ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂ. ಟ್ರಾಫಿಕ್ ಸರಿದಾರಿಗೆ 5 ಸಿಗ್ನಲ್ ಮುಕ್ತ ಕಾರಿಡಾರ್

By Srinath
|
Google Oneindia Kannada News

ಬೆಂಗಳೂರು, ಜೂನ್ 18: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು 'ಕೆಂಪೇಗೌಡ' ಅವರ ಹೆಸರಿಡುವುದಕ್ಕೆ ಅನುಮೋದನೆ ಸಿಕ್ಕಿರುವ ಬೆನ್ನಲ್ಲೇ ಏರ್ ಪೋರ್ಟ್ ಗೆ ಸಮೀಪದಲ್ಲಿ ವಿಶಾಲವಾದ 'ವಿಜ್ಞಾನ ನಗರ' ಸ್ಥಾಪನೆಗೂ ಅನುಮೋದನೆ ಸಿಕ್ಕಿದೆ.
ಜತೆಗೆ, ಹಿಡಿತ ತಪ್ಪಿರುವ ಬೆಂಗಳೂರು ಟ್ರಾಫಿಕ್ ಅನ್ನು ಸರಿ ದಾರಿಗೆ ತರಲು 5 ಸಿಗ್ನಲ್ ಮುಕ್ತ ಕಾರಿಡಾರುಗಳನ್ನು ನಿರ್ಮಿಸಲು ತಥಾಸ್ತು ಅನ್ನಲಾಗಿದೆ.

ಯಲಹಂಕ ಬಳಿಯ ಬೆಲ್ಲದಹಳ್ಳಿಯಲ್ಲಿ 25 ಎಕರೆ ಜಮೀನಿನಲ್ಲಿ ದೇಶದ ಅತಿ ದೊಡ್ಡ ಸೈನ್ಸ್ ಸಿಟಿ ತಲೆಯೆತ್ತಲಿದೆ. ಇದಕ್ಕೆ ಅಗತ್ಯ ಜಮೀನು ಮಂಜೂರು ಮಾಡಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ವಿಧಾನಮಂಡಲ ಅಧಿವೇಶನ ನಡೆಯುತ್ತಿರುವುದರಿಂದ ಸಂಪುಟದ ನಿರ್ಣಯಗಳನ್ನು ಅಧಿಕೃತವಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿಲ್ಲ.

ಈಗಾಗಲೇ ವಿಮಾನ ನಿಲ್ದಾಣದ ಆಸುಪಾಸು ಅನೇಕ ಪ್ರತಿಷ್ಠಿತ, ಮಹತ್ವದ ಯೋಜನೆಗಳು ಸಾಕಾರಗೊಳ್ಳಲಿದ್ದು, ಎಲ್ಲವೂ ಬೆಂಗಳೂರು ಕೇಂದ್ರೀಕೃತವಾಗಿರುವುದಕ್ಕೆ ಸಂತೋಷ ಪಡಬೇಕೋ ಅಥವಾ ಆತಂಕದಿಂದ ನೋಡಬೇಕೋ ತಿಳಿಯದಾಗಿದೆ. ಇದಕ್ಕೆ ಕಾಲವೇ ಉತ್ತರಿಸಬೇಕು.

ಎಸ್ ಎಂ ಕೃಷ್ಣ 2002ರಲ್ಲಿ ಕಂಡ ಕನಸು:

ಎಸ್ ಎಂ ಕೃಷ್ಣ 2002ರಲ್ಲಿ ಕಂಡ ಕನಸು:

ಈ ಹಿಂದೆ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕಷ್ಣ ಅವರು 2002ರಲ್ಲಿ ಕಂಡ ಕನಸು ಇದು. ಅವರ ಸೈನ್ಸ್ ಸಿಟಿ ಯೋಜನೆಗೆ ಸಿಎಂ ಸಿದ್ದು ಬುಧವಾರ ಚಾಲನೆ ನೀಡಿದ್ದಾರೆ,.2ನೇ ವಿಶ್ವಯುದ್ಧದ ವೇಳೆ ಅಡಾಲ್ಫ್ ಹಿಟ್ಲರ್ ಬಳಸಿದ್ದ ಯುದ್ಧ ವಿಮಾನ, ಭಾರತೀಯ ರೈಲ್ವೆ ಮತ್ತು ಸೇನಾಪಡೆಯ ಮಹತ್ವದ ಯಂತ್ರಗಳು ಈ ಸೈನ್ಸ್ ಸಿಟಿಯಲ್ಲಿ ಪ್ರದರ್ಶನಗೊಳ್ಳಲಿವೆ.

