ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಸ್ಥಿರಾಸ್ತಿ ದರ ಮತ್ತಷ್ಟು ಹೆಚ್ಚಳ

|
Google Oneindia Kannada News

properties
ಬೆಂಗಳೂರು, ಜು.22 : ಮಹಾನಗರ ಬೆಂಗಳೂರು ಮತ್ತಷ್ಟು ದುಬಾರಿ ಆಗಲಿದೆ. ಸ್ಥಿರಾಸ್ತಿ ಮಾರ್ಗಸೂಚಿ ಬೆಲೆಯಲ್ಲಿ ಶೇ 20 ರಿಂದ 30 ರಷ್ಟು ಏರಿಕೆ ಮಾಡಿ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕರು ಆಕ್ಷೇಪರಣೆ ಸಲ್ಲಿಸಲು 15 ದಿನಗಳ ಅವಕಾಶ ಕಲ್ಪಿಸಿದೆ.

ಪ್ರಕಟವಾಗಿರುವ ಕರಡು ಮಾರ್ಗಸೂಚಿಯಲ್ಲಿ, ಸ್ಥಿರಾಸ್ತಿಯ ಹಾಲಿ ಮಾರುಕಟ್ಟೆ ದರ, ಸ್ಥಿರಾಸ್ತಿಯ ಸಂಪರ್ಕಕ್ಕೆ ಇರುವ ರಸ್ತೆಗಳು, ಅ ಪ್ರದೇಶದಲ್ಲಿ ನಡೆಯುವ ವಾಣಿಜ್ಯ ಚಟುವಟಿಕೆಗಳು, ಕೈಗಾರಿಕಾ ಬೆಳವಣಿಗೆ ಮುಂತಾದ ಅಶಂಗಳನ್ನು ಪರಿಗಣಿಸಲಾಗಿದೆ.

ಪರಿಷ್ಕೃತ ಮಾರ್ಗಸೂಚಿಯನ್ನು ಜುಲೈ 17ರಂದು ಪ್ರಕಟಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು ಮಾರ್ಗಸೂಚಿ ಪ್ರಕಟವಾದ ದಿನದಿಂದ ಒಟ್ಟು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಗಳು ಬಂದ ನಂತರ ಅದನ್ನು ಪರಿಶೀಲಿಸಿ, ಅಂತಿಮ ಮಾರ್ಗಸೂಚಿ ಪ್ರಕಟಗೊಳ್ಳಲಿದೆ.

ಮಾರ್ಗಸೂಚಿ ಏನು ಹೇಳುತ್ತದೆ : ಮಾರ್ಗಸೂಚಿಯ ಕರಡು ಪ್ರತಿಯನ್ನು ರಚಿಸುವಾಗ, ಅಪಾರ್ಟ್‌ಮೆಂಟ್‌ಗಳ ಬೆಲೆ ನಿಗದಿ ವಿಚಾರದಲ್ಲಿ ಹೊಸ ವಿಧಾನ ಅನುಸರಿಸಲಾಗಿದೆ. ಇದರ ಅನ್ವಯ ಅಪಾರ್ಟ್‌ಮೆಂಟ್‌ನ ಪ್ರತಿ ಮಹಡಿಗೂ ಒಂದೊಂದು ರೀತಿಯ ಬೆಲೆ ನಿಗದಿಪಡಿಸಲಾಗಿದೆ.

ಅಪಾರ್ಟ್‌ಮೆಂಟ್‌ಗಳು ಒದಗಿಸುವ ಸೌಲಭ್ಯವನ್ನೂ ಬೆಲೆ ನಿಗದಿ ಮಾಡುವ ವೇಳೆಗೆ ಪರಿಗಣಿಸಲಾಗಿದ್ದು, ಅಪಾರ್ಟ್‌ಮೆಂಟ್‌ಗಳಲ್ಲಿ ಐದನೆಯ ಮಹಡಿವರೆಗಿನ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ.

ಆರರಿಂದ 15ನೇ ಮಹಡಿವರೆಗೆ, ಪ್ರತಿ ಮಹಡಿಗೆ ಸ್ಥಿರಾಸ್ತಿ ಬೆಲೆ ಶೇಕಡ 0.5ರಷ್ಟು ಹೆಚ್ಚಳವಾಗಿದ್ದು, 15ನೇ ಮಹಡಿಗಿಂತ ಮೇಲಿರುವ ಸ್ಥಿರಾಸ್ತಿಯ ಮಾರ್ಗಸೂಚಿ ಬೆಲೆಯನ್ನು ಹೆಚ್ಚಿಸಿಲ್ಲ.

