ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲೂ ದುರ್ಭಿಕ್ಷ ಕಾಲ : ಡೆಟ್ರಾಯಿಟ್ ದಿವಾಳಿ

By Mahesh
|
Google Oneindia Kannada News

ಡೆಟ್ರಾಯಿಟ್, ಜು.19: ವಿಶ್ವದ ದೊಡ್ಡಣ್ಣ ಅಮೆರಿಕದಲ್ಲೂ ದುರ್ಭಿಕ್ಷ ಕಾಲ ಎದುರಾಗುವುದುಂಟೇ? ಯುಎಸ್ಎ ದೊಡ್ಡ ನಗರಗಳಲ್ಲಿ ಒಂದೆನಿಸಿರುವ, ಆಟೋಮೊಬೈಲ್ ಕ್ಷೇತ್ರದ ಅಗ್ರಗಣ್ಯ ನಗರ ಡೆಟ್ರಾಯಿಟ್ ದಿವಾಳಿ ಎದ್ದಿದೆ.

ಕಳೆದ ನಾಲ್ಕು ತಿಂಗಳ ಹಿಂದೆ ಸುಮಾರು 2 ಮಿಲಿಯನ್ ಜನಸಂಖ್ಯೆ ಹೊಂದಿದ್ದ ಡೆಟ್ರಾಯಿಟ್ ನಗರ ಈಗ 20 ಬಿಲಿಯನ್ ಡಾಲರ್ ಸಾಲ ಹೊಂದಿದೆ.ಅಮೆರಿಕದ ನಾಲ್ಕನೇ ಅತಿದೊಡ್ಡ ನಗರವಾದ ಡೆಟ್ರಾಯಿಟ್ ನಗರದ ಜನಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ.

It happens also in USA: Detroit city goes bankrupt

ಮೂಲ ಸೌಕರ್ಯ ಕೊರತೆ, ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅರಾಜಕತೆಯ ಕಾರಣ ಇಲ್ಲಿಂದ ಜನರು ಬೇರೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಹಲವೆಡೆ 'ಎಮೆರ್ಜೆನ್ಸಿ ಮ್ಯಾನೇಜರ್' ಗಳನ್ನು ನೇಮಿಸಲಾಗಿದ್ದು, ನಗರದ ಆಸ್ತಿಗಳನ್ನು ಕರಗಿಸಿ ಸಾಲದ ಹೊರೆ ಇಳಿಸಲು ಸರ್ಕಾರ ಪರಿತಪಿಸುತ್ತಿದೆ.

ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಸಂಸ್ಥೆಗಳ ಉದ್ಯೋಗಿಗಳ ಪಿಂಚಣಿ ಹಣಕ್ಕೂ ಕತ್ತರಿ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ನಗರವನ್ನು ದಿವಾಳಿ ಎಂದು ಘೋಷಿಸದಂತೆ ಅನೇಕ ಅಧಿಕಾರಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.

ಮೋಟರ್ ನಗರಿ ಡೆಟ್ರಾಯಿಟ್ 1950ರಲ್ಲಿ ಉತ್ತಮ ತಲಾ ಆದಾಯ(per capita income) ಹೊಂದಿದ್ದ ಡೆಟ್ರಾಯಿಟ್ 60ರ ದಶಕದ ನಂತರ ಗಲಭೆ, ದೊಂಬಿಗಳಿಗೆ ಹೆಸರುವಾಸಿಯಾಗಿಬಿಟ್ಟಿತು. ಈಗ ಕ್ರೈಂರೇಟ್ ನಿಯಂತ್ರಿಸಲು ಆಗದಂತೆ ಆಗಿಬಿಟ್ಟಿದೆ. ಶೇ 40 ರಷ್ಟು ಬೀದಿ ದೀಪಗಳು ಕಾರ್ಯ ನಿರ್ವಹಿಸುತ್ತಿಲ್ಲ. ನಿರುದ್ಯೋಗಿಗಳ ಸಂಖ್ಯೆ ಶೇ 18 ರಷ್ಟೂ ಪ್ರಮಾಣದಲ್ಲಿದ್ದು, ರಾಷ್ಟ್ರೀಯ ಅಂಕಿ ಅಂಶಗಳಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಿದೆ.

ಡೆಟ್ರಾಯಿಟ್ ನಗರದ ಆದಾಯ ಕಡಿಮೆಯಾಗುತ್ತಿದ್ದು, ಸಾಲದ ಹೊರೆ ಹೆಚ್ಚಾಗುತ್ತಿದೆ. ಇದರಿಂದ ಅನೇಕ ದೊಡ್ಡ ದೊಡ್ಡ ಆಟೋಮೊಬೈಲ್ ಕಂಪನಿಗಳು, ಮಾರುಕಟ್ಟೆ ತಜ್ಞರು, ಹೂಡಿಕೆದಾರರು ನಗರದ ಕಡೆ ಕಾಲಿಡದಂತೆ ಎಚ್ಚರಿಕೆ ವಹಿಸಿದ್ದಾರೆ.

English summary
Detroit, one of the largest cities in the USA, on Thursday filed the biggest municipal bankruptcy in the nation's history. It marked a new low in a decline that has left the USA's auto-making capital bleeding while leaving the city services in a shambles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X