ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ಬಿಸಿಯೂಟ ದುರಂತ: 102 ಮಕ್ಕಳು ಅಸ್ವಸ್ಥ

By Srinath
|
Google Oneindia Kannada News

midday-meal-infection-102-girls-hospitalised-tamil-nadu
ಚೆನ್ನೈ, ಜುಲೈ 18: ಬಿಹಾರದ ಸರಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಮೃತಪಟ್ಟ ಮಕ್ಕಳ ಸಂಖ್ಯೆ 27ಕ್ಕೇರಿದೆ. ಈ ಮಧ್ಯೆ, ತಮಿಳುನಾಡಿನ ನೈವೇಲಿಯಲ್ಲಿಯೂ ಇಂತಹುದೇ ಅನಾಹುತ ನಡೆದಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ ಇಂದು ಗುರುವಾರ ಬಿಸಿಯೂಟ ಸೇವಿಸಿದ 102 ಬಾಲಕಿಯರು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆ ಪಾಲಾಗಿದ್ದಾರೆ.

ಅತ್ತ ಬಿಹಾರದಲ್ಲಿ ಪೋಷಕರು ಬಿಸಿಯೂಟ ದುರಂತದಲ್ಲಿ ಮಡಿದ ತಮ್ಮ ಮಕ್ಕಳನ್ನು ಶಾಲೆಯ ಆವರಣದಲ್ಲೇ ಮಣ್ಣು ಮಾಡುವ ಮೂಲಕ ತಮ್ಮ ಆಕ್ರೋಶ/ಹತಾಶೆಯನ್ನು ಹೊರಹಾಕಿದ್ದಾರೆ.

ಇದೇ ವೇಳೆ ಮಕ್ಕಳ ಸಾವಿನ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ 'ರಾಜ್ಯದಲ್ಲಿ ಎಲ್ಲ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ಕೊಡುವುದಕ್ಕೆ ಮುನ್ನ ಆಯಾ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಅಡುಗೆ ಮನಾಡಿದವರು ಮೊದಲು ತಾವೇ ರುಚಿ ನೋಡಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ.

ಮತ್ತೆ ನೈವೇಲಿ ಘಟನೆಗೆ ಬಂದರೆ 9 ರಿಂದ 16 ವರ್ಷದ ಶಾಲಾ ಬಾಲಕಿಯರು ಇಂದು ಮಧ್ಯಾಹ್ನ ಬಿಸಿಯೂಟ ಸೇವಿಸಿದ ತಕ್ಷಣ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥ ಬಾಲಕಿಯರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಕೆಟ್ಟ ಮೊಟ್ಟೆ ಹೊಟ್ಟೆ ಸೇರಿದ್ದರಿಂದ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಚಿಕಿತ್ಸೆ ನೀಡಲಾಗಿದ್ದು ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

English summary
102 girls of a government school in Neyvelli in Tamil Nadu are in hospital after their midday meal left them sick today (July 18). Since the Bihar midday meal tragedy, horror stories have been coming.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X