ಭಾರೀ ಹೆಚ್ಚಳ : ನಗರದ ಪ್ರಮುಖ ಪ್ರದೇಶಗಳಾದ ಮಹಾತ್ಮ ಗಾಂಧಿ ರಸ್ತೆ, ಜಯನಗರ, ಕೋರಮಂಗಲ, ಸದಾಶಿವನಗರ ಮುಂತಾದ ಪ್ರದೇಶಗಳ ಸ್ಥಿರಾಸ್ತಿ ಬೆಲೆಯಲ್ಲಿ ಭಾರೀ ಹೆಚ್ಚಳ ಮಾಡಲಾಗಿದೆ.

ಎಲ್ಲಿ ಎಷ್ಟು : ನಗರದ ಗಾಂಧಿ ಬಜಾರ್ ಪ್ರದೇಶದಲ್ಲಿ ನಿವೇಶನದ ಬೆಲೆ ಪ್ರತಿ ಚದರ ಅಡಿಗೆ 8,000 ರೂ.ನಿಗದಿಗೊಳಿಸಲಾಗಿದೆ. ಈ ಪ್ರದೇಶದ ಅಪಾರ್ಟ್‌ಮೆಂಟ್ ಬೆಲೆ ಪ್ರತಿ ಚದರ ಅಡಿಗೆ 6,890 ರೂಪಾಯಿಗೆ (ಮೊಸಾಯಿಕ್) ನಿಗದಿಪಡಿಸಲಾಗಿದೆ.

ಮಾಧವ ಪಾರ್ಕ್ ಪ್ರದೇಶದಲ್ಲಿ ನಿವೇಶನ ಬೆಲೆ ಪ್ರತಿ ಚದರ ಅಡಿಗೆ 8,000 ರೂಪಾಯಿಗೆ ಹೆಚ್ಚಿಸಲಾಗಿದೆ. ಜಯನಗರ 4 ಬ್ಲಾಕ್‌ನಲ್ಲಿ ನಿವೇಶನದ ಬೆಲೆ ಪ್ರತಿ ಚದರ ಅಡಿಗೆ 11,000 ರೂಪಾಯಿ ಹೆಚ್ಚಳವಾಗಲಿದೆ ಎಂದು ಕರಡಿನಲ್ಲಿ ಪ್ರಕಟಿಸಲಾಗಿದೆ.

ಕರಡು ಪ್ರತಿ ಎಲ್ಲಿ ದೊರೆಯುತ್ತದೆ : ಬೆಂಗಳೂರಿನ ಐದು ವಿಭಾಗಗಳ 42 ಉಪ ನೋಂದಣಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ಸ್ಥಿರಾಸ್ತಿಗೆ ನಿಗದಿಪಡಿಸಿರುವ ದರಗಳ ವಿವರವನ್ನು ಇಲಾಖೆಯ ವೆಬ್ ಸೈಟ್ http://www.karunadu.gov.in/karigr/ ಭೇಟಿ ನೀಡಿ ಪಡೆದುಕೊಳ್ಳಬಹುದಾಗಿದೆ.

ಸಾರ್ವಜನಿಕರು ಆಕ್ಷೇಪಣೆಗಳನ್ನು ನೋಂದಣಿ ಮಹಾಪರಿವೀಕ್ಷಕರು, ಮುದ್ರಾಂಕಗಳ ಆಯುಕ್ತರ ಕಚೇರಿ, ಕಂದಾಯ ಭವನ, 8ನೇ ಮಹಡಿ, ಕೆ.ಜಿ. ರಸ್ತೆ, ಬೆಂಗಳೂರು - 560009 ವಿಳಾಸಕ್ಕೆ ಕಳುಹಿಸಬಹುದಾಗಿದೆ.

English summary
The Karnataka stamps and registration department has proposed a sharp increase ranging from 40-80 percent in the guideline value of properties across Bangalore. Details posted at www.karunadu.gov.in/karigr website. Department invite suggestions or objections within next 15 days from citizens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X