ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PayPal ಕೃಪೆ: ಆತ ಗೇಟ್ಸ್ ಗಿಂತ ಶ್ರೀಮಂತನಾಗಿಬಿಟ್ಟ!

By Srinath
|
Google Oneindia Kannada News

ಮೆಕ್ಸಿಕೊ, ಜುಲೈ 18: ದೇವರು ಕೊಡೋಕ್ಕೆ ಶುರು ಮಾಡಿದರೆ ಸರಿಆಯಿಗಯೇ ಕೊಡುತ್ತಾನಂತೆ- ಅದು ಕಷ್ಟವೂ ಆಗಬಹುದು, ಸುಖವೂ ಆಗಬಹುದು! ಇದಕ್ಕೆ ದೃಷ್ಟಾಂತ ನೀಡುವುದಾದರೆ ಪೇಪಾಲ್ ಎಂಬ ಅಂತಾರಾಷ್ಟ್ರೀಯ ಬ್ಯಾಂಕ್ ಮಾದರಿಯ ಖಾಸಗಿ ಸಂಸ್ಥೆ ತನ್ನ ಗ್ರಾಹಕನ ಖಾತೆಗೆ accidentally ಒಂದಷ್ಟು ಮೊತ್ತವನ್ನು ವರ್ಗಾಯಿಸಿದೆ. ಅಷ್ಟೇ...

ಆ ಗ್ರಾಹಕ ಬಿಲ್ ಗೇಟ್ಸ್ ಗಿಂತ ಲಕ್ಷಾಂತರ ಪಟ್ಟು ಹೆಚ್ಚಿಗೆ ಶ್ರೀಮಂತನಾಗಿಬಿಟ್ಟ! ಯಾಕೆ, ಏನಾಯ್ತು? ಅಂತ ಕೇಳುವುದಕ್ಕು ಮುನ್ನ PayPal ಬಗ್ಗೆ ಒಂದಿಷ್ಟು ಹೇಳುವುದು ಒಳಿತು.

ಈ PayPal ಎಂಬುದು ಅಂತಾರಾಷ್ಟ್ರೀಯ ಸ್ತರದಲ್ಲಿ ಕರಾರುವಕ್ಕಾಗಿ ಕಾರ್ಯನಿರ್ವಹಿಸುವ ಖಾಸಗಿ ಸಂಸ್ಥೆ. ಇದು ಬ್ಯಾಂಕ್ ಮಾದರಿಯೇ ಕೆಲಸ ಮಾಡುತ್ತದೆ. ಇದು ಕಾರ್ಯನಿರ್ವಹಿಸುವುದೆಲ್ಲಾ ಇಂಟರ್ನೆಟ್ ಮೂಲಕವೇ! ಮೊದಲು ಗ್ರಾಹಕರು PayPal ಸದಸ್ಯರಾಗಬೇಕು.

paypal-user-accidentally-becomes-million-times-richer-than-gates

ಅಲ್ಲಿಂದ ಮುಂದಕ್ಕೆ ನೀವು ಪ್ರಪಂಚದ ಯಾವುದೇ ಮೂಲೆಯಲ್ಲೇ ಇದ್ದರೂ ಜಾಗತಿಕಮಟ್ಟದ ಯಾವುದೇ ಕಂಪನಿಯ ಸೇವೆಯನ್ನು ಪಡೆಯಬಹುದು. ಅದಕ್ಕೆ ಅನುವು ಮಾಡಿಕೊಡುವುದ ಅಂದರೆ ನೀವು ವ್ಯವಹರಿಸುವ ಸಂಸ್ಥೆಗೆ ನಿಮ್ಮ ಹಣವನ್ನು ವರ್ಗಾಯಿಸುವುದು ಅಥವಾ ಆ ಕಂಪನಿಯಿಂದ ನಿಮಗೆ ಹಣವನ್ನು ರವಾನಿಸುವುದು ಇದರ ಕಸುಬು. ಇದನ್ನು ಹೆಚ್ಚಾಗಿ ಹಣಕಾಸು ಸೇವಾ ಸಂಸ್ಥೆಗಳು/ ebay ಖರೀದಿದಾರರು ಉಪಯೋಗಿಸುತ್ತಾರೆ. ಯಾರು ಬೇಕಾದರೂ ಇದರ ಸದಸ್ಯ ಗ್ರಾಹಕರಾಗಬಹುದು.