ಯಾರೆಲ್ಲ ಕೈಜೋಡಿಸಲಿದ್ದಾರೆ?:

ಯಾರೆಲ್ಲ ಕೈಜೋಡಿಸಲಿದ್ದಾರೆ?:

IT, BT, Science ಅಂಡ್ Technology ಇಲಾಖೆಗಳು public private partnership model ಅನುಸಾರ ಈ ಯೋಜನೆಯನ್ನು ಕಾರ್ಯಗತಗೊಳಿಸಲಿದೆ.

planetarium, museum:

planetarium, museum:

ಮನುಷ್ಯಕೋಟಿಯ ಉಗಮಗದಿಂದ ಹಿಡಿದು ಆಧುನಿಕ ಮಾನವನ ಸಾಧನೆಗಳ ಅನಾವರಣ ಮಾಡುವುದರ ಜತೆಗೆ ನಭೋಮಂಡಲದ ಕೌತುಕವನ್ನು ಸಾದರಪಡಿಸುವ ಸ್ಪೇಸ್ ಮ್ಯೂಸಿಯಂ ಸಹ ಇಲ್ಲಿ ತಲೆಯೆತ್ತಲಿದೆ. ವಿಜ್ಞಾನ ಸಂಶೋಧನೆಗೆ ಒತ್ತು ನೀಡಲು ಈ ಕೇಂದ್ರ ಸ್ಥಾಪನೆಯಾಗುತ್ತಿದೆ.

ಸಂಪುಟದ ಇತರೆ ನಿರ್ಣಯಗಳು:

ಸಂಪುಟದ ಇತರೆ ನಿರ್ಣಯಗಳು:

* ಸಿಎನ್ಆರ್ ರಾವ್ ಅವರಿಗೆ ಸೇರಿದ ಜವಾಹರ ಲಾಲ್ ನೆಹರು ಇನ್ಸ್ ಟಿಟ್ಯೂಟಿಗೆ ಬೆಲ್ಲದ ಹಳಿ ಬಳಿ 5 ಎಕರೆ ಜಮೀನು ಮಂಜೂರು
* ಸರಕಾರಿ ಸಚಿವಾಲಯದ ಡಿ ಗ್ರೂಪ್ ನೌಕರರ ಸಂಘಕ್ಕೆ 15 ಎಕರತೆ ಜಮೀನು ಮಂಜೂರು.
* ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಶನ್ ಗೆ 10 ಎಕರೆ ಜಮೀನು ಮಂಜೂರು.

ಬಿಬಿಎಂಪಿ 5 ಸಿಗ್ನಲ್ ಮುಕ್ತ ಕಾರಿಡಾರ್:

ಬಿಬಿಎಂಪಿ 5 ಸಿಗ್ನಲ್ ಮುಕ್ತ ಕಾರಿಡಾರ್:

ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆಯೊಂದಕ್ಕೆ ರಾಜ್ಯ ಸಂಪುಟ ಅಸ್ತು ಅಂದಿದೆ. ಐದು ಪ್ರಮುಖ ರಸ್ತೆಗಳನ್ನು ಸಿಗ್ನಲ್ ಮುಕ್ತ ಕಾರಿಡಾರ್ ಗಳನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಇದರ ಯೋಜನಾ ವೆಚ್ಚವು (450) ಅಧಿಕವಾಗಿರುವುದರಿಂದ ರಾಜ್ಯ ಸಂಪುಟದ ಅಂಗೀಕಾರ ಪಡೆಯಲಾಗಿದೆ.

1) ಡಾ. ರಾಜಕುಮಾರ್ ರಸ್ತೆಯ ಸರಕಾರಿ ಸಾಬೂನು ಸಾಬೂನು ಕಾರ್ಖಾನೆಯಿಂದ ಓಕಳೀಪುರ ಜಂಕ್ಷನ್.
2) ಮೈಸೂರು ರಸ್ತೆಯಿಂದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್.
3) ಮೇಖ್ರಿ ವೃತ್ತದಿಂದ ಹೋಪ್ ಫಾರಂ.
4) ವೆಲ್ಲಾರ ಜಂಕ್ಷನ್ ನಿಂದ ಕುಂದಲಹಳ್ಳಿ ಜಂಕ್ಷನ್.
5) ಫೋರಂ ಮಾಲ್ ಜಂಕ್ಷನ್ ನಿಂದ ವೆಲ್ಲಾರ ಜಂಕ್ಷನ್.

English summary
On July 17th, Siddaramaiah Cabinet sanctions 25 acres to to set up a Science City at Bellahalli near Yelahanka. The proposed city will have a planetarium and museums. Besides, the Cabinet is learnt to have given its nod to a proposal to increase the estimated cost of the five signal-free corridors in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X