ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿರಾ ಏರ್ ಪೋರ್ಟಿನಲ್ಲಿ 3950 ಕೆಜಿ ಚಿನ್ನ-ಬೆಳ್ಳಿ ಪತ್ತೆ

By Srinath
|
Google Oneindia Kannada News

delhi-indira-gandhi-airport-warehouse-stores-3950-kg-gold-silver
ನವದೆಹಲಿ, ಜುಲೈ 19: ಇಂದಿರಾಗಾಂಧಿ ಅಂತಾರಾಷ್ಟ್ರೀಯ ಏರ್ ಪೋರ್ಟಿನಲ್ಲಿ ಬರೋಬ್ಬರಿ 3,950 ಕೆಜಿ ಚಿನ್ನದ ನಿಕ್ಷೇಪ ಇದೆ. ಇದು ಸುಮಾರು 50 ವರ್ಷಗಳಿಂದ ಗುಡ್ಡೆ ಹಾಕಿಕೊಂಡಿರುವ ಚಿನ್ನ. ಅಂದಹಾಗೆ, ಕಳ್ಳಸಾಗಣೆದಾರರಿಂದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಚಿನ್ನವಿದು.

ತಾಜಾ ವರದಿಯ ಪ್ರಕಾರ 550 ಕೆಜಿ ಚಿನ್ನಾಭರಣ ಮತ್ತು 3400 ಕೆಜಿ ಬೆಳ್ಳಿ ವಸ್ತುಗಳು ಇಲ್ಲಿವೆ. ದಿರ ಮಾರುಕಟ್ಟೆ ಮೌಲ್ಯ 160 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಕಳೆದ 50 ವರ್ಷಗಳಿಂದ ಕಳ್ಳಸಾಗಣೆದಾರರಿಂದ ವಶಪಡಿಸಿಕೊಂಡಿರುವ ಚಿನ್ನ-ಬೆಳ್ಳಿ ಇದು. ಆದರೆ ಇದೀಗ ತಡವಾಗಿಯಾದರೂ ಈ ಚಿನ್ನ-ಬೆಳ್ಳಿಯನ್ನು ಹರಾಜು ಪ್ರಕ್ರಿಯೆ ಮೂಲಕ ವಿಲೇವಾರಿ ಮಾಡಲು ಕಸ್ಟಮ್ಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇದರಿಂದ ಬಂದ ಹಣವೆಲ್ಲ ಕಾನೂನು ಇಲಾಖೆಗೆ ಸೇರುತ್ತದೆ. ಹರಾಜು ನಂತರವೂ ಉಳಿದ ಚಿನ್ನ-ಬೆಳ್ಳಿಯನ್ನು ಹಣ ಮುದ್ರಣ ಇಲಾಖೆಗೆ ತಲುಪಿಸಲಾಗುವುದು ಎಂದು ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ಕಳೆದ ವರ್ಷ ಮೊದಲ ಬಾರಿಗೆ ಸ್ವಲ್ಪ ಮಟ್ಟಿಗೆ ಈ ಚಿನ್ನ-ಬೆಳ್ಳಿಯನ್ನು ಹರಾಜು ಮಾಡಿದ್ದೆವು. ಆದರಿಂದ 100 ಕೋಟಿ ರೂ. ಸಂದಾಯವಾಗಿತ್ತು. ಈ ವರ್ಷ ಕನಿಷ್ಠ 160 ಕೋಟಿ ರೂ. ಮೌಲ್ಯದ ಈ ಚಿನ್ನ-ಬೆಳ್ಳಿಯನ್ನು ಹರಾಜು ಮೂಲಕ ಬಿಕರಿಯಾಗಬಹುದು ಎಂದು ಅವರು ಅಂದಾಜಿಸಿದ್ದಾರೆ.

English summary
Delhi’s Indira Gandhi Airport warehouse stores 3950 kg gold -silver. A recently released report has revealed that Delhi’s Indira Gandhi Airport warehouse stores around 3950 kilograms of custom seized gold and silver. Such a huge cache of ornaments has been accumulating for the last 50 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X