ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಸ್ ಖೇಣಿಗೆ ಹೈಕೋರ್ಟಿನಿಂದ ನೋಟಿಸ್

By Mahesh
|
Google Oneindia Kannada News

High court Notice to Ashok Kheny
ಬೆಂಗಳೂರು, ಜು.19: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸುಳ್ಳು ದಾಖಲೆ ಸಲ್ಲಿಸಿದ ಆರೋಪದ ಹಿನ್ನೆಲೆಯಲ್ಲಿ ನೈಸ್ ಕಂಪನಿ ಮುಖ್ಯಸ್ಥ ಹಾಗೂ ಬೀದರ್ ಶಾಸಕ ಅಶೋಕ್ ಖೇಣಿ ಅವರಿಗೆ ಶುಕ್ರವಾರ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಅಶೋಕ್ ಖೇಣಿ ಅವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಜಯ ಗಳಿಸಿದ್ದಾರೆ. ಹೀಗಾಗಿ ಅವರ ಶಾಸಕತ್ವವನ್ನು ರದ್ದುಗೊಳಿಸಿಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಜಸ್ಟ್ವೀಸ್ ಕೆನ್ ಕೇಶವನಾರಾಯಣ ಅವರು ಈ ಸಂಬಂಧ ಖೇಣಿ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಖೇಣಿ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕರ್ನಾಟಕ ಮಕ್ಕಳ ಪಕ್ಷದಿಂದ ಸ್ಪರ್ಧಿಸಿ ಜಯ ಗಳಿಸಿದ್ದರು.
ಖೇಣಿ ಸ್ಪರ್ಧೆ ಸಂವಿಧಾನ ಬಾಹಿರ ಎಂದು ಟೆಜೆ ಅಬ್ರಹಾಂ ವಾದಿಸಿದ್ದಾರೆ.

ಸಂವಿಧಾನದ ಪ್ರಕಾರ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಮತ್ತು ಆಯ್ಕೆಯಾಗ ಬಯಸುವವರು ಮತ್ತೊಂದು ದೇಶದ ಪೌರತ್ವ ಹೊಂದಿರುವಂತಿಲ್ಲ. ಇದಲ್ಲದೆ ಆಯಾ ರಾಜ್ಯದ ಯಾವುದೇ ರೀತಿಯ ಗುತ್ತಿಗೆದಾರಿಕೆ, ಪೂರೈಕೆದಾರಿಕೆ ಮತ್ತು ನೇರವಾಗಿ ಅಥವಾ ಪರೋಕ್ಷವಾಗಿ ಸರ್ಕಾರದಿಂದ ಲಾಭದ ಹುದ್ದೆಯಲ್ಲಿರುವಂತಿಲ್ಲ.
ಹೀಗಾಗಿ ಈ ಎಲ್ಲ ವಿಷಯಗಳತ್ತ ಗಂಭೀರವಾಗಿ ಚಿಂತಿಸಿದರೆ ಖೇಣಿಯ ಸ್ಪರ್ಧೆ ಸಂವಿಧಾನ ಬಾಹಿರ ಎಂದು ವಾದಿಸಿದ್ದಾರೆ.

ಅಮೆರಿಕದಲ್ಲಿ ಅಲ್ಲಿನ ಮೂಲದವರು ಅಥವಾ ಅಮೆರಿಕ ಪೌರತ್ವ ಪಡೆದವರು ಮಾತ್ರ ಗುತ್ತಿಗೆದಾರಿಕೆ ಮತ್ತು ಸರ್ಕಾರಿ ಯೋಜನೆಗಳಲ್ಲಿ ಪಾಲುದಾರಿಕೆ ಪಡೆಯಬಹುದು. ಹಾಗಾಗಿ ಅಶೋಕ ಖೇಣಿ ನೇತೃತ್ವದ ಸ್ಯಾಬ್ ಎಂಜಿನಿಯರಿಂಗ್ ಕಂಪನಿ ಅಲ್ಲಿನ ಗುತ್ತಿಗೆದಾರಿಕೆ ಮತ್ತು ಸರ್ಕಾರಿ ಯೋಜನೆಗಳಲ್ಲಿ ಸೆಪ್ಟಾ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಅಮೆರಿಕ ಪೌರತ್ವ ಪಡೆದಿದ್ದನ್ನು ಸ್ಪಷ್ಟಪಡಿಸುತ್ತದೆ ಎಂದು ಅಬ್ರಹಾಂ ಅರ್ಜಿಯಲ್ಲಿ ತಿಳಿಸಿದ್ದಾರೆ.

English summary
Justice K N Keshavanarayana issued notice to Ashok Kheny, MD of NICE company from Bidar (Rural) constituency on a petition filed by T J Abraham challenging his election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X