ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂದಿನಿ ಹಾಲು ದರ ಆಗಸ್ಟಿನಿಂದ ಏರಿಕೆ ಖಚಿತ

By Srinath
|
Google Oneindia Kannada News

kmf-nandini-milk-price-hike-imminent-minister-jayachandra
ಬೆಂಗಳೂರು, ಜುಲೈ 19: ರಾಜ್ಯದ ಮಹಾಜನತೆಗೆ ಸಣ್ಣ ಶಾಕ್. ಸದ್ಯದಲ್ಲೇ ನಂದಿನಿ ಹಾಲು ದರ ಏರಿಕೆಯಾಗುವುದು ಖಚಿತವಾಗಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಡಬಲ್ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿಯಾದ ಮೊದಲ ದಿನ ಘೋಷಿಸಿದ್ದ ಸಿಎಂ ಸಿದ್ದು, ಅದಕ್ಕೆ ಎಲ್ಲಿಂದ ದುಡ್ಡು ಹೊಂದಿಸುತ್ತಾರೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.

ಏನಿಲ್ಲ, 8 ಬಜೆಟುಗಳ ಸರದಾರ ಸಿದ್ದರಾಮಯ್ಯದು ಸಿಂಪಲ್ ಲೆಕ್ಕಾಚಾರ. ಅವರ ದುಡ್ಡು ಕಿತ್ತು ಕೊಂಡು, ಇವರಿಗೆ ಕೊಡುವುದು. ಅವರು ಮೊದಲ ದಿನ ಘೋಷಿಸಿದ ಎಲ್ಲ 'ಅಗ್ಗದ' ಘೋಷಣೆಗಳ ಹಿಂದಿನ ಲೆಕ್ಕಾಚಾರವೂ ಹೀಗೆಯೇ ಇದೆ. ಅವರದು ಕಿತ್ಕೊಂಡು ಇವರಿಗೆ ಕೊಡೋದು.

ಈಗ ಹಾಲಿನ ದರ ಏರಿಕೆ ಕಥೆಯೂ ಅದೇ. ಆದರೆ ಸರಕಾರದ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿರುವ ಪಶು ಸಂಗೋಪನೆ ಸಚಿವ ಟಿಬಿ ಜಯಚಂದ್ರ ಅವರು ನಂದಿನಿ ಹಾಲು ದರ ಏರಿಸ್ತೀವಿ. ಅದೂ ನಿಮಗೆ ಹೊರೆಯಾಗದಂತೆ (ಗುತ್ತಾಗದಂತೆ) ಏರಿಸ್ತೀವಿ ಎಂದು ಹೇಳುವ ದಾರ್ಷ್ಯವನ್ನೂ ಪ್ರದರ್ಶಿಸಿದ್ದಾರೆ.

ಅಷ್ಟೇ ಅಲ್ಲ, ದರ ಏರಿಕೆಗೆ ಸಚಿವರ ಸಮಜಾಯಿಷಿ ಇನ್ನೂ ಇದೆ. ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಹಾಲಿನ ಬೆಲೆ ಕಡಿಮೆಯಿದೆ. ಇನ್ನು ರೈತರಿಗೆ ಪ್ರತಿ ಲೀಟರಿಗೆ 4 ರೂ ಪ್ರೋತ್ಸಾಹ ಧನ ಬೇರೆ ನೀಡಬೇಕಾಗುತ್ತದೆ. ಕೆಎಂಎಫ್‌ ಅನ್ನು ಆರ್ಥಿಕವಾಗಿ ಸಧೃಡಗೊಳಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಣ್ಣ ಪ್ರಮಾಣದ ಬೆಲೆ ಏರಿಕೆ ಅನಿವಾರ್ಯ. ಇದು ಹಾಲು ಕೊಳ್ಳುವ ಗ್ರಾಹಕರಿಗೆ ಹೊರೆಯಾಗದು ಎಂದಿದ್ದಾರೆ.

ಪ್ರತಿ ಲೀಟರ್ ಹಾಲಿಗೆ ಪಕ್ಕದ ಆಂಧ್ರಪ್ರದೇಶದಲ್ಲಿ 32 ರೂ, ಕೇರಳ 33, ಮಹಾರಾಷ್ಟ್ರ 29, ದೆಹಲಿ 30, ಗೋವಾ 31 ಹಾಗೂ ಗುಜರಾತ್‌ 31 ರೂ ಇದೆ. ನಮ್ಮಲ್ಲಿ 1 ಲೀಟರ್ ಬ್ಲೂ ಹಾಲಿಗೆ 27 ರೂ. ಇದೆ. ಅದಿನ್ನೆಷ್ಟು ಹೆಚ್ಚಾಗುತ್ತದೆ, ನೋಡೋಣ.

English summary
KMF Nandini milk price hike imminent says Animal Husbandry Minister TB Jayachandra. To get money for subsidicing the milk producers milk price hike is required said Minister Jayachandra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X