ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಎನ್ಕೌಂಟರ್: ಕಾಂಗ್ರೆಸ್ ರಾಜ್ಯಗಳಲ್ಲೇ ಹೆಚ್ಚು

By Srinath
|
Google Oneindia Kannada News

Fake encounters- Congress ruled states top list NHRC but not Gujarat,
ನವದೆಹಲಿ, ಜೂನ್ 18: ಇಡೀ ದೇಶವೇ ಇಶ್ರತ್ ಜಹಾನ್ ಎನ್ಕೌಂಟರ್ ಬಗ್ಗೆ ಚರ್ಚೆಯಲ್ಲಿ ಮುಳುಗಿದೆ. ಹೀಗಿರುವಾಗ NHRCಯ ತಾಜಾ ವರದಿಯೊಂದು ಹೊರಬಿದ್ದಿದ್ದು ಮೋದಿಗೆ ರಿಲೀಫ್ ನೀಡಿದೆ. ನಕಲಿ ಎನ್ಕೌಂಟರ್ ಪ್ರಕರಣಗಳು ಹೆಚ್ಚಾಗಿರುವ ಟಾಪ್ 10 ರಾಜ್ಯಗಳ ಪಟ್ಟಿಯಿಂದ ನರೇಂದ್ರ ಮೋದಿ ಸಾರಥ್ಯದ ಗುಜರಾತ್ ರಾಜ್ಯ ಬಹುದೂರವೇ ಇದೆ ಎನ್ನುತ್ತಿದೆ NHRC!

ಇದು ಕೇಂದ್ರ ಸರಕಾರದ ಅಧೀನದಲ್ಲಿರುವ ರಾಷ್ಟ್ರೀಯ ಮಾನವ ಹಕ್ಕು ಆಯೋಗವೇ ಕೊಡಮಾಡಿರುವ ಸರ್ಟಿಫಿಕೇಟ್ ಕಮ್ ವರದಿ. NHRC ವರದಿಯ ಪ್ರಕಾರ ಎನ್ಕೌಂಟರ್ ಪ್ರಕರಣಗಳು ಭಾರತದಲ್ಲಿ ಹೊಸದೇನೂ ಅಲ್ಲ ಎಂದೂ ಆಯೋಗ ಹೇಳಿದೆ.

ಗುಜರಾತಿನಲ್ಲಿ ಇದುವರೆಗೂ ಕೇವಲ 8 ಎನ್ಕೌಂಟರ್ ಪ್ರಕರಣಗಳು ನಡೆದಿದ್ದು, ಪಟ್ಟಿಯಲ್ಲಿ ಮೋದಿ ರಾಜ್ಯ 17ನೆಯ ಸ್ಥಾನದಲ್ಲಿದೆ ಎಂದು NHRC ತಿಳಿಸಿದೆ.

2009 ಮತ್ತು 2013ರ (ಫೆಬ್ರವರಿವರೆಗೂ) ನಡುವೆ ದಾಖಲಾಗಿರುವ ಎನ್ಕೌಂಟರ್ ಪ್ರಕರಣಗಳ ಬಗ್ಗೆ ವರದಿ ಮಾಡಿರುವ NHRC, ಈ ಅವಧಿಯಲ್ಲಿ ಭಾರತದಲ್ಲಿ ಒಟ್ಟು 555 ಪ್ರಕರಣಗಳು ನಡೆದಿವೆ ಎಂದು ದಾಖಲಿಸಿದೆ.

ಪ್ರಧಾನಿ ಸಿಂಗ್ ಪ್ರತಿನಿಧಿಸುವ ಅಸ್ಸಾಂಗೆ 3ನೆಯ ಸ್ಥಾನ:
ಹಾಗಾದರೆ ಎನ್ಕೌಂಟರ್ ಪ್ರಕರಣಗಳು ಹೆಚ್ಚಾಗಿರುವ ಟಾಪ್ 3 ರಾಜ್ಯಗಳ ಯಾವುವು ಅಂದರೆ ಮೊದಲನೆಯದಾಗಿ ಉತ್ತರ ಪ್ರದೇಶ -138 ಪ್ರಕರಣಗಳು, ಮಣಿಪುರ -62 ಪ್ರಕರಣಗಳು ಮತ್ತು ಮೂರನೆಯ ಸ್ಥಾನದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಪ್ರತಿನಿಧಿಸುವ ಅಸ್ಸಾಂನಲ್ಲಿ 53 ಪ್ರಕರಣಗಳು ನಡೆದಿವೆ.

ಉಳಿದಂತೆ, ನಾಲ್ಕನೆಯ ಸ್ಥಾನದಲ್ಲಿ ಪಶ್ಚಿಮ ಬಂಗಾಲ (35) ಮತ್ತು 5ನೆಯ ಸ್ಥಾನದಲ್ಲಿ ಜಾರ್ಖಂಡ್ (30) ಇದೆ. ಇನ್ನು, ಬಿಜೆಪಿ ಆಡಳಿತದ ಛತ್ತೀಸ್ ಗಢದಲ್ಲಿ 29 ಪ್ರಕರಣಗಳು ದಾಖಲಾಗಿವೆ.

English summary
Fake encounters- Congress ruled states top list but not Gujarat says NHRC recent report. According to the National Human Rights Commission (NHRC), Gujarat is ranked 17 among the Indian states with eight cases of alleged fake encounters. The NHRC has documented 555 cases of alleged fake encounters between 2009 and 2013 (till February) across the country and the top three states in the list are Uttar Pradesh (138 cases), Manipur (62) and Assam (53).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X