ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Air India ಆರ್ಥಿಕ ಸಂಕಷ್ಟ: 400 ಗಗನಸಖಿಯರು ನಾಪತ್ತೆ!

By Srinath
|
Google Oneindia Kannada News

new-delhi-400-air-india-airhostesses-absconding
ನವದೆಹಲಿ, ಜುಲೈ 19: ಆರ್ಥಿಕ ಮಹಾಸಂಕಷ್ಟಕ್ಕೆ ಸಿಕ್ಕಿ ಬಳಲುತ್ತಿರುವ ಏರ್ ಇಂಡಿಯಾ ವಿಮಾನ ಸಂಸ್ಥೆ ಹೊಸ ಸಂಕಷ್ಟ ಎದರಾಗಿದೆ.

ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು 2 ವರ್ಷಗಳ ಹಿಂದೆ 3600 ಮಹಿಳಾ ಉದ್ಯೋಗಿಗಳನ್ನು ತಾತ್ಕಾಲಿಕವಾಗಿ ಮನೆಗೆ ಕಳುಹಿಸಿತ್ತು. ಪರಿಸ್ಥಿತಿ ಸುಧಾರಿಸಿದ ನಂತರ ಕೆಲಸಕ್ಕೆ ವಾಪಸ್ ಕರೆಸಿಕೊಳ್ಳುವುದಾಗಿ ಸರಕಾರಿ ವಿಮಾನಯಾನ ಸಂಸ್ಥೆ ಭರವಸೆ ನೀಡಿ, ಹೆಣ್ಣುಮಕ್ಕಳನ್ನು ಮನೆಗೆ ಕಳುಹಿಸಿಕೊಟ್ಟಿತ್ತು.

ಆದರೆ ಉಹುಃ. ಹಾಗೆ ಮನೆಗೆ ತೆರಳಿದ ಉದ್ಯೋಗಿಗಳ ಪೈಕಿ 400 ಮಹಿಳೆಯರು ಸಂಸ್ಥೆಯತ್ತ ಮುಖ ಮಾಡಿಲ್ಲ. ಇದರಿಂದ Air India ಆಡಳಿತ ಮಂಡಳಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದೆ.

ಇವರ ಪೈಕಿ 300 ಮಂದಿ ದೆಹಲಿಯ ಗಗನಸಖಿಯರಾಗಿದ್ದಾರೆ. ಇವರಿಗೆಲ್ಲ ತಕ್ಷಣವೇ show cause notice ಜಾರಿಗೊಳಿಸುವುದಾಗಿ Air India ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.

ನಿನ್ನೆಯಷ್ಟೇ ಏರ್ ಇಂಡಿಯಾ ಪೈಲಟುಗಳು ಅವಾಂತರ ಸೃಷ್ಟಿಸಿದ್ದರು:
ಕನ್ನಡ ಸಿನಿಮಾ ತಾರೆಯೊಬ್ಬರು ಕಾಕ್ ಪಿಟ್ ಪ್ರವೇಶಿಸಿದ ಆರೋಪದ ಮೇಲೆ ಇಬ್ಬರು ಏರ್ ಇಂಡಿಯಾ ಪೈಲಟ್ ಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಈ ವಿಮಾನ ಬೆಂಗಳೂರಿನಿಂದ ಹೈದರಾಬಾದಿಗೆ ಪ್ರಯಾಣಿಸುತ್ತಿತ್ತು.

ವಿಮಾನದ ಕಾಕ್ ಪಿಟ್ ಗೆ ನಟಿಯೊಬ್ಬರಿಗೆ ಪ್ರವೇಶ ನೀಡುವ ಮೂಲಕ ವಿಮಾನಯಾನದ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿರುವ ಹಾಗೂ ಕರ್ತವ್ಯಲೋಪ ಎಸಗಿರುವ ಆರೋಪದ ಮೇರೆಗೆ ಇವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ನಟಿಯೊಬ್ಬರು (ನಿತ್ಯಾ ಮೆನನ್) ಕಾಕ್ ಪಿಟ್ ಪ್ರವೇಶಿಸಿ ಅಬ್ಸರ್ವರ್ ಸೀಟ್ ನಲ್ಲಿ ಕುಳಿತಿದ್ದರು. ಈ ಸೀಟಿನಲ್ಲಿ ಕುಳಿತುಕೊಳ್ಳಬೇಕಾದರೆ ಡಿಜಿಸಿಎ ಅನುಮತಿ ಇರಬೇಕು. ನಿಯಮಗಳನ್ನು ಉಲ್ಲಂಘಿಸಿರುವ ಇಬ್ಬರು ಪೈಲಟ್ ಗಳನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ತುರ್ತು ಸಂದರ್ಭಗಳನ್ನು ಹೊರಪಡಿಸಿದರೆ ನಿಯಮಗಳ ಪ್ರಕಾರ ಯಾವುದೇ ಪ್ರಯಾಣಿಕರು ಕಾಕ್ ಪಿಟ್ ಗೆ ಪ್ರವೇಶಿಸುವಂತಿಲ್ಲ. ಆದರೆ ಈ ಇಬ್ಬರು ಪೈಲಟ್ ಗಳು ಕರ್ತವ್ಯಪ್ರಜ್ಞೆ ಮರೆತು ನಡೆದುಕೊಂಡಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗಿದೆ.

ಇಷ್ಟಕ್ಕೂ ಕಾಕ್ ಪಿಟ್ ಪ್ರವೇಶಿಸಿದ್ದ ನಟಿ ಯಾರು ಎಂಬ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಮೂಲಗಳ ಪ್ರಕಾರ ಆ ನಟಿ ಕನ್ನಡದ 'ಮೈನಾ' ಚಿತ್ರದ ನಾಯಕಿ ನಿತ್ಯಾ ಮೆನನ್ ಎನ್ನಲಾಗಿದೆ. ಆದರೆ ಈ ಸುದ್ದಿಯನ್ನು ನಿತ್ಯಾ ಮೆನನ್ ಸಂಪೂರ್ಣ ಅಲ್ಲಗಳೆದಿದ್ದಾರೆ.

ಸದ್ಯಕ್ಕೆ ನಿತ್ಯಾ ಮೆನನ್ ಅವರು ತೆಲುಗು ಚಿತ್ರವೊಂದರಲ್ಲಿ ಅಭಿನಯಿಸಲು ಹೈದರಾಬಾದ್ ಗೆ ತೆರಳಿದ್ದಾರೆ. ಅವರು ಯಾವುದೇ ವಿಮಾನದ ಕಾಕ್ ಪಿಟ್ ಗೆ ಪ್ರವೇಶಿಸಿಲ್ಲ. ಇಷ್ಟಕ್ಕೂ ಕಾಕ್ ಪಿಟ್ ಪ್ರವೇಶಿಸಿರುವವರು ಯಾರು ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ ಅವರ ಮ್ಯಾನೇಜರ್.

English summary
New Delhi-400 Air India airhostesses absconding. The national airline management is perturbed with massive indiscipline among its staff. It found that out of 3600 female employees who had taken a two year break from the job. According to reports more than 300 airhostesses are from Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X