ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಡಬಿದಿರೆ ವಿಗ್ರಹ ಕಳವು: ಆರೋಪಿಯ ಪತ್ನಿ ಜೈಲಿಗೆ

By Srinath
|
Google Oneindia Kannada News

moodabidri-idols-theft-2-arrested-sent-to-judicial-custody
ಮೂಡಬಿದಿರೆ, ಜುಲೈ 18: ಇಲ್ಲಿನ ಇತಿಹಾಸ ಪ್ರಸಿದ್ಧ ಜೈನ ಬಸದಿಯಲ್ಲಿ 15 ರತ್ನಖಚಿತ ವಿಗ್ರಹಗಳನ್ನು ನಿಗೂಢವಾಗಿ ಕಳುವು ಮಾಡಿದ್ದ ಪ್ರಮುಖ ಆರೋಪಿ ಸಂತೋಷದಾಸ್ ಅಲಿಯಾಸ್ ಘನಶ್ಯಾಂದಾಸ್ ಇನ್ನೂ ಪತ್ತೆಯಾಗಿಲ್ಲ.

ಆದರೆ ಅವನ ಪತ್ನಿ, ಪದವೀಧರೆ ದೀಪ್ತಿಮಯಿ ಮತ್ತು ಆಕೆಯ ತಂದೆಯನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದು, ಇಬ್ಬರಿಗೂ ಜುಲೈ 30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಮಧ್ಯೆ, ದೀಪ್ತಿಮಯಿ ಮತ್ತು ಆಕೆಯ ತಂದೆ ಕಳ್ಳತನದ ಬಗ್ಗೆಯಾಗಲಿ ಅಥವಾ ಸಂತೋಷದಾಸ ಎಲ್ಲಿದ್ದಾನೆ ಎಂಬುದರ ಬಗ್ಗೆಯಗಾಲಿ ಪೊಲೀಸರ ಬಳಿ ಒಂಚೂರು ಬಾಯ್ಬಿಟ್ಟಿಲ್ಲ.

ಆದರೆ, ಸಂತೋಷದಾಸ್ ಮತ್ತು ದೀಪ್ತಿಮಯಿ ದಂಪತಿಗೆ 10 ತಿಂಗಳ ಮಗು ಇರುವುದರಿಂದ ದೀಪ್ತಿಮಯಿಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಜೈನಕಾಶಿಯಲ್ಲಿ ಜು. 5ರಂದು ಸಿದ್ಧಾಂತ ದರ್ಶನ ಮಂದಿರದಿಂದ ಕೋಟ್ಯಂತರ ರೂ ವೌಲ್ಯದ ವಿಗ್ರಹಗಳನ್ನು ದೋಚಿದ್ದ ಪ್ರಮುಖ ಆರೋಪಿ, ಛತ್ತೀಸ್‌ ಗಡದ ಸಂತೋಷದಾಸ್ ಯಾನೆ ಘನಶ್ಯಾಮದಾಸನಿಗೆ ಸಹಕಾರ ನೀಡಿದ ಆರೋಪದಲ್ಲಿ ಆತನ ಪತ್ನಿ ದೀಪ್ತಿಮಯಿ ಮೊಹಂತಿ ಮತ್ತು ಮಾವ ದಿಗಂಬರ್ ಮೊಹಂತಿಯನ್ನು ಬಂಧಿಸಲಾಗಿದೆ.

ಅಂತಾರಾಜ್ಯ ಚೋರ ಘನಶ್ಯಾಂ ದಾಸನ ಬಗ್ಗೆ ಸುಳಿವು ಪಡೆದ ಮಂಗಳೂರು ಪೊಲೀಸರು ಒರಿಸ್ಸಾಕ್ಕೆ ತೆರಳಿದ್ದರು. ದಿಗಂಬರ್ ಮೊಹಂತಿಯ ಮನೆಯ ಮೇಲೆ ದಾಳಿ ನಡೆಸಿ 1.12 ಕೆಜಿ ತೂಕದ ಗಟ್ಟಿ ಬಂಗಾರ, ರತ್ನದ ಹರಳುಗಳು ಮತ್ತು 2 ಲಕ್ಷ ರೂ. ನಗದು, ಬೆಲೆಬಾಳುವ ವಿಗ್ರಹಗಳು ಸೇರಿ ಸುಮಾರು 3 ಕೋಟಿ ರೂ. ಬೆಲೆಯ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು.

ದಿಗಂಬರ ಮೊಹಂತಿ ಒರಿಸ್ಸಾ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ 4ನೆ ದರ್ಜೆಯ ನೌಕರ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಘನಶ್ಯಾಮ್ ಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

English summary
Moodabidri Jain mutt Jain mutt theft case- Diptimayee Mohanty -Digambar Mohanty arrested in Bhubaneswar, Odisha sent to judicial custody on July 17 till July 30. The accused are Diptimayee Mohanty, wife of Santosh Das, the prime accused in the theft case, and Digambar Mohanty, his father-in-law. But the whereabouts of Santoosh is not yet known.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X