ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೆ ಲಿಂಗನಮಕ್ಕಿ ಜಲಾಶಯದ ನೀರು?

By Srinath
|
Google Oneindia Kannada News

linganamakki-to-quench-bangalore-thirst-during-2051
ಬೆಂಗಳೂರು, ಜುಲೈ22: ರಾಜಧಾನಿಯಲ್ಲಿ ಸದ್ಯಕ್ಕೇನೂ ಕುಡಿಯುವ ನೀರಿನ ಬಾಧೆಯಿಲ್ಲ. ಮಳೆ ಚೆನ್ನಾಗಿಯೇ ಆಗಿದೆ. ಆತ್ತ ಕೃಷ್ಣರಾಜ ಸಾಗರ ಅಣೆಕಟ್ಟೆ ಇಂದು ಬೆಳಗ್ಗೆ ತುಂಬಿಹರಿದಿದೆ. ಇನ್ನು ಪಕ್ಕದ ತಿಪ್ಪಗುಂಡನ ಹಳ್ಳಿ ಜಲಾಶಯವೂ ನೀರು ಕಂಡಿದೆ. ಪರಿಸ್ಥಿತಿ ಹೀಗಿರುವಾಗ ಲಿಂಗನಮಕ್ಕಿ ಜಲಾಶಯದ ನೀರನ್ನು ಬೆಂಗಳೂರಿನತ್ತ ಹರಿಸುವ ಮಾತೇಕೆ? ಎಂದು ಕೇಳಬೇಡಿ.

ಇದು ಬೇಸಿಗೆ ಕಾಲಕ್ಕೆ ಸಲ್ಲುವ ಯೋಜನೆ. ಮೊನ್ನೆ ಬೇಸಿಗೆಯಲ್ಲಿ ಬೆಂಗಳೂರು ಹನಿ ನೀರಿಗೂ ತತ್ತರಿಸಿ ಬಳಿಕ ತಜ್ಞರ ತಂಡವೊಂದು ಲಿಂಗನಮಕ್ಕಿ ಜಲಾಶಯದಿಂದ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಿ, ರಾಜಧಾನಿ ಜನಕ್ಕೆ ಬೇಸಿಗೆಯಲ್ಲಿ ಕುಡಿಯುವ ನೀರನ್ನು ಪೂರೈಸಿ ಎಂದು ಸಲಹೆ ನೀಡಿದೆ.

BWSSB ಮಾಜಿ ಮುಖ್ಯಸ್ಥ ಬಿಎನ್ ತ್ಯಾಗರಾಜ ನೇತೃತ್ವದ ಸಮಿತಿ ಸಲ್ಲಿಸಿರುವ ಅಧ್ಯಯನ ವರದಿ ಇದಾಗಿದೆ. ಇನ್ನು ಮೂರು ದಶಕಗಳ ನಂತರ ಬೆಂಗಳೂರಿಗೆ ಕಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡಲಿದೆ. ಆಗ ಕುಡಿಯುವ ನೀರಿನ ಅಗತ್ಯ ಹೆಚ್ಚಾಗಲಿದ್ದು, ಅದಕ್ಕೆ ಪರಿಹಾರಾರ್ಥವಾಗಿ 2051ರ ವೇಳೆಗೆ ಲಿಂಗನಮಕ್ಕಿ ಜಲಾಶಯದಿಂದ 30 ಟಿಎಂಸಿ ಅಡಿ ನೀರನ್ನು ತಿರುಗಿಸಿದರೆ ಸಮಸ್ಯೆ ನೀಗಬಹುದು ಎಂಬುದು ಸಮಿತಿ ಕಂಡುಕೊಂಡಿರುವ ಸತ್ಯ.

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲಾಗುವುದು ಎಂದು ಸದನದಲ್ಲಿ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಂತೆ ಜಲಮಂಡಳಿ ಎದ್ದುಕುಳಿತಿದ್ದು, ಪರಿಹಾರ ಮಾರ್ಗಗಗಳನ್ನು ಕಂಡುಕೊಳ್ಳಲು ಯತ್ನಿಸಿದೆ.

ನಗರಕ್ಕೆ ಕುಡಿಯುವ ನೀರಿನ ಪರ್ಯಾಯ ಮಾರ್ಗ ಕಂಡುಕೊಳ್ಳಲು ಅಂದಿನ ಸರಕಾರ 2010ರಲ್ಲಿ 9 ಸದಸ್ಯರ ಈ ಸಮಿತಿಯನ್ನು ರಚಿಸಿತ್ತು. ರಾಜದಾನಿಯಲ್ಲಿ ಇತ್ತೀಚೆಗೆ ವಸತಿ ನಿರ್ಮಾಣ ಕಾರ್ಯಗಳು ಭಾರಿ ಪ್ರಮಾಣದಲ್ಲಿ ನಡೆಯುತ್ತಿದ್ದು, ಅದಕ್ಕಾಗಿ ನೀರಿನ ಬಳಕೆ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರಿನಾದ್ಯಂತ ಅಪಾರ್ಟ್ ಮೆಂಟುಗಳು ನಾಯಿಕೊಡೆಗಳಂತೆ ತಲೆಯೆತ್ತುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಅಪಾರ್ಟ್ ಮೆಂಟ್ ನಿರ್ಮಾಣಕ್ಕೆ ಮಳೆ ಕೊಯ್ಲು ಕಡ್ಡಾಯಗೊಳಿಸಲಾಗಿದೆ.

ಲಿಂಗನಮಕ್ಕಿ ಜಲಾಶಯ: ಶರಾವತಿ ನದಿಗೆ ಅಡ್ಡಲಾಗಿ ವಿಶ್ವಪ್ರಸಿದ್ಧ ಜೋಗ ಜಲಪಾತದಿಂದ 6 ಕಿಮೀ ದೂರದಲ್ಲಿ ಸಾಗರ ತಾಲೂಕಿನಲ್ಲಿ ಲಿಂಗನಮಕ್ಕಿ ಜಲಾಶಯವನ್ನು 1964ರಲ್ಲಿ ನಿರ್ಮಿಸಲಾಗಿದೆ.

English summary
Linganamakki to quench Bangalore thirst during 2051. One of the suggestions mooted is to bring water from Linganamakki reservoir to quench Bangalore's thirst during summer. An expert panel has recommended sourcing water from the reservoir after delinking power generation from it. The panel headed by former BWSSB chief BN Thyagaraja has suggested drawing 30 tmcft of water from Linganamakki reservoir by 2051 to cater to the drinking water needs of Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X