ ಇದು ಶ್ರೇಯಸ್ಕರವಲ್ಲ. ಬುಧವಾರ ಬೆಳಗ್ಗೆ 6 ಗಂಟೆಯ ವೇಳೆಯಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ 62.92 ಅಡಿಗೆ ಕುಸಿದಿದೆ. ಇದು ಕಳೆದ 68 ವರ್ಷಗಳಲ್ಲೇ ಕನಿಷ್ಠ ಮಟ್ಟದ ನೀರು ಶೇಖರಣೆಯಾಗಿದೆ.

1945ರಲ್ಲಿ 63.28 ಅಡಿ ನೀರಿತ್ತು. 2003ರ ಮೇ 10ರಂದು ನೀರಿನ ಪ್ರಮಾಣ 65 ಅಡಿಯಿತ್ತು. ಇನ್ನು 2005ರಲ್ಲಿ 71.54 ಅಡಿಯಿತ್ತು. ಅಂದಹಾಗೆ ಕೆಆರ್ ಎಸ್ ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಸಾಮರ್ಥ್ಯವಿರುವುದು 124.8 ಅಡಿ.

ಕರ್ನಾಟಕದ ಮಟ್ಟಿಗೆ ಬೆಂಗಳೂರು, ಮೈಸೂರು, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳ ಜನರಿಗೆ ನೀರು ಪೂರೈಸುವ ಕೆಆರ್ ಎಸ್ ಅಣೆಕಟ್ಟೆಯಲ್ಲಿ ಬುಧವಾರ ಬೆಳಗ್ಗೆ ಸೆಕೆಂಡಿಗೆ 227 ಚದರ ಅಡಿ ಪ್ರಮಾಣದಲ್ಲಿ ನೀರಿನ ಒಳಹರಿವು ಇತ್ತು. ಹೊರಹರಿವು 764 ಕ್ಯುಸೆಕ್ಸ್ ದಾಟಿತ್ತು.

English summary
Mandya KRS Dam over flows on July 22. The Dam capacity is 124.80 feet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X