ಅದರಂತೆ ಡೆಲ್ ವೇರ್ ನಲ್ಲಿರುವ 56 ವರ್ಷದ ಕ್ರಿಸ್ ರೆಯನಾಲ್ಡ್ಸ್ ಎಂಬ ಗ್ರಾಹಕರೊಬ್ಬರ ಖಾತೆಗೆ ಕಳೆದ ತಿಂಗಳು ಕೇವಲ 92,233,720,368,547,800 ಡಾಲರ್ ಅನ್ನು ವರ್ಗಾಯಿಸಿಬಿಟ್ಟಿದೆ! ಅಂದರೆ ಆ ಗ್ರಾಹಕ ಬಿಲ್ ಗೇಟ್ಸ್ ಎಂಬ ಜಗತ್ ಶ್ರೀಮಂತನಿಗಿಂತ ಲಕ್ಷಾಂತರ ಪಟ್ಟು ಹೆಚ್ಚು ದಿಢೀರ್ ಶ್ರೀಮಂತನಾಗಿಬಿಟ್ಟಿದ್ದಾನೆ.

10 ವರ್ಷಗಳಿಂದ PayPal ಜತೆ ವ್ಯವಹರಿಸುತ್ತಿರುವ ಕ್ರಿಸ್ ರೆಯನಾಲ್ಡ್ಸ್ ಗೆ ತನ್ನ ಖಾತೆಯಲ್ಲಿ ಈ ಪಾಟಿ ಹಣವಿರುವುದನ್ನು ನೋಡಿ ಎದೆ ಒಡೆದುಹೋಗದಿರುವುದು ಹೆಚ್ಚೇ! ನಮಗೆ ಬಿಡಿ ಅಷ್ಟು ಮೊತ್ತವನ್ನು (92 quadrillion $) ಲೆಕ್ಕ ಹಾಕಿ, ಸರಿಯಾಗಿ ಹೇಳೋಕ್ಕೂ ಬರೋಲ್ಲ.

ಅಂದಹಾಗೆ ಕ್ರಿಸ್ ರೆಯನಾಲ್ಡ್ಸ್ ಸಹ ಈತನೂ ಭಾರಿ ಕುಳವೇ. ಮೆಕ್ಸಿಕೋದಲ್ಲಿ ದೊಡ್ಡ ಟೆಲಿಕಾಂ ಕಂಪನಿಯ ಮಾಲೀಕ. ಆತನ ಖಾತೆಯಲ್ಲೂ 73 ಶತಕೋಟಿ ಡಾಲರ್ ಹಣವಿದೆ. ಅಲ್ಲ, ಆತನ ಖಾತೆಗೆ ದಿಢೀರನೆ ಹರಿದು ಬಂದ 92 quadrillion $ ಹೋಲಿಸಿದರೆ 73 ಶತಕೋಟಿ ಡಾಲರ್ ಏನೇನೂ ಅಲ್ಲ ಬಿಡಿ. ಆದರೆ ಅದು ಹೆಚ್ಚು ಕಾಲ ಆತನ ಖಾತೆಯಲ್ಲಿ ಉಳಿದಿಲ್ಲ.

ಕ್ರಿಸ್ ರೆಯನಾಲ್ಡ್ಸ್ ಏನಾದರೂ ಮಾಡುವುದಕ್ಕೂ ಮುನ್ನವೇ ಎಚ್ಚೆತ್ತುಕೊಂಡ PayPal ತಕ್ಷಣ ಆ ವರ್ಗಾವಣೆಯನ್ನು ತಡೆಹಿಡಿದು, ಅಷ್ಟೂ ಮೊತ್ತವನ್ನು ತನ್ನ ಖಾತೆಗೇ ಮರುವರ್ಗಾಯಿಸಿಕೊಂಡುಬಿಟ್ಟಿದೆ. ಹಾಗಾಗಿ ಹೆಚ್ಚು ಅನಾಹುತ ಸಂಭವಿಸಿಲ್ಲ. ಆದರೂ ತನ್ನ ತಪ್ಪಿಗೆ ಕ್ಷಮೆ ಕೋರಿರುವ PayPal ತನ್ನ 'ಅಮೂಲ್ಯ' ಗ್ರಾಹಕನಿಗೆ ಬಹುಮಾನವಾಗಿ ಒಂದಷ್ಟು ಹಣವನ್ನು ಆತನ ಖಾತೆಗೆ ಜಮೆ ಮಾಡುವುದಾಗಿ ಹೇಳಿದೆ!

English summary
PayPal user accidentally becomes a million times richer than Bill Gates. The online money-transfer company PayPal accidentally credited a man in Delaware a whopping US D 92,233,720,368,547,800. 56-year-old Chris Reynolds said that he was shocked when he received his monthly statement via e-mail from PayPal. PayPal has admitted the error and offered to donate an unspecified amount of money to a cause of Reynolds' choice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X